• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸದೃಢ ಪಕ್ಷ ಕಟ್ಟಲು ಕಾಂಗ್ರೆಸ್‌ಗೆ ಶಿವಸೇನೆ ಸಲಹೆ

|
Google Oneindia Kannada News

ಮುಂಬೈ, ಜೂನ್ 11: ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶಿವಸೇನೆ ಕಾಂಗ್ರೆಸ್‌ನ್ನು ಅಣಕಿಸಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ತನ್ನ ಪಕ್ಷದೊಳಗೆ ಸದೃಢ ತಂಡವೊಂದನ್ನು ರಚಿಸಲಿದ್ದಾರೆ ಎಂದು ಹೇಳಿದೆ.

ಜಿತಿನ್ ಪ್ರಸಾದ, ಜೋತ್ಯಿರಾದಿತ್ಯ ಸಿಂಧಿಯಾ, ಸಚಿನ್ ಪೈಲಟ್ ಯುವ ಮುಖಂಡರಾಗಿದ್ದು, ಅವರಿಂದ ಹೆಚ್ಚಿನದ್ದನ್ನು ನಿರೀಕ್ಷಿಸಲಾಗುತ್ತದೆ. ಅಹ್ಮದ್ ಪಟೇಲ್, ರಾಜೀವ್ ಸತಾವ್ ನಿಧನದ ನಂತರ ಕಾಂಗ್ರೆಸ್ ನಲ್ಲಿ ಈಗಾಗಲೇ ನಿರ್ವಾತವಿದೆ. ಯುವ ಮುಖಂಡರು ಬಿಜೆಪಿ ಹಾದಿಯಲ್ಲಿ ಸಾಗುವುದು ಒಳ್ಳೆಯದಲ್ಲಾ ಎಂದು ಶಿವಸೇನೆ ಹೇಳಿದೆ.

ಯುವ ನಾಯಕರಾಗಿದ್ದ ಜಿತಿನ್ ಪ್ರಸಾದ ಕಾಂಗ್ರೆಸ್ ಪಕ್ಷಕ್ಕೆ ಪ್ರಯೋಜನಕಾರಿಯಾಗಿರಿಲಲ್ಲ, ಬಿಜೆಪಿಯಲ್ಲೂ ಅದೇ ರೀತಿಯಲ್ಲಿ ಇರಲಿದ್ದಾರೆ ಎಂದು ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ರಾಹುಲ್ ಗಾಂಧಿ ಪರಮಾಪ್ತ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆರಾಹುಲ್ ಗಾಂಧಿ ಪರಮಾಪ್ತ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ

ಪ್ರಸಾದ ಅವರ ಕುಟುಂಬಸ್ಥರು ಕಾಂಗ್ರೆಸ್ ಪಕ್ಷದ ನಂಬಿಕಸ್ತರು. ಮನ್ ಮೋಹನ್ ಸಿಂಗ್ ಅವರ ಮಂತ್ರಿ ಮಂಡಲದಲ್ಲಿ ಪ್ರಸಾದ ಕೂಡಾ ಮಂತ್ರಿಯಾಗಿದ್ದರು. ಆದಾಗ್ಯೂ, ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದರು.

ಇದೀಗ ಅವರನ್ನು ಸೇರ್ಪಡೆ ಮಾಡಿಕೊಂಡು ಬಿಜೆಪಿ ಸಂಭ್ರಮಿಸುತ್ತಿದೆ. ಜಾತಿ ರಾಜಕಾರಣ ಇದರ ಹಿಂದೆ ಇದೆ. ಉತ್ತರ ಪ್ರದೇಶದಲ್ಲಿನ ಬ್ರಾಹ್ಮಣ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟು ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಶಿವಸೇನೆ ಹೇಳಿದೆ.

ದೇಶ ಸ್ಥಾಪನೆಯಲ್ಲಿ ಕಾಂಗ್ರೆಸ್ ಕೊಡುಗೆ ನೀಡಿದೆ. ತಳಮಟ್ಟದಿಂದ ಪಕ್ಷವನ್ನು ಸಂಘಟಿಸಬೇಕಾಗಿದೆ. ರಾಹುಲ್ ಗಾಂಧಿ ಈಗ ಪಕ್ಷದೊಳಗೆ ಸದೃಢ ತಂಡ ರಚಿಸಬೇಕಾಗಿದೆ ಎಂದು ಶಿವಸೇನೆ ಸಲಹೆ ನೀಡಿದೆ.

ಬಂಡಾಯ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲ, ಮುಂದೆ ಏನು ಮಾಡಬೇಕು, ಹೇಗೆ ಪಕ್ಷದ ಆಸ್ತಿತ್ವ ಉಳಿಸಿಕೊಳ್ಳಬೇಕೆಂಬ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ ನಡೆಯುತ್ತಿಲ್ಲ. ಮಹಾರಾಷ್ಟ್ರ, ಕೇರಳ, ಮತ್ತು ಕರ್ನಾಟಕ ಹೊರತುಪಡಿಸಿದಂತೆ ಉಳಿದ ಎಲ್ಲಾ ಕಡೆಗಳಲ್ಲಿ ಕಾಂಗ್ರೆಸ್ ಆಸ್ತಿತ್ವಕ್ಕಾಗಿ ಹೋರಾಡಬೇಕಾಗಿದೆ. ಈ ರಾಜಕೀಯ ಅಸಮಾತೋಲನ ಪ್ರಜಾಪ್ರಭುತ್ವಕ್ಕೆ ಹಾನಿಯಾಗಲಿದೆ ಎಂದು ಹೇಳಿದೆ.

English summary
The Shiv Sena on Friday described as ''hilarious the BJP's celebration over the induction of Uttar Pradesh leader Jitin Prasada into the party fold, but also said that Congress leader Rahul Gandhi will have to create a strong team in his party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X