ದೋಡ್ಡ ಉದ್ಯಮಿ ಮುಕೇಶ್ ಅಂಬಾನಿ ಮಕ್ಕಳ ಕಥೆ ಹೀಗಿದೆ!
ಮುಂಬೈ,
ಏಪ್ರಿಲ್ 25: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಕಂಪನಿಯ ಗ್ರಾಹಕ ಸಂವೇದಿ ಉದ್ಯಮದೊಳಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. id="toptextpromo"> id='are-slot-1' class='oiad oi-axt oiadv'>ಕಳೆದ
ಮೇ ತಿಂಗಳಲ್ಲಿ ಅಮೆರಿಕದ McKinsey & Co ಕಂಪನಿಯಲ್ಲಿ ಸಲಹಾಗಾರ್ತಿಯಾಗಿ ಸೇರಿ ಒಂದಷ್ಟು ಅನುಭವ ಪಡೆದಿರುವ 22 ವರ್ಷದ ಇಶಾ ಅಂಬಾನಿ ಅಪ್ಪನ ಕೋಟಿ ಕೋಟಿ ರೂ ಮೌಲ್ಯದ ಸಾಮ್ರಾಜ್ಯದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. Yale Universityಯಲ್ಲಿ ಮನಃಶಾಸ್ತ್ರ ಮತ್ತು ದಕ್ಷಿಣ ಏಷ್ಯಾ ಅಧ್ಯಯನ ವಿಷಯದಲ್ಲಿ ಕಳೆದ ವರ್ಷವಷ್ಟೆ ಪದವಿ ಗಳಿಸಿದ್ದರು.id='are-slot-2' class='oiad oi-axt oiadv'>

ರಿಟೇಲ್ ಮತ್ತು ಮಾಧ್ಯಮ ಕ್ಷೇತ್ರದ ಚುಕ್ಕಾಣಿ ಇಶಾ ಅಂಬಾನಿಗೆ
ಅಂದಹಾಗೆ ರಿಟೇಲ್ ಉದ್ಯಮ ಭಾರತದಲ್ಲಿ ಈಗ ಗರಿಗೆದರಿದೆ. ಅದರಲ್ಲಿ RIL ನಂಬರ್ ಒನ್ ಸ್ಥಾನದಲ್ಲಿದೆ. ಮಾಧ್ಯಮ ಕ್ಷೇತ್ರದಲ್ಲೂ ರಿಲಯನ್ಸ್ ಬಂಡವಾಳ ತೊಡಗಿಸಿದೆ. ಈ ಎರಡೂ ಉದ್ಯಮಗಳ ಮುಂದಾಳತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಕಂಪನಿ ಉನ್ನತ ಮೂಲಗಳು ತಿಳಿಸಿವೆ.

Reliance Jio Infocommಗೆ ಪತ್ರಕರ್ತರು ಬೇಕಿದ್ದಾರೆ
CNBC-TV18 ಸಮೂಹದಲ್ಲಿ RIL ಹೂಡಿಕೆ ಮಾಡಿದೆ. ಜತೆಗೆ 4G ಟೆಲಿಕಾಂ ಸೇವೆಗಾಗಿ (Reliance Jio Infocomm) ಕಂಪನಿಯು ಪತ್ರಕರ್ತರು ಮತ್ತು ಮಾಧ್ಯಮ ಪರಿಣತರನ್ನು ನೇಮಕ ಮಾಡಿಕೊಳ್ಳುತ್ತಿದೆ. ಪ್ರಸ್ತುತ Reliance Jio Infocomm ಉದ್ಯಮದ ಹೊಣೆಗಾರಿಕೆಯನ್ನು ಇಶಾ ಅಂಬಾನಿಯ ಅವಳಿ ಸೋದರ ಆಕಾಶ್ ಅಂಬಾನಿ ಹೊತ್ತಿದ್ದಾರೆ. ಆಕಾಶ್, ಬ್ರೌನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೆ.

ವಂಶ ಪಾರಂಪರ್ಯದಂತೆ ನಡೆದಿದೆ
ಆಕಾಶ್ ಮತ್ತು ಇಶಾ ಅವಳಿ ಮಕ್ಕಳು: ಧೀರೂಭಾಯಿ ಅಂಬಾನಿ ಅವರು ತಮ್ಮ ಪುತ್ರರಾದ ಮುಕೇಶ್ ಮತ್ತು ಅನಿಲ್ ಅವರುಗಳನ್ನು ಉದ್ಯಮ ರಂಗಕ್ಕೆ ತಂದಂತೆ ಮುಕೇಶ್ ಅಂಬಾನಿ ಸಹ ತಮ್ಮ ಮಕ್ಕಳನ್ನು ಉದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿಸಿದ್ದಾರೆ. ಮುಕೇಶ್ 24 ವರ್ಷದವರಾಗಿದ್ದಾಗ ಅವರ ಅಪ್ಪ ಧೀರೂಭಾಯಿ ಪೆಟ್ರೋಕೆಮಿಕಲ್ಸ್ ಉದ್ಯಮದಲ್ಲಿ ತೊಡಗಿಸಿದ್ದರು.

ಕೊನೆಯ ಪುತ್ರನಿಗೆ ಕ್ರಿಕೆಟ್ಟಿನಲ್ಲಿ ಅನಂತ ಆಸಕ್ತಿ
ಇನ್ನು, ಅಂಬಾನಿಯ ಕೊನೆಯ ಪುತ್ರ ಅನಂತ್ ಪ್ರಸ್ತುತ ಬ್ರೌನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅನಂತ್ ಅಂಬಾನಿ ಅಪ್ಪನಂತೆ ಉದ್ಯಮ ರಂಗದಲ್ಲಿ ಭವಿಷ್ಯ ಕಂಡುಕೊಳ್ಳುವುದು ಅನುಮಾನವಾಗಿದೆ. ಸ್ವತಃ ಕ್ರೀಡೆ ಅದರಲ್ಲೂ ಕ್ರಿಕೆಟ್ ಆಟದಲ್ಲಿ ಅನಂತ ಆಸಕ್ತಿ ಹೊಂದಿರುವ ಅನಂತ್ ಅಂಬಾನಿ ತಾಯಿಯಂತೆ Mumbai Indians ತಂಡದ ಮೂಲಕ IPL ಕ್ರಿಕೆಟ್ಟಿನಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.












Click it and Unblock the Notifications