ಮಹಿಳೆಯ ಧ್ವನಿಯಾದ ಉತ್ತರ ಕರ್ನಾಟಕದ ಜೀವದನಿಯ ರೊಟ್ಟಿ ಸಿನಿಮಾ

ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿಯವರ ಕನ್ನಡ ಶಾರ್ಟ್‌ ಫಿಲ್ಮ್‌ ರೊಟ್ಟಿ ಅವಳ ಹೆಜ್ಜೆ ಕನ್ನಡ ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಜೂರಿ ಅವಾರ್ಡ್‌ ಮತ್ತು ಅಡಿಯನ್ಸ್‌ ಚಾಯ್ಸ್‌ ಅವಾರ್ಡ್‌ ಎರಡನ್ನೂ ಗೆದ್ದುಕೊಂಡಿದೆ. ಅವಳ ಹೆಜ್ಜೆ ಕನ್ನಡ ಶಾರ್ಟ್‌ ಫಿಲ್ಮ್‌ ಫೆಸ್ಟಿವಲ್‌ ಕೇವಲ ಮಹಿಳಾ ಚಿತ್ರೋದ್ಯಮಿಗಳಿಗೆ ಮೀಸಲಾಗಿದೆ. ರೊಟ್ಟಿ ಸಿನಿಮಾ ಜೂರಿ ಅವಾರ್ಡ್‌ ಗೆದ್ದಿರುವುದಕ್ಕೆ ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ ಸಂತಸ ವ್ಯಕ್ತ ಪಡಿಸಿದ್ದಾರೆ. ʻನಾನು ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಆದರೆ ಗ್ರಾಮೀಣ ಸೊಗಡಿನ ಕತೆಗೆ ಗೌರವ ಸಿಕ್ಕಿರುವುದಕ್ಕೆ ಖುಷಿಯಾಗಿದೆʼ ಎಂದು ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ ಹೇಳಿದ್ದಾರೆ.

ರೊಟ್ಟಿ ಶಾರ್ಟ್‌ ಫಿಲ್ಮ್‌ ಕಥೆ ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ಹಿನ್ನೆಲೆಯಲ್ಲಿ ಮೂಡಿ ಬಂದಿದೆ. ಸಾಮಾಜಿಕ ಅಡೆತಡೆಗಳ ಹೊರತಾಗಿಯೂ ಸಣ್ಣ ಉದ್ಯಮ ಸ್ಥಾಪಿಸಿ, ಆರ್ಥಿಕವಾಗಿ ಸ್ವತಂತ್ರರಾಗುವ ಮಹಿಳೆಯರ ಕಥೆಯನ್ನು ರೊಟ್ಟಿ ಸಿನಿಮಾ ಹೊಂದಿದೆ. ʻಹಳ್ಳಿಗಳಲ್ಲಿ ಮಹಿಳೆಯರದ್ದು ಹೋರಾಟದ ಜೀವನ. ಆದರೂ ಅವರಲ್ಲಿ ಆತ್ಮವಿಶ್ವಾಸ ಹಾಗೂ ಯೋಚನೆಗಳಿಗೆ ಬರವಿಲ್ಲ. ಅವರ ಹೋರಾಟದ ಜೀವನವನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸಲು ನಿರ್ಧರಿಸಿದ್ದೆ. ಈ ಸಿನಿಮಾ ನೋಡಿದ ಮಹಿಳೆಯರಲ್ಲಿ ಮುಂದೊಂದು ದಿನ ನಮಗಾಗಿ ಏನಾದರೂ ಸಾಧಿಸುವ ಭಾವನೆ ಮೂಡಿದರೆ ಸಾಕುʼ ಎಂದು ಹೇಳುತ್ತಾರೆ ನಿರ್ದೇಶಕಿ ಸುಪ್ರಿಯಾ ನಿಪ್ಪಾಣಿ.

Rotti Short Film Wins Double Honours

ಮಹಿಳಾ ಸಬಲೀಕರಣ, ಆತ್ಮ ನಿರ್ಭರ ಭಾರತ ಬಗ್ಗೆ ನಾವು ಕೇಳ್ತೇವೆ. ಆದರೆ, ಗ್ರಾಮೀಣ ಭಾಗದಲ್ಲಿ ಜನರಿಗೆ ಈ ಬಗ್ಗೆ ಗೊತ್ತೇ ಇರುವುದಿಲ್ಲ. ʻಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಗೊತ್ತೇ ಇರುವುದಿಲ್ಲ. ಅವುಗಳನ್ನು ದೃಶ್ಯಮಾಧ್ಯಮದಲ್ಲಿ ತೋರಿಸಿದಾಗ, ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಅದಕ್ಕೆ ಬೇಗ ಕನೆಕ್ಟ್‌ ಆಗ್ತಾರೆʼ ಎನ್ನುತ್ತಾರೆ ಸುಪ್ರಿಯಾ ನಿಪ್ಪಾಣಿ.
ರಾವಣನ ಗೆಟಪ್‌ನಲ್ಲಿ ಯಶ್‌ ಹೇಗಿರ್ತಾರೆ? ವೈರಲ್ ಆಯ್ತು ನೋಡಿ ಲಂಕಾಧಿಪತಿಯ ರಗಡ್‌ ಫೋಟೋ
ರಾವಣನ ಗೆಟಪ್‌ನಲ್ಲಿ ಯಶ್‌ ಹೇಗಿರ್ತಾರೆ? ವೈರಲ್ ಆಯ್ತು ನೋಡಿ ಲಂಕಾಧಿಪತಿಯ ರಗಡ್‌ ಫೋಟೋ

