ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಸೀದಿ ಕೆಡವಲು 17 ನಿಮಿಷ, ಮಂದಿರ ನಿರ್ಮಾಣಕ್ಕೆ ಏಕೆ ವಿಳಂಬ'

|
Google Oneindia Kannada News

ಮುಂಬೈ, ನವೆಂಬರ್ 23: ಆಯೋಧ್ಯೆಯ ವಿವಾದಿತ ತಾಣದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಶಿವಸೇನಾ ತನ್ನ ಹೋರಾಟ ಮುಂದುವರೆಸಿದೆ. ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು, ಅಯೋಧ್ಯೆಗೆ ಭೇಟಿ ನೀಡುವುದಕ್ಕೂ ಮುನ್ನ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

"ಬಾಬ್ರಿ ಮಸೀದಿಯನ್ನು ನಾವು 17 ನಿಮಿಷಗಳಲ್ಲಿ ಧ್ವಂಸ ಮಾಡಿದೆವು. ಮಂದಿರ ನಿರ್ಮಾಣಕ್ಕಾಗಿ ಕಾನೂನು ಜಾರಿಗೆ ತರಲು ಬಿಜೆಪಿಗೆ ಎಷ್ಟು ಸಮಯ ಬೇಕು," ಎಂದು ಶಿವಸೇನೆಯ ನಾಯಕ ಸಂಜಯ್​ ರಾವತ್​ ಪ್ರಶ್ನೆ ಮಾಡಿದ್ದಾರೆ.

Senas communal provocation: Demolished babri in 17 mins, says Sanjay Raut

"ರಾಮ ಮಂದಿರದ ವಿರುದ್ಧ ಇರುವವರು ಈ ದೇಶದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದ್ದಾರೆ. ಕಾನೂನು ಬರೆಯಲು ಎಷ್ಟು ಸಮಯ ಬೇಕು. ರಾಷ್ಟ್ರಪತಿ ಭವನದಿಂದ ಹಿಡಿದು ಉತ್ತರ ಪ್ರದೇಶದ ವರೆಗೆ ಬಿಜೆಪಿ ಸರ್ಕಾರ ಇದೆ. ಸುಗ್ರೀವಾಜ್ಞೆ ತರಲು ಬಿಜೆಪಿಗೆ ಇನ್ನೇನು ಬೇಕು," ಎಂದು ಅವರು ಪ್ರಶ್ನಿಸಿದ್ದಾರೆ.

ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಸುಗ್ರೀವಾಜ್ಞೆ ಜಾರಿಗೆ ತರುವಂತೆ ಕೇಂದ್ರದ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ವಿಶ್ವ ಹಿಂದುಪರಿಷತ್​ ಸೇರಿದಂತೆ ಹಲವು ಹಿಂದು ಸಂಘಟನೆಗಳು ಅಯೋಧ್ಯೆಯಲ್ಲಿ ಬೃಹತ್​ ಪ್ರತಿಭಟನೆ ಹಮ್ಮಿಕೊಂಡಿವೆ

English summary
Shiv Sena leader on Friday(November 23) said it took them 17 minutes to demolish the Babri masjid but it is taking unusually long for the government to bring in a law to build the Ram temple.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X