ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಧ್ಯಮ ಕ್ಷೇತ್ರದಲ್ಲಿ ರಿಲಯನ್ಸ್ ಭಾರಿ ಸಂಚಲನ!

By Srinath
|
Google Oneindia Kannada News

ಮುಂಬೈ, ಜೂನ್ 19: ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಮಾಧ್ಯಮ ಕ್ಷೇತ್ರದಲ್ಲಿ ಭಾರಿ ಸಂಚಲನವನ್ನುಂಟುಮಾಡಲು ಸಿದ್ಧತೆ ನಡೆಸಿದೆ. ಇಪ್ಪತ್ತರ ಹರೆಯದ ತಮ್ಮ ಪುತ್ರಿ ಇಶಾ ಅಂಬಾನಿಗೆ Reliance Jio Infocomm ಕ್ಷೇತ್ರದ ಹೊಣೆಗಾರಿಕೆ ವಹಿಸಿದ ಮೇಲೆ ಇದೀಗ ತಮ್ಮ ಪತ್ನಿ ನೀತಾ ಅಂಬಾನಿಯನ್ನು ಆಡಳಿತ ಮಂಡಳಿಯ ನಿರ್ದೇಶಕಿಯನ್ನಾಗಿ ನೇಮಿಸಿದ್ದಾರೆ.

ಅದು ಕುಟುಂಬಕ್ಕೆ ಸಂಬಂಧಿಸಿದ ವಿಷಯ. ಇನ್ನು ಕಂಪನಿಯ ಮಟ್ಟದಲ್ಲಿ ಹೇಳುವುದಾದರೆ ಬಹು ನಿರೀಕ್ಷಿತ ರಿಲಯನ್ಸ್‌ 4ಜಿ ಸೇವೆಯನ್ನು 2015 ಆಗಸ್ಟ್‌ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕೊಡಮಾಡಲು ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿಯೂ, ರಿಲಯನ್ಸ್ ಇಂಡಸ್ಟ್ರೀಸ್ ಮುಂದಿನ ಮೂರು ವರ್ಷಗಳಲ್ಲಿ ತನ್ನ ನಾನಾ ಉದ್ದಿಮೆಗಳಲ್ಲಿ 1.8 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಿದೆ.

ril-chairman-mukesh-ambani-wife-nita-ambani-first-woman-director

ರಿಲಯನ್ಸ್ ಜಿಯೊ ಇನ್ಫೋಕಾಮ್ ಬ್ರಾಡ್ ಬ್ಯಾಂಡ್ ಸೇವೆ ಸದ್ಯದಲ್ಲೇ ಪ್ರಾಯೋಗಿಕವಾಗಿ ಆರಂಭವಾಗಲಿದೆ. 2015ರ ಆಗಸ್ಟ್‌ ವೇಳೆಗೆ ವಾಣಿಜ್ಯೋದ್ದೇಶಕ್ಕೆ ಬಿಡುಗಡೆಯಾಗಲಿದೆ. 1 ಲಕ್ಷ ಸಿಬ್ಬಂದಿ ನೇಮಕಾತಿಯೂ ನಡೆಯಲಿದೆ. (ದೋಡ್ಡ ಉದ್ಯಮಿ ಮುಕೇಶ್ ಅಂಬಾನಿ ಮಕ್ಕಳ ಕಥೆ ಹೀಗಿದೆ!)

ರಿಲಯನ್ಸ್ ಜಿಯೊ ಇನ್ಫೋಕಾಮ್ ಬ್ರಾಡ್ ಬ್ಯಾಂಡ್ ಸೇವೆ ಮೊದಲ ಹಂತದಲ್ಲಿ 5 ಸಾವಿರ ನಗರ-ಪಟ್ಟಣ ಪ್ರದೇಶ ಮತ್ತು 2,15,000 ಗ್ರಾಮಗಳಿಗೂ ಪಸರಿಸಲಿದೆ. ಮುಂದೆ ಮುಂದೆ ದೇಶದ 16 ಲಕ್ಷ ಹಳ್ಳಿಗಳಲ್ಲೂ ರಿಲಯನ್ಸ್ ಜಿಯೊ ಇನ್ಫೋಕಾಮ್ ಬ್ರಾಡ್ ಬ್ಯಾಂಡ್ ಸೇವೆ ಲಭ್ಯವಾಗಲಿದೆ.

ಟಿವಿ ಕ್ಷೇತ್ರಕ್ಕೂ 4ಜಿ ಪರಿಚಯ: ಈಗಾಗಲೇ TV18 ಚಾನೆಲ್ ಸಮೂಹವನ್ನು ಖರೀದಿಸಿರುವ ರಿಲಯನ್ಸ್, ಮೊಬೈಲ್ ಜತೆಗೆ ಟೆಲಿವಿಶನ್ ಮಾಧ್ಯಮದಲ್ಲೂ 4ಜಿ ಸೇವೆಯನ್ನು ಒದಗಿಸಲಿದೆ. ಇನ್ನೂ 150 ಚಾನೆಲ್ಲುಗಳನ್ನು ಪ್ರಾರಂಭಿಸಲು Reliance Jio Infocomm ನಿರ್ಧರಿಸಿದೆ.

ಮುಕೇಶ್ ಅವರ ದೊಡ್ಡಪ್ಪ ರಮಣಿಕ್ ಲಾಲ್ ಅಂಬಾನಿ ಅವರು ( ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅಣ್ಣ) ತಮ್ಮ 90ನೇ ವಯಸ್ಸಿನಲ್ಲಿ ತೆರವುಗೊಳಿಸಿದ ಸ್ಥಾನವನ್ನು 50ರ ಹರೆಯದ ನೀತಾ ಅಂಬಾನಿ ಅಲಂಕರಿಸಿದ್ದಾರೆ. ಕಳೆದ 37 ವರ್ಷಗಳಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 2,40,000 ಕೋಟಿ ರೂ.ಗಳನ್ನು ಹೂಡಿದೆ. ಮುಂದಿನ ಮೂರು ವರ್ಷಗಳಲ್ಲಿ 1,80,000 ಕೋಟಿ ರೂ.ಗಳನ್ನು ಹೂಡಲಾಗುವುದು. ಮುಂದಿನ ಮೂರು ವರ್ಷಗಳ ಕಾಲ ಆರ್‌ಐಎಲ್‌ ಕಂಪನಿಗೆ ಸಂಕ್ರಮಣ ಘಟ್ಟವಾಗಿದೆ.

RIL ಕಂಪನಿಯ 40ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅಧ್ಯಕ್ಷ, 57 ವರ್ಷದ ಮುಕೇಶ್ ಅಂಬಾನಿ, ಸಮೂಹವು 1,80,000 ಕೋಟಿ ರೂ. ಗಳನ್ನು ಪೆಟ್ರೋಕೆಮಿಕಲ್ ಘಟಕಗಳು, ಇಂಧನ ವಹಿವಾಟು ವಿಸ್ತರಣೆ, ನೂತನ ರಿಟೇಲ್ ಮಳಿಗೆಗಳು ಮತ್ತು ಟೆಲಿಕಾಂ ವಹಿವಾಟು ವಿಸ್ತರಣೆಗೆ ಬಂಡವಾಳ ಹೂಡಲಾಗುವುದು ಎಂದು ಹೇಳಿದ್ದಾರೆ.

English summary
Reliance Industries chairman Mukesh Ambani wife Nita Ambani becomes first woman director. Nita, 50, took the place of Mukesh's uncle Ramniklal H Ambani, who retired from the board at the age of 90.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X