ಆಸ್ಪತ್ರೆಗೆ ದಾಖಲಾದ ರೇಮಂಡ್ ಕಂಪನಿ ಮಾಜಿ ಮಾಲೀಕ

Posted By:
Subscribe to Oneindia Kannada

ಮುಂಬೈ, ಆಗಸ್ಟ್ 18: ಪ್ರತಿಷ್ಠಿತ ಬಟ್ಟೆ ತಯಾರಿಕಾ ಸಂಸ್ಥೆಯಾದ ರೇಮಂಡ್ಸ್ ಕಂಪನಿಯ ಸಂಸ್ಥಾಪಕರಾಗಿ, ಇದೀಗ ಸಮಸ್ತ ಆಸ್ತಿಯನ್ನು ಕಳೆದುಕೊಂಡು ಬಾಡಿಗೆ ಮನೆಯಲ್ಲಿ ಜೀವಿಸುತ್ತಿರುವ ಡಾ. ವಿಜಯ್ ಪತ್ ಸಿಂಘಾನಿಯಾ ಅವರು, ಎದೆ ನೋವಿನಿಂದಾಗಿ ಇಲ್ಲಿನ ಬ್ರೀಡ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರ (ಆಗಸ್ಟ್ 17) ಸಂಜೆ ಸುಮಾರಿಗೆ ದಕ್ಷಿಣ ಮುಂಬೈ ಕ್ಲಬ್ ನಲ್ಲಿದ್ದ ಸಿಂಘಾನಿಯಾ ಅವರಿಗೆ ಎದೆ ನೋವು ಕಾಣಿಸಿಕೊಂಡಿತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಕ್ಲಬ್ ಮೂಲಗಳು ತಿಳಿಸಿವೆ.

Raymond company's founder Vijaypat Singhania suffers chest pain, hospitalized

ಆಸ್ಪತ್ರೆಗೆ ದಾಖಲಾದ ಹೊತ್ತಿನಲ್ಲಿ ಅವರ ರಕ್ತದೊತ್ತಡ ತೀವ್ರಗತಿಯಲ್ಲಿ ಏರಿತ್ತು ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರಾದ ಡಾ. ಹೇಮಂತ್ ಥಾಕರ್ ತಿಳಿಸಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದ್ದು ಅವರನ್ನು 48 ಗಂಟೆಗಳ ಕಾಲ ನಿಗಾ ಘಟಕದಲ್ಲಿ ಇರಿಸಲಾಗುವುದು ಎಂದು ತಿಳಿಸಿದ್ದಾರೆ.

ಇದೇ ಅಕ್ಟೋಬರ್ ಗೆ ಸಿಂಘಾನಿಯಾ ಅವರಿಗೆ 79 ವರ್ಷ ತುಂಬಲಿದೆ. ದೀರ್ಘಕಾಲದಿಂದಲೂ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ದಾನಿಗಳ ನೆರವಿನಿಂದ ಅವರು, ಇದೇ ವರ್ಷ ಮಾರ್ಚ್ ನಲ್ಲಿ ಲಂಡನ್ ಗೆ ತೆರಳಿ ಅಲ್ಲಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇತ್ತೀಚೆಗೆ, ಸಮಸ್ತ ಆಸ್ತಿಯನ್ನು ಮಕ್ಕಳಿಗೆ ಬರೆದಿದ್ದ ಸಿಂಘಾನಿಯಾ ಅವರನ್ನು ಮಕ್ಕಳು ಮನೆಯಿಂದ ಹೊರಹಾಕಿದ್ದು, ಅವರೀಗ ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದಾರೆಂಬ ವಿಚಾರ ಹಲವಾರು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Barely a week after he had moved court to prevent his son from leaving him roofless in Mumbai, founder of RaymondBSE 4.44 %, Dr Vijaypat Singhania, suffered severe chest pain and had to be hospitalized on August 17, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X