ನೀರವ್ ಮೋದಿ ಬಿಜೆಪಿಯ ಪಾರ್ಟ್ನರ್: ಶಿವಸೇನೆ ಆರೋಪ!

ಮುಂಬೈ, ಫೆಬ್ರವರಿ 17: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಬಿಜೆಪಿಯ ಪಾರ್ಟ್ನರ್ ಎನ್ನುವ ಮೂಲಕ ಬಿಜೆಪಿಯ ಬಗೆಗಿನ ತನ್ನ ಮುನಿಸನ್ನು ಮತ್ತೊಮ್ಮೆ ಪ್ರಕಟಿಸಿದೆ ಶಿವಸೇನೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‍ ನ (ಪಿಎನ್ ಬಿ) ಮುಂಬೈ ಶಾಖೆಯೊಂದರಲ್ಲಿ 11,500 ಕೋಟಿ ರೂ.ಗಳ ವಂಚನೆ ಮತ್ತು ಅಕ್ರಮ ವಹಿವಾಟು ಪ್ರಕರಣದ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಡಾವೋಸ್ ನಲ್ಲಿ ನಡೆದ ಜಾಗತಿಕ ಉದ್ಯಮಿಗಳ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದರು.

ಇದನ್ನೇ ಇಟ್ಟುಕೊಂಡು ಪ್ರತಿಪ್ಷಗಳೂ ಬಿಜೆಪಿಗೂ ನೀರವ್ ಮೋದಿಗೂ ಸಂಬಂಧ ಕಲ್ಪಿಸುತ್ತಿವೆ. ಇತ್ತೀಚೆಗಷ್ಟೇ ಎನ್ ಡಿಎ ಮೈತ್ರಿಕೂಟದಿಂದ ದೂರ ಸರಿದ ಶಿವಸೇನೆ ಬಿಜೆಪಿಯ ಮೇಲೆ ಮತ್ತೊಮ್ಮೆ ಟೀಕಾಸ್ತ್ರ ಪ್ರಯೋಗಿಸಿದೆ.

Shiv Sena alleges ' Nirav Modi is BJP's partner'

"ನೀರವ್ ಮೋದಿ ಬಿಜೆಪಿಯ ಪಾರ್ಟ್ನರ್ ಮತ್ತು ಚುನಾವಣೆಯ ಸಮಯದಲ್ಲಿ ಆತನ ಬಿಜೆಪಿಗೆ ಸಹಾಯ ಮಾಡಿದ್ದಾರೆ. ಇಲ್ಲಿ ರೈತರು ತಮ್ಮ 100-200 ರೂ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಅತ್ತ ನೀರವ್ ಮೋದಿಯಂಥವರು ಬಹುಕೋಟಿ ಪಂಗನಾಮ ಹಾಕಿ ತಲೆಮರೆಸಿಕೊಂಡಿರುತ್ತಾರೆ" ಎಂದು ಲೇವಡಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+