• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಶಾಂತ್ ಸಿಂಗ್ ಕೇಸ್: ರಿಯಾ ವಿರುದ್ಧ ದೋಷಾರೋಪಣ ಪಟ್ಟಿ

|

ಮುಂಬೈ, ಮಾರ್ಚ್ 5: ಬಾಲಿವುಡ್ ನಟ ದಿವಂಗತ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಸಿ ಬಿ ಇಂದು ಕೋರ್ಟಿಗೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ.

2020ರ ಜೂನ್ ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಸುಶಾಂತ್ ಸಾವು ಅನುಮಾನಸ್ಪದವಾಗಿದ್ದು, ಸಿಬಿಐ ಕೂಡಾ ತನಿಖೆ ನಡೆಸಿತ್ತು. ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿಬಿ) ತನಿಖೆ ನಡೆಸಿ 11,700 ಪುಟದ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದು, ಇದರಲ್ಲಿ 33 ಆರೋಪಿಗಳನ್ನು ಹೆಸರಿಸಿದ್ದು, 200 ಸಾಕ್ಷಿಗಳ ವಿವರಗಳನ್ನು ಎನ್ಡಿಪಿಎಸ್ ಕೋರ್ಟಿಗೆ ನೀಡಲಾಗಿದೆ.

ನಟ ಸುಶಾಂತ್ ಕೊಲೆಯಾಗಿದ್ದಾರೆ, ಸ್ವಾಮಿ ನೀಡಿದ 26 ಕಾರಣ

ಸುಶಾಂತ್ ಅವರ ಗೆಳತಿ ರಿಯಾ ಚಕ್ರವರ್ತಿ ಹಾಗೂ ಅವರ ಸೋದರ ಶೌವಿಕ್ ಚಕ್ರವರ್ತಿ, ಬಾಣಸಿಗ ದೀಪೇಶ್, ಸ್ಯಾಮುಯಲ್ ಮಿರಾಂಡ, ಅನೇಕ ಡ್ರಗ್ ಪೆಡ್ಲರ್ಸ್ ಹೆಸರನ್ನು ದೋಷಾರೋಪಣ ಪಟ್ಟಿಯಲ್ಲಿ ಸೇರಿಸಲಾಗಿದೆ. ಡಿಜಿಟಲ್ ರೂಪದಲ್ಲಿ 40, 000 ಪುಟಗಳಷ್ಟು ಚಾರ್ಜ್ ಶೀಟ್ ಕೂಡಾ ಲಭ್ಯವಿದ್ದು, ಆರೋಪಿಗಳು ನೀಡಲಾಗುತ್ತದೆ. ಈ ದೋಷಾರೋಪಣ ಪಟ್ಟಿಯ ಆಧಾರದ ಮೇಲೆ ವಿಚಾರಣೆ ಬಗ್ಗೆ ಕೋರ್ಟ್ ಇನ್ನು ತನ್ನ ನಿರ್ಧಾರ ಪ್ರಕಟಿಸಿಲ್ಲ.

ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣ

ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣ

ನಿಷೇಧಿತ ಡ್ರಗ್ಸ್ ಸೇವನೆ, ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದಕ ವಸ್ತು ನಿಯಂತ್ರಣ ಕಾಯ್ದೆ(NDPS) ಅಡಿಯಲ್ಲಿ ನಟಿ ರಿಯಾ ಸೇರಿದಂತೆ ಹಲವರ ಮೇಲೆ ಎಫ್ಐಆರ್ ಹಾಕಲಾಗುತ್ತದೆ. ಎನ್ ಡಿ ಪಿಎಸ್ ಕಾಯ್ದೆ ಸೆಕ್ಷನ್ 21, 21 ಸಿ, 27 ಎ, 27 ಬಿ, 29 ಹಾಗೂ ಐಪಿಸಿ ಸೆಕ್ಷನ್ 120 ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಕಿರುವ ಸೆಕ್ಷನ್ ಪ್ರಕರಣ ಆರೋಪಿಗಳ ಮೇಲಿನ ಆರೋಪ ಸಾಬೀತಾದರೆ ಕನಿಷ್ಠ 10 ರಿಂದ 20 ವರ್ಷ ಜೈಲುಶಿಕ್ಷೆ ಹಾಗೂ 1 ಲಕ್ಷ ರು ತನಕ ದಂಡ ವಿಧಿಸಬಹುದು.

ಪ್ರಕರಣಕ್ಕೆ ತಿರುವು ನೀಡಿದ್ದ ವಾಟ್ಸಾಪ್ ಚಾಟ್

ಪ್ರಕರಣಕ್ಕೆ ತಿರುವು ನೀಡಿದ್ದ ವಾಟ್ಸಾಪ್ ಚಾಟ್

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ನಟಿ ರಿಯಾ ಚಕ್ರವರ್ತಿ ಮತ್ತು ಸಹೋದರ ಶೋವಿಕ್ ಸೇರಿದ್ದಂತೆ ಅನೇಕ ಡ್ರಗ್ಸ್ ಪೆಡ್ಲರ್ ಗಳ ಜೊತೆಗಿನ ವಾಟ್ಸಪ್ ಚಾಟ್ ಬಹಿರಂಗವಾದ ಬಳಿಕ ಮನೆಗಳ ಮೇಲೆ ದಾಳಿ ನಡೆಸಿದ್ದರು. ಮಾದಕ ವಸ್ತು ನಿಯಂತ್ರಣ ಇಲಾಖೆ ಆಗಸ್ಟ್ 25, 2021ರಂದು ಸುಶಾಂತ್ ಸಿಂಗ್ ಪ್ರೇಯಸಿ ರಿಯಾ, ಸಹೋದರ ಶೋವಿಕ್, ಗೌರವ್ ಆರ್ಯ, ಜಯ ಸಹಾ, ಶ್ರುತಿ ಮೋದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಸಿತ್ತು.

