ಪತ್ನಿ ಜೊತೆ ಸಿಟ್ಟಾದ ಸ್ಮೃತಿ ಇರಾನಿ ಪತಿ! ಚಿತ್ರ ವೈರಲ್

ಮುಂಬೈ, ಅಕ್ಟೋಬರ್ 04: "ಪತ್ನಿ ಮೇಲೆ ಕೋಪಗೊಂಡ ಗಂಡನ ಲುಕ್" ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಇನ್ ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿರುವ ಪತಿ ಜುಬಿನ್ ಇರಾನಿ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಇನ್ ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವ ಸ್ಮೃತಿ ಇರಾನಿ, ತಮ್ಮ ಹಾಸ್ಯ ಮನೋಭಾವದ ಟ್ವೀಟ್ ಮೂಲಕ ಸದಾ ಸುದ್ದಿಯಲ್ಲಿರುವವರು. ಇದೀಗ ಅವರು ಪೋಸ್ಟ್ ಮಾಡಿರುವ ಅವರ ಪತಿಯ ಚಿತ್ರವೂ ತಮಾಷೆಗೆ ಹಾಕಿದ್ದು. ಹಣೆಯ ಮೇಲೆ ಕೈ ಇಟ್ಟುಕೊಂಡಿರುವ ಜುಬಿನ್ ಇರಾನಿ ಯಾವುದೋ ತಲೆಬಿಸಿಯಲ್ಲಿರುವಂತೆ ಕಾಣುವ ಈ ಚಿತ್ರಕ್ಕೆ ಸೃತಿ ಇರಾನಿ, 'ಪತ್ನಿಯ ಮೇಲಿನ ಕೋಪ' ಎಂಬ ಶೀರ್ಷಿಕೆ ನೀಡಿದ್ದಾರೆ.

Smrit Iranis New Instagram Pic Of Her Husband Goes Viral

ಇನ್ನೊಂದು ಪೋಸ್ಟ್ ನಲ್ಲಿ ಸ್ಮೃತಿ ಇರಾನಿ ಅವರು, "ಹೇ ಭಗವಾನ್ ನನ್ನ ತೂಕವನ್ನು ನಿನ್ನ ಬಳಿ ಕರೆಸಿಕೋ, ನನ್ನನ್ನಲ್ಲ" ಎನ್ನುತ್ತಿದ್ದರೆ, ಪತಿ, "ಅವಳನ್ನೂ ಕರೆಸಿಕೊಂಡರೂ ಪರವಾಗಿಲ್ಲ" ಎನ್ನುತ್ತಿರುವ ಚಿತ್ರವನ್ನೂ ಪೋಸ್ಟ್ ಮಾಡಿದ್ದರು.

Smrit Iranis New Instagram Pic Of Her Husband Goes Viral

ತಮ್ಮ ಕುಟುಂಬದಲ್ಲಿ ನಡೆವ ಹಾಸ್ಯ ಸಂಗತಿಗಳನ್ನು ಸದಾ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಳ್ಳುವಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಎಂದೂ ಹಿಂದೆ ಬಿದ್ದಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+