ಸುಶಾಂತ್ ಸಿಂಗ್ ಆತ್ಮಹತ್ಯೆ: ಗೆಳತಿ ರಿಯಾಗೆ 10 ಗಂಟೆ ಪೊಲೀಸ್ ವಿಚಾರಣೆ

ಮುಂಬೈ, ಜೂನ್ 19: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಗೆಳೆತಿ ರಿಯಾ ಚಕ್ರವರ್ತಿ ಅವರನ್ನು ಮುಂಬೈನ ಬಾಂದ್ರಾ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Recommended Video

      ಭಾರತೀಯ ಯೋಧರ ಸಾವಿಗೆ ಕಂಬನಿ ಮಿಡಿದ ಅಮೆರಿಕ | Donald Trump | Narendra Modi | Oneindia Kannada

      ಸುಶಾಂತ್ ಸಾಯುವುದಕ್ಕೂ ಮುನ್ನ ರಿಯಾ ಅವರ ಜೊತೆ ಹೆಚ್ಚು ಆತ್ಮೀಯವಾಗಿದ್ದ ಹಿನ್ನೆಲೆ, ಸುಮಾರು 10 ಗಂಟೆಗಳ ಕಾಲ ಪ್ರತ್ಯೇಕವಾಗಿ ರಿಯಾ ಚಕ್ರವರ್ತಿ ವಿಚಾರಣೆ ಮಾಡಲಾಗಿದೆ.

      ಈ ವೇಳೆ ಯಶ್ ಚೋಪ್ರಾ ಅವರ ಯಶ್ ರಾಜ್ ಬ್ಯಾನರ್ ಜೊತೆ ಸುಶಾಂತ್ ಸಿಂಗ್ ತನ್ನ ಸಂಪರ್ಕವನ್ನು ಕಡಿತಗೊಂಡಿದ್ದರು. ತನ್ನನ್ನು ಕೂಡ ಆ ಸಂಸ್ಥೆ ಜೊತೆ ಸಂಪರ್ಕ ಕೊನೆ ಮಾಡು ಎಂದು ಸೂಚಿಸಿದ್ದರು ಎಂದು ಪೊಲೀಸರ ಬಳಿ ರಿಯಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

      Rhea Chakrabortys Police interrogation takes 10 hours

      ಸುಮಾರು 9 ಗಂಟೆಗೂ ಹೆಚ್ಚು ಕಾಲ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿದ ರಿಯಾ ಚಕ್ರವರ್ತಿ, ಠಾಣೆಯಿಂದ ಹೊರನಡೆದಾಗ, ಮಾಧ್ಯಮದವರ ಬಳಿಯೂ ಏನೂ ಮಾತನಾಡಿಲ್ಲ, ಕೈ ಮುಗಿದು ಸುಮ್ಮನೆ ಹೊರಟು ಹೋದರು.

      ಅಂದ್ಹಾಗೆ, ರಿಯಾ ಚಕ್ರವರ್ತಿ ಮತ್ತು ಸುಶಾಂತ್ ಸಿಂಗ್ ಪ್ರೀತಿಸುತ್ತಿದ್ದರು. ನವೆಂಬರ್ ತಿಂಗಳಿನಲ್ಲಿ ಮದುವೆಯಾಗಲು ಯೋಜಿಸಿದ್ದರು ಎನ್ನಲಾಗಿದೆ. ಈ ಅನುಮಾನದ ಮೇಲೆ ಪೊಲೀಸರು ರಿಯಾ ಅವರನ್ನು ಗಂಭೀರವಾಗಿ ವಿಚಾರಣೆಗೆ ಒಳಪಡಿಸಿ, ಖಾಸಗಿ ವಿಚಾರಗಳ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದಾರೆ. ಫೋನ್ ಮೆಸೆಜ್, ವಿಡಿಯೋ, ಫೋಟೋ ಶೇರ್ ಹಾಗೂ ಫೋನ್ ಕಾಲ್ ವಿವರಣೆ ಪಡೆದುಕೊಂಡಿದ್ದಾರೆ.

      Rhea Chakrabortys Police interrogation takes 10 hours

      ಸುಶಾಂತ್ ಕುಟುಂಬ ಸದಸ್ಯರು, ಕಾಸ್ಟಿಂಗ್ ನಿರ್ದೇಶಕ ಮುಖೇಶ್ ಚಬ್ರಾ, ರಿಯಾ ಚಕ್ರವರ್ತಿ ಸೇರಿದಂತೆ ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಈವರೆಗೂ ಬಾಂದ್ರಾ ಪೊಲೀಸರು ಹದಿಮೂರು ಜನರ ಹೇಳಿಕೆ ಪಡೆದಿದ್ದಾರೆ.

      ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿರುವ ಸುಶಾಂತ್ ಸಿಂಗ್ ರಜಪೂತ್ ಜೂನ್ 14 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಪತ್ತೆಯಾಗಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+