ಎಸ್ ಬಿಐ ಒಂದರಲ್ಲೇ 53 ಸಾವಿರ ಕೋಟಿ ಹಣ ಜಮೆ !

Posted By:
Subscribe to Oneindia Kannada

ಮುಂಬೈ ನವೆಂಬರ್ 12: ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜನ ಶುಕ್ರವಾರದವರೆಗೆ ತಮ್ಮ ಅಕೌಂಟಿನಲ್ಲಿ ಇಟ್ಟ ಹಣ ಎಷ್ಟು ಎಂದು ಕೇಳಿದವರು ಇಷ್ಟೋಂದು ಹಣ ಎಲ್ಲಿತ್ತಪ್ಪ ಎಂದು ಮೂಗಿನ ಮೇಲೆ ಬೆರಳನ್ನು ಇಟ್ಟುಕೊಳ್ಳುತ್ತಿದ್ದಾರೆ.

ಶುಕ್ರವಾರದವರೆಗೆ ಎಸ್ ಬಿಐನಲ್ಲಿ ಖಾತೆದಾರರು ನಗದನ್ನು ಜಮೆ ಮಾಡಿದ್ದು ಅಂದಾಜು 53 ಸಾವಿರ ಕೋಟಿಗೂ ಅಧಿಕ ಅಂದರೆ ಭಾರತದ ಆರ್ಥಿಕತೆಯಲ್ಲಿ ದೊಡ್ಡ ದೊಡ್ಡ ಯೋಜನೆಗಳಿಗೆ ಸರ್ಕಾರ ಬಿಡುಗಡೆ ಮಾಡುವಷ್ಟು ಹಣ ಎಂದಾಯಿತು. ಹಾಗೆಯೇ ಐಸ್ ಬಿಐನಲ್ಲಿಯೇ ಇಷ್ಟು ನಗದು ಎಂದುಕೊಂಡರೆ ಭಾರತದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್, ಖಾಸಗೀ ಬ್ಯಾಂಕುಗಳಲ್ಲಿ ಲೆಕ್ಕ ಹಾಕುತ್ತಾ ಹೋದರೆ ಸೊನ್ನೆಯ ಪಕ್ಕ ಮತ್ತೊಂದು ಸೊನ್ನೆಯನ್ನು ಹಾಕತ್ತಾ ಹಾಕುತ್ತಾ ದಶಕೋಟಿ, ಶತಕೋಟಿ ಮುಂದೆ ಎನು ಹೇಳಬೇಕು ಎಂಬುದೇ ತೋಚದಂತಾಗುತ್ತದೆ.[ನೋಟು ಬದಲಾವಣೆಗೆ ಕಾರಣ ಕಾಲಂನಲ್ಲಿ ಮೋದಿ ಹೆಸರು]

sbi

ಇನ್ನು ಭಾರತದ ಆರ್ಥಿಕತೆಯಲ್ಲಿ ಶೇ 3.7 ಹಣ ಎಸ್‌ ಬಿಐಯಲ್ಲಿಯೇ ಜಮಾವಣೆ ಆಗಿದೆ ಎಂಬುದು ಬ್ಯಾಂಕಿನ ವಾದ. ಜತೆಗೆ ಕಪ್ಪು ಹಣ ಹೊಂದಿರುವವರು ಈ ಪರಿಸ್ಥಿತಿಯಲ್ಲಿ ಸುಟ್ಟು ಹಾಕುವುದು ಇತರ ಚಟುವಟಿಕೆಯಿಂದ ಮಾಡಿದ ನಷ್ಟ ಎಷ್ಟಾಗುವುದೋ ತಿಳಿಯದಾಗಿದೆ. ಹಾಗೆಯೇ ತಾವು ಜಮೆ ಮಾಡುವ ಹಣ 2.5 ಲಕ್ಷಕ್ಕಿಂತ ಹೆಚ್ಚಿರುಬಾರದು ಎಂಬ ನಿಬಂಧನೆ ಹೆಚ್ಚು ಹಣ ಹೊಂದಿರುವವರಿಗೆ ತೊಂದರೆಯನ್ನುಂಟು ಮಾಡಿದೆ. ಅಲ್ಲದೆ ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಅವಕಾಶ ಇರುವುದರಿಂದ ಪ್ರತ್ಯೇಕ ಪ್ರತ್ಯೇಕವಾಗಿ ಬೇರೆ ಬೇರೆ ಬ್ಯಾಂಕಿನಲ್ಲಿ ಹಣವನ್ನು ಇಡುವವರಿಗೆ ತಕ್ಕ ಪಾಠ ಕಲಿಸಿದಂತಾಗಿದೆ.

ಇನ್ನೂ ಜನರು ತಮ್ಮ ಐನೂರು ಸಾವಿರ ನೋಟುಗಳನ್ನು ಬದಲಾಯಿಸಿಕೊಳ್ಳಲು ಡಿಸೆಂಬರ್ 30ರ ವರೆಗೆ ಅವಕಾಶ ನೀಡಲಾಗಿದೆ. ಅಲ್ಲಿಯವರೆಗೆ ಜಮೆಯಾಗುವ ಮತ್ತು ಜನರು ಹೊರತೆಗೆಯುವ ಹಣ ಎಷ್ಟು ಆಗುತ್ತದೆ ಎಂಬುದನ್ನು ಊಹಿಸಲೂ ಅಸಾಧ್ಯ. ಈಗಿನ ಪರಿಸ್ಥಿತಿಯಲ್ಲಿ ಜನರ ಹತ್ತಿರ ಇರುವ ನೂರು, ಐವತ್ತು, ಇಪ್ಪತ್ತು ನೋಟುಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಐನೂರು 2ಸಾವಿರ ಹೊಸ ನೋಟುಗಳಿಂದ ಬದಲಾವಣೆ ನಂತರ ಹೇಗಿರುತ್ತದೆ ಎಂಬುದನ್ನು ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
India’s largest lender State Bank of India said on Friday banks received deposits worth Rs 53,000 crore since the government put out of circulation high-value banknotes in a bid to drain illegal wealth
Please Wait while comments are loading...