ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಟ್ರರಂತೆ, ಹೌದೆ? ಯಾಕೆ?

Posted By:
Subscribe to Oneindia Kannada

ನವದೆಹಲಿ, ಮೇ 01: ದೇಶದ ಸೆಲೆಬ್ರಿಟಿ ಮಾಧ್ಯಮ ಪ್ರತಿನಿಧಿ, ಸಂಪಾದಕರ ಪೈಕಿ ಒಬ್ಬರೆನಿಸಿಕೊಂಡಿರುವ ಇಂಡಿಯಾ ಟುಡೇ ಸಂಪಾದಕ ರಾಜ್ ದೀಪ್ ಸರ್ದೇಸಾಯಿ ಅವರು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ತೊರೆದಿದ್ದಾರೆ.

ರಾಜ್ ದೀಪ್ ಸರ್ದೇಸಾಯಿ ಟ್ವಿಟ್ಟರ್ ಬಿಡಲು ಕಾರಣವೇನು? ಅವರ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆಯೇ? ರಾಜ್ ದೀಪ್ ಅವರು ನಿಜಕ್ಕೂ ಮೋದಿ ಭಕ್ತರಿಗೆ ಡೈರೆಕ್ಟ್ ಮೆಸೇಜ್ ಮೂಲಕ ನಿಂದಿಸುತ್ತಿದ್ದಾರೆಯೇ? ರಾಜ್ ದೀಪ್ ಅವರು ಅಗಸ್ಟಾ ವೆಸ್ಟ್ ಲ್ಯಾಂಡ್ ಡೀಲ್ ಫಲಾನುಭವಿಯೇ? ಎಂಬ ಅನೇಕ ಪ್ರಶ್ನೆಗಳು ಹರಿದಾಡುತ್ತಿವೆ. [ರಾಜದೀಪ್ ಸರ್ದೇಸಾಯಿ ಮೇಲೆ ಹಲ್ಲೆ, ಟ್ವಿಟ್ಟರ್ ನಲ್ಲಿ ಗುಲ್ಲು!]

ಜನವರಿ 16ರಂದು ಮೋದಿ ಪರ ಟ್ವೀಟ್ ಮಾಡುವ ಅವರ ಭಕ್ತರು ಬಳಸುವ ಭಾಷೆ ಬಗ್ಗೆ ಸರ್ದೇಸಾಯಿ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಅದೇ ರೀತಿ ಕೆಟ್ಟ ಭಾಷೆ ಬಳಕೆ ಪ್ರತಿಕ್ರಿಯೆ ಸಂದೇಶ ರಾಜ್ ದೀಪ್ ರಿಂದ ಸಿಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಡೈರೆಕ್ಟ್ ಮೆಸೇಜ್ ಸ್ಕ್ರೀನ್ ಶಾಟ್ಸ್ ಹಾಕುತ್ತಿದ್ದಾರೆ.

ರಾಜ್ ದೀಪ್ ಸರ್ದೇಸಾಯಿ ನಂತರ ಅವರ ಪತ್ನಿ ಸಾಗರಿಕಾ ಘೋಶ್, ಎನ್ಡಿಟಿವಿಯ ಬರ್ಖಾದತ್ ಅವರ ಮೇಲೂ ಯುಪಿಎ ಪರ ನಿಲುವು ಹೊಂದಿದ್ದೀರಿ ಎಂದು ಆರೋಪಿಸಿ ಟ್ವೀಟ್ ಮಾಡಲಾಗುತ್ತಿದೆ.

ರಾಜ್ ದೀಪ್ ಸರ್ದೇಸಾಯಿ ಹ್ಯಾಕ್ ಆಗಿದ್ದು ನಿಜವೇ?

ರಾಜ್ ದೀಪ್ ಸರ್ದೇಸಾಯಿ ಹ್ಯಾಕ್ ಆಗಿದ್ದು ನಿಜವೇ?

