ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ : ಮಹಾ ಮಳೆಗೆ ತತ್ತರಿಸಿದ ಮುಂಬೈ

By Mahesh
|
Google Oneindia Kannada News

ಮುಂಬೈ, ಸೆ. 20: ವಾಣಿಜ್ಯ ನಗರಿ ಮಹಾ ಮಳೆಗೆ ತತ್ತರಿಸಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದರೂ ಸಾರ್ವಜನಿಕರು ಧೃತಿಗೆಡದೆ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಮೂರು ವಾರಗಳ ನಂತರ ಮತ್ತೆ ಧಾರಾಕಾರ ಮಳೆಯಾಗಿದ್ದು, ಸಂಚಾರ ವ್ಯವಸ್ಥೆಯಲ್ಲಿ ಅಡಚಣೆ ಉಂಟಾಗಿದೆ. ಮಂಗಳವಾರ 40-130 ಮಿಮಿ ಮಳೆ ದಾಖಲಾಗಿದ್ದು, ಬುಧವಾರವೂ ಮಳೆ ತನ್ನ ಆರ್ಭಟ ಮುಂದುವರೆಸಿದೆ.

ಆದರೆ, ಪ್ರವಾಹ ಭೀತಿ ಎದುರಾಗಿಲ್ಲ, ಈ ಬಗ್ಗೆ ಯಾವುದೇ ಸುಳ್ಳು ಸಂದೇಶ ಅಥವಾ ವದಂತಿಗಳನ್ನು ಹಬ್ಬಿಸಬೇಡಿ ಎಂದು ಬೃಹನ್ ಮುಂಬೈ ಪಾಲಿಕೆ ಮನವಿ ಮಾಡಿಕೊಂಡಿದೆ.

ವಿಮಾನಯಾನ ಸ್ಥಗಿತ: ಮುಖ್ಯ ರನ್‌ವೇ ಮೂಲಕ ಯಾವುದೇ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಭಾರತೀಯ ವಿಮಾನ ಪ್ರಾಧಿಕಾರ ತಿಳಿಸಿದೆ. ಸರಿ ಸುಮಾರು 108 ವಿಮಾನಗಳು ರದ್ದಾಗಿವೆ. 51 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.

ಮಹಾ ಮಳೆಗೆ ತತ್ತರಿಸಿದೆ

ಮಹಾ ಮಳೆಗೆ ತತ್ತರಿಸಿದೆ

ವಾಣಿಜ್ಯ ನಗರಿ ಮಹಾ ಮಳೆಗೆ ತತ್ತರಿಸಿದೆ. ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದರೂ ಸಾರ್ವಜನಿಕರು ಧೃತಿಗೆಡದೆ ದೈನಂದಿನ ಕೆಲಸ ಕಾರ್ಯದಲ್ಲಿ ತೊಡಗಿಕೊಂಡಿದ್ದರು.

ಮಳೆಯ ಸಂತಸ

ಮಳೆಯ ಸಂತಸ

ಮಹಾ ಮಳೆಗೆ ಬೆಚ್ಚದೆ ಸಮುದ್ರದ ಬಳಿ ನಿಂತು ಮಳೆಯಲ್ಲಿ ನೆಂದು ಆನಂದಿಸುವುದು ಮುಂಬೈನ ಯುವ ಪೀಳಿಗೆಗೆ ರೂಢಿಯಾಗಿ ಬಿಟ್ಟಿದೆ.

ಧಾರಾಕಾರ ಮಳೆ

ಧಾರಾಕಾರ ಮಳೆ

ಕಳೆದ 24 ಗಂಟೆಗಳಲ್ಲಿ ನಗರ ಪ್ರದೇಶದಲ್ಲಿ 210 ಮಿಮಿ ಮಳೆಯಾಗಿದೆ.ಮಂಗಳವಾರ 40-130 ಮಿಮಿ ಮಳೆ ದಾಖಲಾಗಿದ್ದು, ಬುಧವಾರವೂ ಮಳೆ ತನ್ನ ಆರ್ಭಟ ಮುಂದುವರೆಸಿದೆ.ಮೂರು ವಾರಗಳ ನಂತರ ಮತ್ತೆ ಧಾರಾಕಾರ ಮಳೆ ಆರಂಭವಾಗಿದೆ.

ವಿಮಾನಯಾನ ಸ್ಥಗಿತ

ವಿಮಾನಯಾನ ಸ್ಥಗಿತ

ಮುಖ್ಯ ರನ್‌ವೇ ಮೂಲಕ ಯಾವುದೇ ವಿಮಾನ ಹಾರಾಟ ನಡೆಸುವುದಿಲ್ಲ ಎಂದು ಭಾರತೀಯ ವಿಮಾನ ಪ್ರಾಧಿಕಾರ ತಿಳಿಸಿದೆ. ಸರಿ ಸುಮಾರು 108 ವಿಮಾನಗಳು ರದ್ದಾಗಿವೆ. 51 ವಿಮಾನಗಳ ಮಾರ್ಗ ಬದಲಾಯಿಸಲಾಗಿದೆ.

ಸಂಚಾರ ಅಸ್ತವ್ಯಸ್ತ

ಸಂಚಾರ ಅಸ್ತವ್ಯಸ್ತ

ಕೊಲಬಾದಲ್ಲಿ 210 ಎಂಎಂ, ಸಂತಾಕ್ರೂಜ್ ನಲ್ಲಿ 303.7 ಎಂಎಂ ದಾಖಲಾಗಿದೆ. 204.5 ಎಂಎಂಗಿಂತ ಅಧಿಕ ಮಳೆಯಾದರೆ ಅದನ್ನು ಮಹಾಮಳೆ ಎಂದು ಪರಿಗಣಿಸಲಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

English summary
Torrential rain battered Mumbai and its suburbs for the second day on Wednesday, causing massive disruption in flight operations, delaying suburban train services and forcing a large number of people to stay indoors, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X