Get Updates
Get notified of breaking news, exclusive insights, and must-see stories!

HDFC ಸಿಬ್ಬಂದಿ ನಿಗೂಢ ಹತ್ಯೆ: ವೃತ್ತಿ ಮಾತ್ಸರ್ಯವೇ ಕಾರಣ!

ಮುಂಬೈ, ಸೆಪ್ಟೆಂಬರ್ 10: ಮುಂಬೈಯಲ್ಲಿ ಸೆ.5 ರಿಂದ ನಾಪತ್ತೆಯಾಗಿದ್ದ ಎಚ್ ಡಿಎಫ್ ಸಿ ಬ್ಯಾಕೊಂದರ ಉಪಾಧ್ಯಕ್ಷ ಸಿದ್ಧಾರ್ಥ್ ಸಂಘ್ವಿ(39) ಅವರ ಮೃತದೇಹ ಭಾನುವಾರ ಪತ್ತೆಯಾಗಿದೆ.

ಸಂಘ್ವಿ ಸಾವಿಗೆ ವೃತ್ತಿ ಮಾತ್ಸರ್ಯವೇ ಕಾರಣ ಎಂಬ ಆಘಾತಕಾರಿ ಅಂಶವೂ ಬಂಧಿತ ಆರೋಪಿ ಸರ್ಫರಾಜ್ ಶೇಖ್ ನಿಂದ ತಿಳಿದುಬಂದಿದೆ.

ಸೆ.5 ರಂದು ಬ್ಯಾಂಕಿನಿಂದ ಸಂಜೆ 7:30 ರ ಸುಮಾರಿಗೆ ಮನೆಗೆ ಹೊರಟಿದ್ದ ಸಂಘ್ವಿ ಅವರನ್ನು ಅಪಹರಿಸಲಾಗಿತ್ತು. ಎಷ್ಟು ಹೊತ್ತಾದರೂ ಪತಿ ಮನೆಗೆ ಬಾರದಿದ್ದರಿಂದ ಆತಂಕಗೊಂಡ ಪತ್ನಿ ಸಂಘ್ವಿಗೆ ಫೋನ್ ಮಾಡಿದರೆ ಸ್ವಿಚ್ಡ್ ಆಫ್ ಬಂದಿದೆ. ನಂತರ ಸಂಘ್ವಿ ಅವರ ಸ್ನೇಹಿರಿಗೆಲ್ಲ ಫೋನ್ ಮಾಡಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ಆತಕಗೊಂದ ಕುಟುಂಬಸ್ಥರು ಮರುದಿನ ನಸುಕಿನಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.

Professional gealous kills HDFC bank VP in Mumbai: Body found

20 ವರ್ಷ ವಯಸ್ಸಿನ ಸರ್ಫರಾಜ್ ಶೇಖ್ ಎಂಬಾತ ಸಿದ್ಧಾರ್ಥ್ ಅವರ ಮಾರುತು ಸುಜುಕಿ ಇಗ್ನಿಸ್ ಕಾರಿನ ಬಳಿ ಓಡಾಡುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸಂಘ್ವಿ ಅವರನ್ನು ಕೊಲ್ಲಲು ತಮಗೆ ಮೂವರು ಮಹಿಳೆಯರು ಸುಫಾರಿ ಕೊಟ್ಟಿದ್ದರು ಎಂದು ಶೇಖ್ ಬಾಯಿ ಬಿಟ್ಟಿದ್ದಾನೆ. ಆದರೆ ಆತ ಸುಳ್ಳು ಹೇಳುತ್ತಿದ್ದಾನೆ ಎಂಬುದನ್ನು ಅರಿತ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ, ಸಂಘ್ವಿ ಅವರ ಸಹೋದ್ಯೋಗಿಗಳೇ ಅವರ ಹತ್ಯೆಗೆ ಸುಫಾರಿ ನೀಡಿದ್ದರು ಎಂಬುದು ತಿಳಿದುಬಂದಿದೆ.

ವೃತ್ತಿ ಮಾತ್ಸರ್ಯವೇ ಈ ಕೊಲೆಗೆ ಕಾರಣ ಎನ್ನಲಾಗಿದ್ದು, ಇತ್ತೀಚೆಗಷ್ಟೇ ಸಂಘ್ವಿ ಅವರು ಪ್ರಮೋಶನ್ ಪಡೆದಿದ್ದರು. ಇದನ್ನು ಸಹಿಸದ ಅವರ ಸಹೋದ್ಯೋಗಿಗಳೇ ಆತನ ಕೊಲೆ ಮಾಡಿಸಿದ್ದಾರೆ ಎನ್ನಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಲಾಗಿದೆ.

ಮುಂಬೈಯ ಕಮಲ್ ಮಿಲ್ಸ್ ಬಳಿಯಿರುವ ಎಚ್ ಡಿಎಫ್ ಸಿ ಬ್ಯಾಕ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಘ್ವಿ ಅವರ ಮೃತದೇಹ ಅವರದೇ ಕಾರಿನಲ್ಲಿ ಭಾನುವಾರ ಪತ್ತೆಯಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+