ಮುಂಬೈನ ಈ ಬ್ಯಾಂಕ್ ಗ್ರಾಹಕರು 1,000ಕ್ಕಿಂತ ಹೆಚ್ಚು ಡ್ರಾ ಮಾಡಂಗಿಲ್ಲ!
ಮುಂಬೈ, ಏಪ್ರಿಲ್ 19: "ನಿಮ್ಮ ಬ್ಯಾಂಕ್ ನ ಖಾತೆದಾರರಿಗೆ ರು. 1,000ಕ್ಕಿಂತ ಹೆಚ್ಚು ವಿಥ್ ಡ್ರಾ ಮಾಡುವುದಕ್ಕೆ ಅವಕಾಶ ಕೊಡಬೇಡಿ" ಎಂದು ಮುಂಬೈನ ಸಿಟಿ ಕೋ ಆಪರೇಟಿವ್ ಬ್ಯಾಂಕ್ ಗೆ ಏಪ್ರಿಲ್ ಹದಿನೆಂಟರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ.
ಉಳಿತಾಯ ಖಾತೆಯೇ ಇರಲಿ, ಚಾಲ್ತಿ ಖಾತೆಯೇ ಇರಲಿ, ಅಥವಾ ಇನ್ಯಾವುದೇ ಬಗೆಯ ಖಾತೆಯಾದರೂ ಸರಿ, ರು. 1,000ಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳಲು ಅವಕಾಶ ನೀಡಬೇಡಿ ಎನ್ನಲಾಗಿದೆ. ಸಿಟಿ ಕೋ ಆಪರೇಟಿವ್ ಬ್ಯಾಂಕ್ ನಿಂದ ಹೊಸದಾಗಿ ಡೆಪಾಸಿಟ್ ತೆಗೆದುಕೊಳ್ಳುವುದಕ್ಕೆ, ಸಾಲ ವಿತರಣೆಗೆ, ಹೂಡಿಕೆಗೆ ಅಥವಾ ಹಣ ಪಡೆಯುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಒಪ್ಪಿಗೆ ಪಡೆಯಬೇಕು ಎಂದು ಹೇಳಲಾಗಿದೆ.

ಸನ್ನಿವೇಶದ ಆಧಾರದಲ್ಲಿ ನಿಯಮಗಳನ್ನು ಬದಲಿಸಲಾಗುವುದು ಎಂದು ಹೇಳಲಾಗಿದ್ದು, ಮೊದಲಿಗೆ ಆ ಬ್ಯಾಂಕ್ ನ ಲೈಸನ್ಸ್ ರದ್ದು ಮಾಡುವ ಆಲೋಚನೆ ಇತ್ತು. ಆದರೆ ಬ್ಯಾಂಕ್ ನ ಸ್ಥಿತಿ ಉತ್ತಮ ಆಗುವವರೆಗೆ ಕೆಲ ನಿಬಂಧನೆಗಳೊಂದಿಗೆ ವ್ಯವಹಾರ ಮುಂದುವರಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೂಚನೆ ನೀಡಿದೆ.












Click it and Unblock the Notifications