ಹಿರಿಯ ಕಾಂಗ್ರೆಸ್ಸಿಗ ಸಂಜಯ್ ಝಾಗೆ ಕೊವಿಡ್ 19 ಪಾಸಿಟಿವ್

ಮುಂಬೈ, ಮೇ 22: ಹಿರಿಯ ಕಾಂಗ್ರೆಸ್ ಮುಖಂಡ, ಪಕ್ಷದ ವಕ್ತಾರ ಸಂಜಯ್ ಝಾ ಅವರಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಈ ಬಗ್ಗೆ ಸಂಜಯ್ ಅವರು ಟ್ವೀಟ್ ಮಾಡಿ ಕೊವಿಡ್ 19 ಪಾಸಿಟಿವ್ ಎಂದು ವರದಿ ಬಂದಿದೆ ಎಂದಿದ್ದಾರೆ.

ಸದ್ಯಕ್ಕೆ ಸಂಜಯ್ ಅವರಿಗೆ ರೋಗದ ಪ್ರಮುಖ ಲಕ್ಷಣಗಳಾದ ನೆಗಡಿ, ಕೆಮ್ಮು, ನಿರಂತರ ಜ್ವರ, ಬಳಲಿಕೆ ಯಾವುದೂ ಕಾಣಿಸಿಕೊಂಡಿಲ್ಲ. ಹೀಗಾಗಿ ರೋಗ ಲಕ್ಷಣಗಳಿಲ್ಲದ ಪ್ರಕರಣ(asymptomatic) ಎಂದು ವೈದ್ಯಾಧಿಕಾರಿಗಳು ಪರಿಗಣಿಸಿ ಹೋಂ ಕ್ವಾರಂಟೈನ್ ನಲ್ಲಿರುವಂತೆ ಸೂಚಿಸಿದ್ದಾರೆ.

"ನನಗೆ ಕೊವಿಡ್ 19 ಪಾಸಿಟಿವ್ ಎಂದು ಪರೀಕ್ಷಾ ವರದಿ ಬಂದಿದೆ. ರೋಗದ ಲಕ್ಷಣ ಕಾಣಿಸಿಕೊಂಡಿಲ್ಲ, ನಾನು ಇನ್ನು 10-12 ದಿನಗಳ ಮಟ್ಟಿಗೆ ಹೋಂ ಕ್ವಾರಂಟೈನ್ ನಲ್ಲಿರುತ್ತೇನೆ'' ಎಂದು ಸಂಜಯ್ ಟ್ವೀಟ್ ನಲ್ಲಿ ಹೇಳಿದ್ದಾರೆ.

Senior Congress leader Sanjay Jha tests positive for COVID-19

ಸಮುದಾಯದ ಮೂಲಕ ರೋಗ ಹರಡುವಿಕೆ, ಸೆಕಂಡರಿ ರೋಗದ ಹರಡುವಿಕೆ ಬಗ್ಗೆ ಎಚ್ಚರಿಕೆ ನೀಡಿ, ಆರೋಗ್ಯ ಇಲಾಖೆ ನಿರ್ದೇಶನಗಳನ್ನು ಪಾಲಿಸಿ ಎಂದಿದ್ದಾರೆ.

ಶಿವಸೇನಾದ ಪ್ರಿಯಾಂಕ ಚತುರ್ವೇದಿ, ಮಿಲಿಂದ್ ದಿಯೋರಾ, ಬಿಜೆಪಿ ಸಂಸದ ಮಾಜಿ ಕಾಂಗ್ರೆಸ್ಸಿಗ ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವಾರು ಮಂದಿ ಸಂಜಯ್ ಅವರಿಗೆ ಬೇಗ ಗುಣಮುಖರಾಗುವಂತೆ ಹಾರೈಸಿದ್ದಾರೆ.

ಮಹಾರಾಷ್ಟ್ರದಲ್ಲಿ41,642 ಕೊರೊನಾವೈರಸ್ ಸೋಂಕಿತರಿದ್ದು, 1454 ಮಂದಿ ಮೃತಪಟ್ಟಿದ್ದಾರೆ. ಮುಂಬೈನಲ್ಲಿ 25000 ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+