ರಾಖಿ ಸಾವಂತ್ ತನ್ನ ದೇಹದ ಈ ಭಾಗವನ್ನು ದಾನ ಮಾಡುತ್ತಾರಂತೆ!

ಮುಂಬೈ ಆಗಸ್ಟ್ 27: ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ತಮ್ಮ ವಿಭಿನ್ನ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ನಟಿ ಪ್ರತೀಬಾರಿ ಸಂದರ್ಶನದಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಚರ್ಚೆಯಲ್ಲಿರುತ್ತಾರೆ. ಸದ್ಯ ಮತ್ತೊಮ್ಮೆ ರಾಖಿ ಸಾವಂತ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಅಂಗಾಂಗ ದಾನದ ಬಗ್ಗೆ ಅವರು ಹೇಳಿದ್ದು, ಕೇಳಿದ್ರೆ ನೀವೂ ಬೆಚ್ಚಿ ಬೀಳುತ್ತೀರಿ.

ಬಾಲಿವುಡ್ ಸೆಲೆಬ್ರಿಟಿಗಳ ಅಂಗಾಂಗ ದಾನದ ಪ್ರಶ್ನೆಗೆ ಉತ್ತರಿಸಿದ ರಾಖಿ ಸಾವಂತ್ ಅಚ್ಚರಿಯ ವಿಷಯ ಹೇಳಿದ್ದಾರೆ. ಇದರೊಂದಿಗೆ ತಾನು ಯಾವ ಅಂಗಾಂಗ ದಾನ ಮಾಡಲು ಇಚ್ಛಿಸುತ್ತೇನೆ ಎಂಬುದನ್ನೂ ಪ್ರಕಟಿಸಿದ್ದಾಳೆ. ಆದರೆ ಅವರು ದಾನ ಮಾಡಲು ಭಯಸುವ ಅಂಗಾಂಗ ಮೂತ್ರಪಿಂಡ, ಕಣ್ಣು, ಹೃದಯ ಅಲ್ಲ. ಅದನ್ನು ನೀವು ಕೇಳಿದರೆ ಒಂದು ಕ್ಷಣ ಮುಜುಗರಗೊಳ್ಳುವುದರಲ್ಲಿ ಎರಡು ಮಾತೇ ಇಲ್ಲ.

ಮಾಧ್ಯಮಗಳೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ರಾಖಿ ಸಾವಂತ್ ತನ್ನ ಅಂಗಾಂಗ ದಾನದ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಮತ್ತು ಅವರು ಅದರ ಬಗ್ಗೆ ದೊಡ್ಡ ಘೋಷಣೆಯನ್ನೂ ಮಾಡಿದ್ದಾರೆ. ಅಂಗಾಂಗ ದಾನದ ಕುರಿತು ಆಕೆಗೆ ಪ್ರಶ್ನೆಯನ್ನು ಕೇಳಿದಾಗ, ರಾಖಿ ಉತ್ತರಿಸಿದರು, 'ಹೌದು ಅನೇಕ ಜನರು ತಮ್ಮ ಕಣ್ಣುಗಳು, ತಮ್ಮ ಮೂತ್ರಪಿಂಡಗಳನ್ನು ದಾನ ಮಾಡುತ್ತಾರೆ ಆದರೆ ನಾನು ವಿಭಿನ್ನವಾಗಿ ಏನನ್ನಾದರು ದಾನ ಮಾಡಲು ಬಯಸುತ್ತೇನೆ. ಐಶ್ವರ್ಯಾ ರೈ ಕೂಡ ತನ್ನ ಸಾವಿನ ನಂತರ ನೇತ್ರದಾನ ಮಾಡುವುದಾಗಿ ಹೇಳಿದ್ದಾರೆ' ಎಂದು ರಾಖಿ ಹೇಳಿದ್ದಾರೆ.

Rakhi Sawant wants to donate this part of her body

ಐಶ್ವರ್ಯಾ ರೈ ಅವರನ್ನು ಪ್ರಸ್ತಾಪಿಸಿದ ನಂತರ, ರಾಖಿ ಸಾವಂತ್ ಅವರ ಆ ಭಾಗದ ಬಗ್ಗೆ ವಿವರಿಸುತ್ತಾ, 'ನಾನೇಕೆ ಅದೇ ಕೆಲಸವನ್ನು ಮಾಡಬೇಕು, ನಾನು ನನ್ನ ಸ್ತನವನ್ನು ದಾನ ಮಾಡಬೇಕೆಂದು ಯೋಚಿಸಿದೆ. ಹೌದು, ನನ್ನ ಸ್ತನಗಳು ತುಂಬಾ ಚೆನ್ನಾಗಿವೆ. ಆದ್ದರಿಂದ ನಾನು ಅವುಗಳನ್ನು ಮಾತ್ರ ದಾನ ಮಾಡುತ್ತೇನೆ' ಎಂದಿದ್ದಾರೆ. ಇದೀಗ ರಾಖಿ ಸಾವಂತ್ ಅವರ ಈ ಹೇಳಿಕೆಯನ್ನು ಕೇಳಿದ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ. ಸದ್ಯ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ರಾಖಿ ಸಾವಂತ್ ಇತ್ತೀಚಿನ ದಿನಗಳಲ್ಲಿ ತನ್ನ ಪ್ರೇಮ ಜೀವನದ ಬಗ್ಗೆ ಸುದ್ದಿಯಲ್ಲಿದ್ದಾಳೆ. ನಟಿ ಉದ್ಯಮಿ ಆದಿಲ್ ದುರಾನಿ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಪ್ರತಿದಿನ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ ಮತ್ತು ಇಬ್ಬರ ವಿಡಿಯೊಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+