ಪಾಪ್ ಸಿಂಗರ್ ಮಿಕಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Posted By:
Subscribe to Oneindia Kannada

ಮುಂಬೈ, ಜುಲೈ 06: ಬಾಲಿವುಡ್ ನ ಜನಪ್ರಿಯ ಪಾಪ್ ತಾರೆ ಮಿಕಾ ಸಿಂಗ್ ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಮಿಕಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರೆಸಿ ರೂಪದರ್ಶಿಯೊಬ್ಬರು ದೂರು ನೀಡಿದ್ದಾರೆ.

ಆದರೆ, ಮುಂಬೈ ಮೂಲದ ರೂಪದರ್ಶಿಯ ದೂರಿನಿಂದ ಧೃತಿಗೆಡದ ಮಿಕಾ, ಪ್ರತಿ ದೂರನ್ನು ನೀಡಿದ್ದು, ರೂಪದರ್ಶಿಯಿಂದ ಬೆದರಿಕೆ ಕರೆ ಬರುತ್ತಿದೆ ಎಂದಿದ್ದಾರೆ.

Singer Mika Singh booked on molestation charge

ಸದ್ಯಕ್ಕೆ ಮುಂಬೈನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ಮಿಕಾ ಸಿಂಗ್ ವಿರುಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 354, 323 ಹಾಗೂ 504 ಅನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಲಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಸದ್ಯಕ್ಕೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನು ಬಂಧಿಸಿಲ್ಲ ಹಾಗೂ ವಿಚಾರಣೆ ನಡೆಸಿಲ್ಲ. ರೂಪದರ್ಶಿಯ ಆರೋಪಗಳನ್ನು ತಳ್ಳಿ ಹಾಕಿರುವ ಮಿಕಾ ಸಿಂಗ್, ಆಕೆ ನನ್ನ ಪರಿಚಯದವಳು ನಿಜ, ಆಗಾಗ ನನ್ನ ಅಪಾರ್ಟ್ಮೆಂಟ್ ಗೆ ಇತರೆ ಸ್ನೇಹಿತರ ಜೊತೆ ಬರುತ್ತಿದ್ದಳು, ಆದರೆ, ಇತ್ತೀಚೆಗೆ ನನಗೆ ಬೆದರಿಕೆ ಹಾಕಲು ಶುರು ಮಾಡಿದ್ದಳು. '5 ಕೋಟಿ ರು ನೀಡು ಇಲ್ಲದಿದ್ದರೆ ನಿನ್ನ ವೃತ್ತಿ ಬದುಕು ನಾಶ ಪಡಿಸುತ್ತೇನೆ' ಎಂದು ಬೆದರಿಸಿದಳು ನಾನು ಪ್ರತಿಕ್ರಿಯಿಸಿರಲಿಲ್ಲ ಎಂದು ಪೊಲೀಸರ ಮುಂದೆ ಮಿಕಾ ಹೇಳಿದ್ದಾರೆ. (ಪಿಟಿಐ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A 32-year-old model filed a complaint of molestation against Mika Singh even as the Bollywood singer lodged a counter-complaint alleging extortion.
Please Wait while comments are loading...