ಚಂದ್ರನಲ್ಲಿ ಫ್ಲಾಟ್ ಖರೀದಿಸಿದ್ದ ಸುಶಾಂತ್, ಸಾವಿಗೆ ಆರ್ಥಿಕ ಬಿಕ್ಕಟ್ಟು ಕಾರಣವೆ?

ಮನಿ ಲ್ಯಾಂಡರಿಂಗ್ ಕೇಸ್ ಕೂಡಾ ಜಾರಿಯಲ್ಲಿದೆ

ಮನಿ ಲ್ಯಾಂಡರಿಂಗ್ ಕೇಸ್ ಕೂಡಾ ಜಾರಿಯಲ್ಲಿದೆ

ಪಾಟ್ನಾ ಪೊಲೀಸ್ ಎಫ್ ಐ ಆರ್ ಆಧರಿಸಿ ಇಡಿ ಇಲಾಖೆ ರಿಯಾ ಚಕ್ರವರ್ತಿ ಹಾಗು ಇನ್ನಿತರ 8 ಜನರ ವಿರುದ್ಧ ಮನಿ ಲ್ಯಾಂಡರಿಂಗ್ ಕೇಸ್ ನಮೂದಿಸಿದ್ದಾರೆ. ಈ ಕುರಿತಂತೆ ರಿಯಾ ವಿಚಾರಣೆ ಎದುರಿಸಿ ಸುಶಾಂತ್ ಜೊತೆಗಿನ ವ್ಯವಹಾರಿಕ ಸಂಬಂಧದ ಬಗ್ಗೆ ವಿವರ ನೀಡಿದ್ದಾರೆ.

ಸುಶಾಂತ್ ಸಿಂಗ್ ರಜಪೂತ ಜೊತೆ ಕೆಲಸ ಮಾಡಿರುವ ರಿಯಾ ಅವರ ಮ್ಯಾನೇಜರ್ ಶ್ರುತಿ ಮೋದಿಗೂ ಇಡಿ ಸಮನ್ಸ್ ನೀಡಿತ್ತು. ರಿಯಾ ಅವರ ಸಹೋದರ ಶೌವಿಕ್ ಚಕ್ರವರ್ತಿ ವಿರುದ್ಧ ಸಹ ದೂರು ದಾಖಲಾಗಿದೆ. ರಿಯಾ, ಶ್ರುತಿ ಮತ್ತು ಶೋಯಿಕ್ ಅವರ ಹೇಳಿಕೆಗಳನ್ನು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾಗಿದೆ. ಆದರೆ, ಇದೆಲ್ಲದರಿಂದ ಬಚಾವಾದರೂ ಈಗ ಶೌವಿಕ್ ಮೂಲಕ ರಿಯಾ ಸುಶಾಂತ್ ಗೆ ಡ್ರಗ್ಸ್, ಗಾಂಜಾ ನೀಡುತ್ತಿದ್ದಳು ಎಂಬ ಆರೋಪದಲ್ಲಿ ಸಿಲುಕುವ ಸಾಧ್ಯತೆಯಿದೆ.

ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ

ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ

ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ವಿಸೇರಾ ಪರೀಕ್ಷಾ ವರದಿ ಹೊರ ಬಂದಿದೆ. ಇದರಲ್ಲಿ ಯಾವುದೇ ರೀತಿ ಸಂಚು ಕಂಡು ಬಂದಿಲ್ಲ, ವಿಷಪ್ರಾಶನವಾಗಿಲ್ಲ ಎಂದು ಹೇಳಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದೆ. ಆದರೆ, ಬಲವಂತವಾಗಿ ನೇಣು ಹಾಕಿರುವ ಸಾಧ್ಯತೆ, ಆತ್ಮಹತ್ಯೆಗೆ ಪ್ರಚೋದನೆ, ಮಾನಸಿಕ ಹಿಂಸೆ ನೀಡಿರುವ ಸಾಧ್ಯತೆ ಬಗ್ಗೆ ತನಿಖಾಧಿಕಾರಿಗಳು ಗಮನ ಹರಿಸಿದ್ದು ತನಿಖೆ ಮುಂದುವರೆದಿದೆ.

ಈ ನಿಟ್ಟಿನಲ್ಲಿ ಪೊಲೀಸರು, ಸಿಬಿಐ ಅಧಿಕಾರಿಗಳು ಈಗಾಗಲೇ ಹಲವಾರು ಸೆಲೆಬ್ರಿಟಿಗಳು, ಸುಶಾಂತ್ ಆಪ್ತರನ್ನು ವಿಚಾರಣೆಗೊಳಪಡಿಸಿದ್ದಾರೆ. ಇದರಿಂದ ಸುಶಾಂತ್ ಒಂದು ವೇಳೆ ಆತ್ಮಹತ್ಯೆ ಮಾಡಿದ್ದು ಸಾಬೀತಾದರೂ, ಸಾವಿನ ಕಾರಣವಂತೂ ತಿಳಿಯಲಿದೆ.

English summary
Rhea Chakraborty and 32 others named in NCB chargesheet in Sushant Singh Rajput drugs case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X