ಗುಜರಾತ್ ನಲ್ಲಿ ನಿಜವಾಗಿಯೂ ಗೆದ್ದಿದ್ದು ರಾಹುಲ್ ಕಾಂಗ್ರೆಸ್: ಶಿವಸೇನೆ

Posted By:
Subscribe to Oneindia Kannada

ಮುಂಬೈ, ಡಿಸೆಂಬರ್ 19: ಗುಜರಾತ್ ಅನ್ನು ಬಿಜೆಪಿ ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿದೆ. ಆದರೆ ಈ ಗೆಲುವನ್ನು ಪಡೆಯಲು ಬಿಜೆಪಿ ಪಟ್ಟ ಪಡಿಪಾಟಲು ನೋಡಿದರೆ 22 ವರ್ಷಗಳ ಸುದೀರ್ಘ ಆಡಳಿತಕ್ಕೆ ಈ ಬಾರಿ ಬ್ರೇಖ್ ಬೀಳೋದು ಖಂಡಿತ ಎಂದೆನ್ನಿಸಿದ್ದು ಸುಳ್ಳಲ್ಲ. ಗುಜರಾತ್ ವಿಧಾನ ಸಭೆ ಚುನಾವಣೆ ಫಲಿತಾಂಶದ ನಂತರ ಹಲವರು, ಇದು ಬಿಜೆಪಿ ಗೆಲುವಲ್ಲ, ಕಾಂಗ್ರೆಸ್ ಗೆಲುವು ಎಂದಿದ್ದಾರೆ.

ಸೋತು ಗೆದ್ದ ಕಾಂಗ್ರೆಸ್, ಗುಜರಾತ್ ನಲ್ಲಿ ಹೆಚ್ಚಿದ 'ಕೈ' ಮತಗಳಿಕೆ

ಗುಜರಾತ್ ವಿಧಾನಸಭೆ ಚುನಾವಣೆ 2017
ಪಕ್ಷ W 2012
ಬಿಜೆಪಿ 99 115
ಕಾಂಗ್ರೆಸ್ 77 61
ಜಿಪಿಪಿ 0 2
ಎನ್‌ಸಿಪಿ 1 2
ಇತರೆ 5 2

ಕಾಂಗ್ರೆಸ್ ಬೆಂಬಲಿಗರು ಹಾಗೆ ಹೇಳೋದೇನೋ ಸರಿ. ಆದರೆ ಶಿವಸೇನೆ ನಾಯಕರು ಸಹ ಈ ಗೆಲುವನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಇದು ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗೆಲುವು, ಗುಜರಾತ್ ನಲ್ಲಿ ನಿಜವಾಗಿಯೂ ಗೆದ್ದಿದ್ದು ಕಾಂಗ್ರೆಸ್ಸೇ ಎಂದು ವ್ಯಾಖ್ಯಾನಿಸುವ ಮೂಲಕ ಬಿಜೆಪಿ ಮೇಲಿನ ತಮ್ಮ ಮುನಿಸನ್ನು ಮತ್ತೊಮ್ಮೆ ಹೊರಹಾಕಿದ್ದಾರೆ.

Real winner of gujarat elections is Rahul-led Congress party: Shiv Sena

ಶಿವಸೇನೆ ಮುಖ್ಯಸ್ಥ ಸಂಜಯ್ ರೌತ್ ಮಾತನಾಡಿ, 'ಕಾಂಗ್ರೆಸ್ ಗುಜರಾತ್ ಅನ್ನು ಕಳೆದುಕೊಂದಿರಬಹುದು. ಆದರೆ ಅದು ಬಿಜೆಪಿಯನ್ನು ಸೋಲಿಸಿರುವುದು ಸುಳ್ಳಲ್ಲ' ಎಂದಿದ್ದಾರೆ.

ಡಿ.18 ರಂದು ಹೊರಬಿದ್ದ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಆದರೆ ಗುಜರಾತಿನಲ್ಲಿ ಕೇವಲ 99 (182) ಸ್ಥಾನವನ್ನಷ್ಟೇ ಪಡೆಯುವ ಮೂಲಕ ಕಾಂಗ್ರೆಸ್ ನ ಪ್ರಬಲ ಪ್ರತಿಸ್ಪರ್ಧೆಯನ್ನು ಎದುರಿಸಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
"Real winner of the Gujarat assembly elections is not BJP, but Rahul Gnadhi-led congress party" Shiv Sena reacted about Gujarat assembly elections 2017. BJP won both Gujarat and himachl pradesh in the elections.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