Video: ತಾಯಿ ಸಾವಿನಿಂದ ನೊಂದು ರೈಲ್ವೆ ಹಳಿಗೆ ಹಾರಿದ ವ್ಯಕ್ತಿ!

ಮುಂಬೈ, ಫೆಬ್ರವರಿ.26: ಆತನ ತಾಯಿ ಸಾವಿನಿಂದ ಬಹಳಷ್ಟು ನೊಂದು ಹೋಗಿದ್ದನು. ಹೆತ್ತವಳು ಇಲ್ಲದ ಈ ಲೋಕ ತನಗೂ ಬೇಡ ಎಂದು ತೀರ್ಮಾನಿಸಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದವು ಮಾಡಿದ ಕೆಲಸ ಮಾತ್ರ ಎಂಥವರ ಎದೆಯಲ್ಲೂ ಭಯ ಹುಟ್ಟಿಸುವಂತಿತ್ತು.

ನೂರಾರು ಜನ ಪ್ರಯಾಣಿಕರ ಮಧ್ಯೆ ನಿಂತಿದ್ದ ಆ ವ್ಯಕ್ತಿ ರೈಲು ಬರುವುದನ್ನೇ ಎದುರು ನೋಡುತ್ತಾ ನಿಂತಿದ್ದರು. ಇನ್ನೇನು ರೈಲು ಹತ್ತಿರಕ್ಕೆ ಬರುತ್ತಿದ್ದಂತೆ ದಿಢೀರನೇ ರೈಲ್ವೆ ಹಳಿಗಳ ಮೇಲೆ ಎಗರಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಯತ್ನಿಸಿದನು.

RPF Personnel Saved A Man Who Attempt To Suicide At Mumbai Railways Station

ಮಹಾರಾಷ್ಟ್ರದ ಮುಂಬೈನಲ್ಲಿರುವ ವಿರಾರ್ ರೈಲ್ವೆ ನಿಲ್ದಾಣದಲ್ಲಿ ಇಂಥದೊಂದು ಘಟನೆ ನಡೆದಿದ್ದು, ತಕ್ಷಣಕ್ಕೆ ಅಲರ್ಟ್ ಆದ ರೈಲ್ವೆ ಪೊಲೀಸ್ ಪಡೆಯ ಸಿಬ್ಬಂದಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಹಳಿಯಿಂದ ಬದಿಗೆ ಕರೆದೊಯ್ದು ರಕ್ಷಿಸಿದರು.

ತಾಯಿ ಸಾವಿನಿಂದ ನೊಂದು ಆತ್ಮಹತ್ಯೆ ಯತ್ನ:

ಇತ್ತೀಚಿಗಷ್ಟೇ ತಾಯಿ ಮೃತಪಟ್ಟಿದ್ದರಿಂದ ನೊಂದ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದನು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿಯೇ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದನು ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ರೈಲು ಬರುತ್ತಿದ್ದಂತೆ ವ್ಯಕ್ತಿಯು ಹಳಿಗೆ ಹಾರಿದ ವಿಡಿಯೋವನ್ನು ಭಾರತೀಯ ರೈಲ್ವೆ ಅಧಿಕಾರಿಗಳು ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+