ರಾಹುಲ್ ಗಾಂಧಿಗೆ ಮಾತಿನ ಪೆಟ್ಟು ಕೊಟ್ಟ ಬಾಲಿವುಡ್ ನಟ ರಿಷಿ

Posted By:
Subscribe to Oneindia Kannada

ಮುಂಬೈ, ಸೆಪ್ಟೆಂಬರ್ 13: ದೇಶದ ಪ್ರತಿಯೊಂದು ರಂಗದಲ್ಲಿ ವಂಶ ಪಾರಂಪರ್ಯ ಆಡಳಿತಗಳು, ಅಧಿಕಾರಗಳು ಚಾಲ್ತಿಯಲ್ಲಿವೆ ಎಂದು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ತೀವ್ರವಾಗಿ ಟೀಕಿಸಿದ್ದಾರೆ.

ಸುಮಾರು 106 ವರ್ಷಗಳ ಭಾರತೀಯ ಸಿನಿಮಾದಲ್ಲಿ ಕಪೂರ್ ವಂಶದಿಂದಾದ ಸೇವೆಯೇ ಸುಮಾರು 90 ವರ್ಷಗಳಷ್ಟಿದೆ. ದೇವರ ದಯೆಯಿಂದ ಕಪೂರ್ ವಂಶ ತನ್ನ ನಾಲ್ಕನೇ ತಲೆಮಾರಿನ ಕುಡಿಯೂ ಬೆಳ್ಳಿ ತೆರೆಯಲ್ಲಿ ನಟಿಸುವುದನ್ನು ನೋಡಿದೆ.

ರಾಹುಲ್ ಗಾಂಧಿ ಮಾತಿನ ಚಾತುರ್ಯ, ಮೊನಚು ವ್ಯಂಗ್ಯ!

Rishi Kapoor On Rahul Gandhi's 'Dynasty' Comment: Earn People's Respect

ಪೃಥ್ವಿರಾಜ್ ಕಪೂರ್, ರಾಜ್ ಕಪೂರ್, ರಣಧೀರ್ ಕಪೂರ್ ಹಾಗೂ ರಣಬೀರ್ ಕಪೂರ್ - ಕಪೂರ್ ಕುಟುಂಬದ ನಾಲ್ಕು ತಲೆಮಾರುಗಳ ನಟರಾಗಿದ್ದಾರೆ. ಕಪೂರ್ ವಂಶಸ್ಥರಂತೆಯೇ ಉಳಿದ ಕುಟುಂಬಗಳಲ್ಲೂ ಅವರವರ ಮಕ್ಕಳು, ಮೊಮ್ಮಕ್ಕಳು ಚಿತ್ರನಟರಾಗಿ ಬೆಳೆದಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ನಾಲ್ಕೂ ತಲೆಮಾರುಗಳ ನಟರು ಜನರ ಪ್ರೀತಿ, ಅಭಿಮಾನ, ಆಶೀರ್ವಾದಗಳಿಂದ ಮಾತ್ರ ಗುರುತಿಸಲ್ಪಟ್ಟವರೇ ವಿನಃ ಯಾರೋ ಕಟ್ಟಿದ ಸಾಮ್ರಾಜ್ಯದಲ್ಲಿ ವಿರಾಜಮಾನರಾದವರಲ್ಲ.

ಅಮೆರಿಕದಲ್ಲಿ ರಾಹುಲ್: ಸ್ಮೃತಿ ಇರಾನಿ ಹೇಳಿಕೆಗೆ ರಮ್ಯಾ ವ್ಯಂಗ್ಯ

ವಂಶಪಾರಂಪರ್ಯದ ಬಗ್ಗೆ ಮಾತನಾಡುವಾಗ ಅದಕ್ಕೊಂದು ಸಾಧನೆಯ ಬಣ್ಣವಿರಬೇಕು. ಸುಮ್ಮನೇ ವಂಶಪಾರಂಪರ್ಯವಿದೆ ಎಂದು ಏನನ್ನೋ ಹೇಳುವುದಲ್ಲ.

ಹಾಗಾಗಿ, ವಂಶ ಪಾರಂಪರ್ಯತೆ ಬಗ್ಗೆ ಸುಮ್ಮನೇ ಇಂಥ ಬಾಲಿಶವಾದ ಭಾಷಣ ಮಾಡುವುದನ್ನು ಬಿಟ್ಟು ಕಠಿಣ ಪರಿಶ್ರಮ ಪಟ್ಟು ಜನರ ಪ್ರೀತಿ, ವಿಶ್ವಾಸ ಗಳಿಸಿರಿ ಎಂದು ರಿಷಿ ಕಪೂರ್ ಕಿಡಿ ಕಾರಿದ್ದಾರೆ.

ಅಹಿಂಸೆಯ ಪರಿಕಲ್ಪನೆಯ ಮೇಲೆ ದಾಳಿ ನಡೆಯುತ್ತಿದೆ : ರಾಹುಲ್ ಗಾಂಧಿ

ಮಂಗಳವಾರ (ಸೆ. 12), ಬರ್ಕ್ ಲೀಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ 'ವಂಶ ಪಾರಂಪರ್ಯ ರಾಜಕಾರಣ' ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದ್ದ ರಾಹುಲ್ ಗಾಂಧಿ, ''ವಂಶ ಪಾರಂಪರ್ಯತೆ ಎಂಬುದು ರಾಜಕೀಯ ಮಾತ್ರವಲ್ಲದೆ ಎಲ್ಲಾ ರಂಗಗಳಲ್ಲೂ ಇದೆ. ಭಾರತದ ವಾಣಿಜ್ಯ ಕ್ಷೇತ್ರದಲ್ಲಿ ಅಂಬಾನಿ ಪುತ್ರರು (ಮುಖೇಶ್ ಹಾಗೂ ಅನಿಲ್), ತಮಿಳುನಾಡು ರಾಜಕೀಯದಲ್ಲಿ ಕರುಣಾನಿಧಿ ಪುತ್ರ ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಮುಲಾಯಂ ಪುತ್ರ ಅಖಿಲೇಶ್, ಸಿನಿಮಾ ರಂಗದಲ್ಲಿ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್... ಹೀಗೆ ಎಲ್ಲವೂ ವಂಶಪಾರಂಪರ್ಯವಾಗಿ ಮುನ್ನಡೆಯುತ್ತಿದೆ ಎಂದಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood actor Rishi Kapoor is known for his outspokenness on social media, appeared to post a series of angry tweets as a reaction to Rahul Gandhi's speech at the University of California in Berkeley.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