ಕಷ್ಟ ಎಂದು ಬಂದರೆ, ದೇವಮಾನವನಿಂದ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯ
ಮುಂಬೈ, ಜುಲೈ 23: ಸ್ವಘೋಷಿತ ದೇವಮಾನವನೊಬ್ಬನನ್ನು ಮಹಾರಾಷ್ಟ್ರ ಪೊಲೀಸರು ಸೋಮವಾರ ಬಂಧಿಸಿದ್ದು, ತನ್ನ ಪುರುಷ ಅನುಯಾಯಿಗಳು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ.
ಮೂವತ್ತೆಂಟು ವರ್ಷದ ಅಸೀಫ್ ನೂರಿ ಬಂಧಿತ. ತನ್ನ ಅನುಯಾಯಿಗಳನ್ನು ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ವಿಡಿಯೋ ಮತ್ತು ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಬಗ್ಗೆ ಕೆಲವು ಪ್ರಜ್ಞಾವಂತರು ಪೊಲೀಸರಿಗೆ ದೂರು ನೀಡಿದ್ದರು.
ತಮ್ಮ ಸಮಸ್ಯೆಗಳನ್ನು ಬಗೆಹರಿಸುವಂತೆ ಅಪಾರ ಸಂಖ್ಯೆಯಲ್ಲಿ ಭಕ್ತರು ನೂರಿ ಬಳಿಗೆ ಬರುತ್ತಿದ್ದರು. ಹಾಗೆ ಬಂದವರು ಪರಸ್ಪರ ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವಂತೆ ಈ ಸ್ವಯಂಘೋಷಿತ ದೇವಮಾನವನು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ಭಾನಿಯ ಮರಾಠವಾಡದ ದರ್ಗಾ ರಸ್ಗೆಯಲ್ಲಿರುವ ಮದರಸಾದಲ್ಲಿ ಈ ನೂರಿ ವಾಸವಿದ್ದ. ತನ್ನ ಕೃತ್ಯಕ್ಕಾಗಿ ಮದರಸಾ ಬಳಸಿಕೊಂಡ ಆರೋಪದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 377 ಹಾಗೂ ಅಸಹಜ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿದ ಕೆಲ ದಿನಕ್ಕೆ ಇಂಥದ್ದೊಂದು ಪ್ರಕರಣ ಬಯಲಾಗಿದೆ. ಇದೇ ವೇಳೆ ಸಂತ್ರಸ್ತರು ಯಾರ ವಿರುದ್ಧವೂ ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಲ್ಲ.
ನೂರಿಯು ನವ ವಿವಾಹಿತರನ್ನೇ ಗುರಿ ಮಾಡಿಕೊಳ್ಳುತ್ತಿದ್ದ. ಒಂದಿಷ್ಟು ಕ್ರಮಗಳು ಅನುಸರಿಸಬೇಕಿದೆ ಎಂದು ಒಂದು ಕೋಣೆಗೆ ಕರೆದುಕೊಂಡು ಹೋಗಿ, ಪರಸ್ಪರರು ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಒತ್ತಾಯಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.












Click it and Unblock the Notifications