ರೋಸ್ ವ್ಯಾಲಿ ಹಗರಣ: ಶಾರುಖ್ ಒಡೆತನದ ಸಂಸ್ಥೆ ಆಸ್ತಿ ಜಪ್ತಿ
Recommended Video
ಶಾರುಖ್ ಆಸ್ತಿಯನ್ನು ಜಪ್ತಿ ಮಾಡಲು ಇಲ್ಲಿದೆ ಕಾರಣ | SRK | Bollywood | Asset | Filmibeat kannada
ಮುಂಬೈ, ಫೆಬ್ರವರಿ 04: ರೋಸ್ ವ್ಯಾಲಿ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ದಾಳಿ ಮುಂದುವರೆಸಿದ್ದು, ನಟ ಶಾರುಖ್ ಖಾನ್ ಒಡೆತನದ ಆಸ್ತಿ ಜಪ್ತಿ ಮಾಡಲಾಗಿದೆ.
ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಜಾರಿ ನಿರ್ದೇಶನಾಲಯವು 70.11 ಕೋಟಿ ರು ಜಪ್ತಿ ಮಾಡಿಕೊಂಡಿದೆ. ರೋಸ್ ವ್ಯಾಲಿ ಗ್ರೂಪ್ ಹಾಗೂ ಸಂಬಂಧಿಸಿದ ಸಂಸ್ಥೆಗಳ ಆಸ್ತಿ ಮೊತ್ತ ಇದಾಗಿದೆ.
ಇದಲ್ಲದೆ, ನಟ ಶಾರುಖ್ ಖಾನ್ ಒಡೆತನದ ಐಪಿಎಲ್ ಕ್ರಿಕೆಟ್ ತಂಡ ನಿರ್ವಹಿಸುವ ಕಂಪನಿ ಸೇರಿದಂತೆ ಮೂರು ಕಂಪನಿಗಳ ಮೇಲೆ ದಾಳಿ ನಡೆಸಿ 70 ಕೋಟಿ ರು ವಶ ಪಡಿಸಿಕೊಳ್ಳಲಾಗಿದೆ.

ಶಾರದಾ ಚಿಟ್ ಫಂಡ್ ಸೇರಿದಂತೆ ಹಲವು ಮನಿ ಡಬ್ಲಿಂಗ್ ಹಗರಣಗಳ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯವು ಈಗ ಸೆಲೆಬ್ರಿಟಿಗಳ ವಿಚಾರಣೆ ಶುರು ಮಾಡಿದೆ. ಮನಿಲಾಂಡ್ರಿಂಗ್ ನಿಯಂತ್ರಣ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಲಾಗಿದೆ.ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಸಿನಿಮಾ ನಟ, ನಟಿಯರ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ.












Click it and Unblock the Notifications