ಗಾಯಕ ಅರ್ಜಿತ್ ಸಿಂಗ್ ಗೆ ರವಿ ಪೂಜಾರಿಯಿಂದ ಬೆದರಿಕೆ!
ಮುಂಬೈ, ಆಗಸ್ಟ್ 18: ಆಶೀಕಿ 2 ಖ್ಯಾತಿಯ ಗಾಯಕ ಅರ್ಜಿತ್ ಸಿಂಗ್ ಅವರಿಗೆ ಭೂಗತ ಪಾತಕಿ ರವಿ ಪೂಜಾರಿ ಕಡೆಯಿಂದ ಬೆದರಿಕೆ ಕರೆ ಬಂದಿದೆ. ಭಾರಿ ಮೊತ್ತದ ಹಣ ನೀಡುವಂತೆ ಬೆದರಿಕೆ ಒಡ್ಡಿದರು ಎಂದು ಅರ್ಜಿತ್ ಹೇಳಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ರವಿ ಪೂಜಾರಿ ಗ್ಯಾಂಗಿನಿಂದ ಸುಮಾರು 5 ಕೋಟಿ ರು ಮೊತ್ತದ ಬೇಡಿಕೆ ಬಂದಿದೆ. ಅದರೆ, ಅರ್ಜಿತ್ ಅವರು ಮೊತ್ತದ ಬಗ್ಗೆ ಮಾಧ್ಯಮಗಳ ಮುಂದೆ ಏನೂ ಹೇಳಿಲ್ಲ.
'ನಾನು ಸಾಮಾನ್ಯವಾಗಿ ಯಾವುದೇ ಅನಾಮಿಕ ನಂಬರ್ ನಿಂದ ಬರುವ ಕರೆಗಳನ್ನು ಸ್ವೀಕರಿಸುವುದಿಲ್ಲ. ಅದರೆ, ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ಚಾರ್ಜ್ ಮಾಡಿ ಮತ್ತೆ ಆನ್ ಮಾಡಿದಾಗ ತಕ್ಷಣ ಕರೆ ಬಂತು. ನಂಬರ್ ನೋಡದೆ ಕರೆ ಸ್ವೀಕರಿಸಿದೆ. ರವಿ ಪೂಜಾರಿ ಮಾತನಾಡುತ್ತಾರೆ ಎಂದು ಒಂದು ಧ್ವನಿ ಹೇಳಿತು. ನಂತರ ಕಾನ್ಫರೆನ್ಸ್ ಕಾಲ್ ನಲ್ಲಿ ರವಿ ಪೂಜಾರಿ ಮಾತನಾಡಿ, ಭಾರಿ ಮೊತ್ತದ ಹಣ ಡಿಮ್ಯಾಂಡ್ ಮಾಡಿದರು. [ರವಿ ಪೂಜಾರಿ ಗ್ಯಾಂಗ್ ಟಾರ್ಗೆಟ್ ಶಾರುಖ್ ಖಾನ್?]

ಅದರೆ, ಸಂಭಾಷಣೆ ವೇಳೆ ರವಿ ಪೂಜಾರಿ ನಾರ್ಮಲ್ ಆಗೇ ಮಾತನಾಡಿದರು. ನನಗಾಗಿ ಹಾಡು ಹಾಡ್ತೀರಾ ಎಂದು ಕೇಳಿದರು. ಟಚ್ ನಲ್ಲಿರುವಂತೆ ಹೇಳಿದರು. ಆದರೆ, ಅವರ ಗ್ಯಾಂಗಿನವರು ಭಾರಿ ಮೊತ್ತದ ಡಿಮ್ಯಾಂಡ್ ಇಟ್ಟರು ಎಂದು ಅರ್ಜಿತ್ ವಿವರಿಸಿದ್ದಾರೆ.[ಎಲ್ಲರಂತಲ್ಲದ ಮೋಹಕ ಗಾಯಕ ಅರ್ಜಿತ್ ಸಿಂಗ್]
ನನಗೆ ಈ ಕರೆ ಬಂದ ಮೇಲೆ ಪೊಲೀಸ್ ರಕ್ಷಣೆ ಬೇಕು ಎಂದೆನಿಸಲಿಲ್ಲ. ಹೀಗಾಗಿ ನಾನು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಮಾಧ್ಯಮದವರು ಕೂಡಾ ನನ್ನ ಬಗ್ಗೆ ಚಿಂತೆ ಬಿಟ್ಟು, ಬೇರೆ ಉತ್ತಮ ಸುದ್ದಿಗಳತ್ತ ಗಮನಹರಿಸಿದರೆ ಒಳ್ಳೆಯದು ಎಂದು ಅರ್ಜಿತ್ ಟ್ವೀಟ್ ಮಾಡಿದ್ದಾರೆ.
It's a humble request to media to stop bothering me about news. There are other important things happening in India.
— arijit singh (@raiisonai) August 17, 2015 ಆದರೆ, ಅರ್ಜಿತ್ ಅವರ ಮ್ಯಾನೇಜರ್ ಈ ಘಟನೆ ಬಗ್ಗೆ ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅರ್ಜಿತ್ ಬಳಿ ಎಷ್ಟು ಹಣ ಇಲ್ಲ ಎಂದು ತಿಳಿದ ಮೇಲೆ ಗ್ಯಾಂಗ್ ಗಾಗಿ ಮ್ಯೂಸಿಕ್ ಶೋ ನಡೆಸಿಕೊಡುವಂತೆ ರವಿ ಪೂಜಾರಿ ಕೇಳಿಕೊಂಡಿದ್ದಾರೆ ಎಂದು ಅರ್ಜಿತ್ ಸಿಂಗ್ ಅವರ ಮ್ಯಾನೇಜರ್ ದೂರಿನಲ್ಲಿ ಹೇಳಿದ್ದಾರೆ. (ಐಎಎನ್ ಎಸ್)












Click it and Unblock the Notifications