ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಠಾಕ್ರೆ ಸಿನಿಮಾ ನಿಷೇಧಿಸಲು ಯಾರಿಂದಲೂ ಸಾಧ್ಯವಿಲ್ಲ'

|
Google Oneindia Kannada News

ಮುಂಬೈ, ಡಿಸೆಂಬರ್ 28: ಶಿವಸೇನಾ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರ ಜೀವನ ಆಧಾರಿತ 'ಠಾಕ್ರೆ' ಸಿನಿಮಾದ ಟ್ರೇಲರ್ ವಿವಾದ ಹುಟ್ಟು ಹಾಕಿದೆ.

ಈ ಟ್ರೇಲರ್ ನಲ್ಲಿ ಕಂಡು ಬರುವ ಹಿಂಸಾಚಾರ, ದ್ವೇಷಪೂರಿತ ಭಾಷಣದಿಂದ ಚಿತ್ರದ ಬಿಡುಗಡೆಗೆ ಪ್ರತಿರೋಧ ಕಂಡು ಬರುವ ಸಾಧ್ಯತೆ ಹೆಚ್ಚಿದೆ ಎಂಬ ವರದಿಗಳಿವೆ.

Sanjay Raut on Nawazuddin Siddiqui film Thackeray: Nobody can ban it


ಈ ಬಗ್ಗೆ ಮಾತನಾಡಿದ ಶಿವಸೇನಾ ಮುಖಂಡ ಹಾಗೂ ಬಾಳಾ ಠಾಕ್ರೆ ಚಿತ್ರಕ್ಕೆ ಕಥೆ ಒದಗಿಸಿರುವ ಸಂಜಯ್ ರಾತ್ ಅವರು,'ಈ ಚಿತ್ರವನ್ನು ಯಾರೊಬ್ಬರೂ ನಿಷೇಧಿಸಲು ಸಾಧ್ಯವಿಲ್ಲ. ಸೆನ್ಸಾರ್ ಮಂಡಳಿ ಆಕ್ಷೇಪಗಳನ್ನು ಪರಿಹರಿಸಲಾಗುವುದು, ಇದು ಶಿವಸೇನಾ ಸ್ಥಾಪಕ ಠಾಕ್ರೆ ಅವರ ದೂರದೃಷ್ಟಿತ್ವವನ್ನು ಸಾರುವ ಚಿತ್ರವಾಗಿದೆ ಎಂದಿದ್ದಾರೆ.

ಬಾಳಾ ಠಾಕ್ರೆ ಕೊಲೆಗೆ ಸಂಚು ರೂಪಿಸಿದ್ದ ಲಷ್ಕರ್!ಬಾಳಾ ಠಾಕ್ರೆ ಕೊಲೆಗೆ ಸಂಚು ರೂಪಿಸಿದ್ದ ಲಷ್ಕರ್!

ಈ ಚಿತ್ರದಲ್ಲಿ ಯಾವುದೇ ವೈಭವೀಕರಣ ದೃಶ್ಯಗಳಿಲ್ಲ, ಇಲ್ಲಿ ಬರುವ ದೃಶ್ಯ, ಭಾಷಣಗಳು ಈ ಹಿಂದೆ ನಡೆದ ನೈಜ ಘಟನೆಗಳನ್ನು ಆಧಾರಿಸಿದ್ದಾಗಿದೆ. ಬಾಳಾ ಸಾಹೇಬ್ ತಮ್ಮ ಜೀವತ ಅವಧಿಯಲ್ಲಿ ಅನೇಕರ ಮೇಲೆ ನಿಷೇಧ ಹೇರಿದ್ದರು, ಅದನ್ನು ಮರೆಯಲು ಸಾದ್ಯವೇ? ಠಾಕ್ರೆ ಜೀವನದ ಬಗ್ಗೆ ನಿರ್ಧರಿಸಲು ಸಿಬಿಎಫ್ ಸಿಗೆ ಏನು ಹಕ್ಕಿದೆ? ಎಂದು ಪ್ರಶ್ನಿಸಿದ್ದಾರೆ.

ಬಾಳಾ ಠಾಕ್ರೆಯಂಥವರು ನಮ್ಮಲಿಲ್ಲ, ಯಾಕೆ?ಬಾಳಾ ಠಾಕ್ರೆಯಂಥವರು ನಮ್ಮಲಿಲ್ಲ, ಯಾಕೆ?

ಏನಿದು ವಿವಾದ: ರಾಷ್ಟ್ರ ಪ್ರಶಸ್ತಿ ವಿಜೇತ ನವಾಜುದ್ದೀನ್ ಸಿದ್ದಿಕಿ ಅವರು ಪ್ರಧಾನ ಪಾತ್ರದಲ್ಲಿ ನಡೆಸಿರುವ ಚಿತ್ರದಲ್ಲಿ ಅನೇಕ ದೃಶ್ಯಗಳು ವಿವಾದಕ್ಕೆ ನಾಂದಿ ಹಾಡಿವೆ. ಬಾಬ್ರಿ ಮಸೀದಿ ಧ್ವಂಸ, 1992ರಲ್ಲಿ ಹಿಂದೂ- ಮುಸ್ಲಿಂ ಗಲಭೆ, ಭಾರತ- ಪಾಕಿಸ್ತಾನ ಸಂಬಂಧದ ಬಗ್ಗೆ ಅಂದಿನ ರಾಜಕಾರಣಿಗಳ ಹೇಳಿಕೆಗಳು ಎಲ್ಲವೂ ಚಿತ್ರದಲ್ಲಿದೆ.

ಜನವರಿ 25, 2019ಕ್ಕೆ ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಚಿತ್ರವು ತೆರೆಗೆ ಬರಲಿದೆ. ಚಿತ್ರದಲ್ಲಿ ಠಾಕ್ರೆ ಪಾತ್ರಧಾರಿ ಸಿದ್ದಿಕಿ ಮಿಂಚಿದ್ದಾರೆ.

ಆದರೆ, ಚಿತ್ರದ ಡೈಲಾಗ್ ಗಳು ಮರಾಠಿಗರು ಹಾಗೂ ದೇಶದ ಇತರೆ ಭಾಷಿಗರ ವಿರುದ್ಧ ದ್ವೇಷಪೂರಿತ ವಾತಾವರಣ ಸೃಷ್ಟಿಸಲಿದೆ. ದಕ್ಷಿಣ ಭಾರತೀಯರ ಬಗ್ಗೆ ಬಂದಿರುವ ಹೇಳಿಕೆಗಳು ಸರಿಯಿಲ್ಲ ಎಂದು ನಟ ಸಿದ್ದಾರ್ಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

English summary
Sanjay Raut, who has written the story of Thackeray, said that nobody can ban the film and that CBFC, which has raised objections on the movie, will understand the vision of the Shiv Sena founder.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X