ಸಂಜು ಚಿತ್ರದ ಡೈಲಾಗ್ : ರಣ್ಬೀರ್ -ಅನುಷ್ಕಾ ವಿರುದ್ಧ ದೂರು

ಮುಂಬೈ, ಜೂನ್ 27: ಹಿಂದಿ ಚಿತ್ರರಂಗದ ಜನಪ್ರಿಯ ತಾರೆ ಸಂಜಯ್ ದತ್ ಅವರ ಜೀವನ ಆಧಾರಿತ ಚಿತ್ರ 'ಸಂಜು' ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ಆದರೆ, ಚಿತ್ರದ ಡೈಲಾಗ್ ವೊಂದರ ವಿರುದ್ಧ ಸೆಕ್ಸ್ ವರ್ಕರ್ಸ್ ತಿರುಗಿಬಿದ್ದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಜಯ್ ದತ್ ಅವರಿಗೆ ಆ ಕಾಲದ ಸ್ಟಾರ್ ನಟಿ ಮಾಧುರಿ ದೀಕ್ಷಿತ್ ಮೇಲೆ ಮೋಹ ಉಂಟಾಗಿತ್ತು. ಇಬ್ಬರ ನಡುವೆ ಪ್ರೇಮ ಬಂಧವಿತ್ತು. ಆದರೆ, 1993 ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಹೆಸರು ತಗುಲಿ ಹಾಕಿಕೊಂಡ ಬಳಿಕ, ಮಾಧುರಿ ಅವರು ಸಂಜಯ್ ಜತೆ ಮತ್ತೆ ಎಂದಿಗೂ ಕಾಣಿಸಿಕೊಳ್ಳಲಿಲ್ಲ. ಮಾಧುರಿ ಅಲ್ಲದೆ ಆ ಕಾಲದ ಎಲ್ಲಾ ಟಾಪ್ ಹೀರೋಯಿನ್ ಗಳ ಜತೆ ಸಂಜು ಅಫೇರ್ ಇತ್ತು ಎಂಬ ಗುಸುಗುಸು ಇತ್ತು.

Sanju Film Dialogue : Ranbir Kapoor & Anushka Sharma in trouble

ಈ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿರುವ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಅವರು ಈಗ ಬಿಡುಗಡೆ ಮಾಡಿರುವ ಟ್ರೈಲರ್ ನಲ್ಲಿ ಈ ಬಗ್ಗೆ ತುಣುಕೊಂದನ್ನು ಹಾಕಿದ್ದಾರೆ. 4 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿರುವ ಸಂಜು ಟ್ರೈಲರ್ ನಲ್ಲಿ 51 ಸೆಕೆಂಡುಗಳ ಬರುವ ಸೀನ್ ನಲ್ಲಿರುವ ಡೈಲಾಗ್ ಈಗ ವಿವಾದದ ಕೇಂದ್ರ ಬಿಂದು.

ನಿಮ್ಮ ಗರ್ಲ್ ಫ್ರೆಂಡ್ ಬಗ್ಗೆ ಹೇಳಿ ಎಂದು ಪತ್ರಕರ್ತೆ ಪಾತ್ರಧಾರಿ ಅನುಷ್ಕಾ ಶರ್ಮ ಅವರು ಸಂಜು (ರಣ್ಬೀರ್ ಕಪೂರ್ ) ಅವರನ್ನು ಕೇಳಿದಾಗ, ವೇಶ್ಯೆಯನ್ನು ಲೆಕ್ಕಹಾಕ್ಲಾ ಅಥವಾ ಬಿಟ್ಟು ಬಿಡ್ಲಾ, ಅವ್ರನ್ನು ಬಿಡುತ್ತೇನೆ. 308 ತನಕ ನೆನಪಿದೆ, ಸೆಫ್ಟಿಗಾಗಿ 350 ಎಂದು ಬರೆದುಕೊಳ್ಳಿ ಎನ್ನುತ್ತಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+