ವಿಶೇಷವೇನಂದರೆ, ನಿಪ್ಪಾಣಿಯವರು ಮೊದಲು ರೊಟ್ಟಿ ಲಘು ಚಿತ್ರವನ್ನು ಫಿಲ್ಮ್‌ ಫೆಸ್ಟಿವಲ್‌ಗಾಗಿಯೇ ನಿರ್ಮಿಸಿದ್ದರು. ಆದರೆ ಬರ್ತಾ ಬರ್ತಾ ರೊಟ್ಟಿ ಫಿಲ್ಮ್‌ ಚಿತ್ರೋತ್ಸವವನ್ನ ಮೀರಿ ಬೆಳೆಯಿತು. ಸಿನಿಮಾ ತರಬೇತಿ ಕೇಂದ್ರಗಳಲ್ಲಿ, ಮಹಿಳಾ ಕಾರ್ಯಕ್ರಮಗಳಲ್ಲಿ ಈ ಚಿತ್ರವನ್ನು ವಿಶೇಷವಾಗಿ ಪ್ರದರ್ಶಿಸಲಾಗುತ್ತಿತ್ತು.
ನಿಪ್ಪಾಣಿಯವರು ಬಯಸಿ ಚಿತ್ರೋದ್ಯಮಕ್ಕೆ ಬಂದವರಲ್ಲ. ನಿಪ್ಪಾಣಿಯವರು ವೃತ್ತಿಯಲ್ಲಿ ಹಿಂದಿ ಶಿಕ್ಷಕಿ. ಎಂಟು ವರ್ಷಗಳ ಹಿಂದೆ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು ಸಿನಿಮಾಗಳಲ್ಲಿ ತೊಡಗಿಸುವ ಉದ್ದೇಶದಿಂದಲೇ ಬೆಂಗಳೂರಿಗೆ ಕಾಲಿಟ್ಟರು. ಅವರಿಗೆ ಚಿತ್ರ ನಿರ್ಮಾಣದ ಯಾವುದೇ ಅಧಿಕೃತ ತರಬೇತಿ ಇರಲಿಲ್ಲ. ಕೇವಲ ಸ್ವಯಂ ಕಲಿಕೆಯ ಮೂಲಕವೇ ಚಿತ್ರ ನಿರ್ಮಾಣದಲ್ಲಿ ಸೈ ಎನಿಸಿಕೊಂಡರು.

ಕೋವಿಡ್‌ ನಂತರ ಊರಿಗೆ ಹಿಂದಿರುಗಿದ ನಿಪ್ಪಾಣಿ, ಸ್ವತಂತ್ರವಾಗಿ ಲಘು ಸಿನಿಮಾ ನಿರ್ಮಾಣದಲ್ಲಿ ತೊಡಗಿಸಿಕೊಂಡರು. ನಿಪ್ಪಾಣಿಯವರು ನಿರ್ಮಿಸಿ, ನಿರ್ದೇಶಿಸಿ ನಟಿಸಿದ ಶಾರ್ಟ್‌ ಫಿಲಂ ರೊಟ್ಟಿ. ʻಶಾರ್ಟ್‌ ಫಿಲ್ಮ್‌ನಲ್ಲಿ ಲಾಭ ಬರುವುದಿಲ್ಲ. ಆ ಕಾರಣಕ್ಕೆ ನಿರ್ಮಾಪಕರು ಸಿಗುವುದಿಲ್ಲ. ಆದರೆ ಒಳ್ಳೆಯ ಕಥೆ ಇದ್ದರೆ, ಆ ಪ್ರಯತ್ನಕ್ಕೂ ಕೈ ಹಾಕಬಹುದುʼ ಎಂದು ಹೇಳುತ್ತಾರೆ ನಿಪ್ಪಾಣಿ.

ಸಾನ್ವಿ ಸುದೀಪ್ ಕೈಹಿಡಿಯುವ ಹುಡುಗ ಹೀಗಿರಬೇಕಂತೆ; ಅಳಿಯನಿಗೆ ಪ್ರಿಯಾ ಸುದೀಪ್ ಇಟ್ಟಿದ್ದಾರೆ ಈ ಡಿಮ್ಯಾಂಡ್
ಸಾನ್ವಿ ಸುದೀಪ್ ಕೈಹಿಡಿಯುವ ಹುಡುಗ ಹೀಗಿರಬೇಕಂತೆ; ಅಳಿಯನಿಗೆ ಪ್ರಿಯಾ ಸುದೀಪ್ ಇಟ್ಟಿದ್ದಾರೆ ಈ ಡಿಮ್ಯಾಂಡ್

ಈಗ ರೊಟ್ಟಿ ಶಾರ್ಟ್‌ ಫಿಲ್ಮ್‌ ಚಿತ್ರೋತ್ಸವ ಮೀರಿ ಬೆಳೆಯುತ್ತಿದೆ. ಮತ್ತೊಂದು ಹೊಸ ಸಿನಿಮಾಕ್ಕೆ ಸುಪ್ರಿಯಾ ನಿಪ್ಪಾಣಿ ಸಜ್ಜಾಗುತ್ತಿದ್ದಾರೆ. ಅದೂ ಕೂಡಾ ಮಹಿಳೆಯರೇ ಕಥಾವಸ್ತುವಾಗಿರುವ ಸಿನಿಮಾ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+