ರಾಜ್ ದೀಪ್ ಸರ್ದೇಸಾಯಿ ಈ ಹಿಂದೆ ಕೂಡಾ ಸಾರ್ವಜನಿಕರೊಡನೆ ನೇರಾ ನೇರ ಮಾತಿನ ಚಕಮಕಿಗೆ ಇಳಿದ ಘಟನೆ ನಡೆದಿದೆ. ಟ್ವಿಟ್ಟರ್ ನಿಂದ ಅವರು ಹೊರಕ್ಕೆ ಹೋಗಿದ್ದರೆ ಇದರಲ್ಲಿ ಅಚ್ಚರಿ ಏನಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಅಗಸ್ಟಾ ವೆಸ್ಟ್ ಲ್ಯಾಂಡ್ ಫಲಾನುಭವಿಯಾಗಿದ್ದಾರೆ

ಬಹುಕೋಟಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟತ್ ಹಗರಣದ ಫಲಾನುಭವಿಯಾಗಿದ್ದಾರೆ, ಹೀಗಾಗಿ ಸಾರ್ವಜನಿಕ ಮುಂದೆ ಉತ್ತರ ಕೊಡಲಾಗದೆ ಮರೆಯಾಗಿದ್ದಾರೆ ಎಂಬ ಟ್ವೀಟ್ ಗಳು ಬಂದಿವೆ.

ಬರ್ಖಾ ದತ್ ಕೂಡಾ ಜನರ ಟಾರ್ಗೆಟ್

ರಾಜ್ ದೀಪ್ ಸರ್ದೇಸಾಯಿ ನಂತರ ಪತ್ರಕರ್ತೆ ಬರ್ಖಾ ದತ್ ಕೂಡಾ ಜನರ ಟಾರ್ಗೆಟ್ ಆಗಿದ್ದಾರೆ.

ಟ್ವಿಟ್ಟರ್ ಹ್ಯಾಕ್ ಆಗಿದ ಬಳಿಕ ರಾಜ್ ದೀಪ್ ಟ್ವೀಟ್

ಟ್ವಿಟ್ಟರ್ ಹ್ಯಾಕ್ ಆಗಿದ ಬಳಿಕ ರಾಜ್ ದೀಪ್ ಟ್ವೀಟ್

ಟ್ವಿಟ್ಟರ್ ಹ್ಯಾಕ್ ಆಗಿದ ಬಳಿಕವೂ ರಾಜ್ ದೀಪ್ ಟ್ವೀಟ್ ಮಾಡಿದ್ದು ಹೇಗೆ? ಅಕೌಂಟ್ ನಿಷ್ಕ್ರಿಯವಾಗಿ ಬರೀ ನೇರ ಸಂದೇಶ ಮಾತ್ರ ಕಳಿಸಲು ಸಾಧ್ಯವೇ? ಎಂಬ ಪ್ರಶ್ನೆಗಳು ಉಳಿದಿವೆ. ಆದರೆ, ಅಕೌಂಟ್ ನಿಷ್ಕ್ರಿಯಗೊಳಿಸುವ ಬಗ್ಗೆ ರಾಜ್ ದೀಪ್ ಹೇಳಿದ್ದನ್ನು ಟ್ವೀಟ್ ನಲ್ಲಿ ಕಾಣಬಹುದು.

ಹ್ಯಾಕ್ ಆದ ಬಳಿಕ ಬಂದ ಮೆಸೇಜ್ ಗಳು

ಹ್ಯಾಕ್ ಆದ ಬಳಿಕ ಬಂದ ಮೆಸೇಜ್ ಗಳು

ಹ್ಯಾಕ್ ಆದ ಬಳಿಕ ಬಂದ ಮೆಸೇಜ್ ಗಳ ಸ್ಕ್ರೀನ್ ಶಾಟ್ ಗಳನ್ನು ಹಲವಾರು ಮಂದಿ ಹಾಕುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The last day of April 2016 saw renowned television journalist Rajdeep Sardesai deleting his Twitter account after alleging that his social microblogging site was hacked by some miscreants.
Please Wait while comments are loading...