ಐಪಿಎಸ್ ಅಧಿಕಾರಿ ಎಂದು ಮಹಿಳೆಗೆ ವಂಚನೆ; ಆರೋಪಿ ಬಂಧನ

ಮುಂಬೈ, ಜುಲೈ 15; ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಐಪಿಎಸ್‌ ಅಧಿಕಾರಿ ಎಂದು ಹೇಳಿ ಮಹಿಳೆಯನ್ನು ವಂಚಿಸುತ್ತಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬಂಧಿತ ಆರೋಪಿಯನ್ನು 26 ವರ್ಷದ ಅಭಿಜಿತ್‌ ಪರಮೇಶ್ವರ್ ಗಾಧವೆ ಎಂದು ಗುರುತಿಸಲಾಗಿದೆ. ಸಾಕಿ ನಾಕಾ ಪೊಲೀಸರು ಮುಂಬೈನ ಘಾಟ್‌ಕೋಪರ್‌ನ ಕಟ್ಟಡವೊಂದರಲ್ಲಿ ಆರೋಪಿ ಬಂಧಿಸಿದ್ದಾರೆ.

ತಂದೆ ನಿವೃತ್ತ ಸೇನಾಧಿಕಾರಿ ಎಂದು ಹೇಳಿಕೊಂಡು ಮಹಿಳೆಯರನ್ನು ಸಂಪರ್ಕಿಸಿತ್ತಿದ್ದ ಆರೋಪಿ, ನಂತರ ಮದುವೆ ಆಗೋದಾಗಿ ಹೇಳಿ ವಂಚಿಸಿ, ತಪ್ಪಿಸಿಕೊಳ್ಳುತ್ತಿದ್ದ ಎಂದು ಸಾಕಿನಾಕಾ ಪೊಲೀಸರು ತಿಳಿಸಿದ್ದಾರೆ.

Police arrested accused who cheated woman in matrimonial site

ವಂಚನೆಗೊಳಗಾದ ಮಹಿಳೆಯ ದೂರಿನ ಮೇರೆಗೆ ಮುಂಬೈನ ಸಾಕಿನಾಕಾ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆರೋಪಿ ಅಭಿಜಿತ್‌ ಈ ಹಿಂದೆಯೂ ಸಹ ಹಲವಾರು ಮಹಿಳೆಯರಿಗೆ ವಂಚನೆ ಮಾಡಿ ಹಣವನ್ನು ಪಡೆದಿದ್ದ.

ಆರೋಪಿಯು ತನ್ನನ್ನು ತಾನು ಐಪಿಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದ ಮತ್ತು ಮುಂಬೈ ವಿಮಾನ ನಿಲ್ದಾಣದ ಕಂಪನಿಯೊಂದರಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದ್ದ. 70,000 ರೂಪಾಯಿ ಹಣ ಪಡೆದುಕೊಂಡು ಐಡಿ ಮತ್ತು ನೇಮಕಾತಿ ಪತ್ರವನ್ನು ನೀಡಿದ್ದ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಮಹಿಳೆ ನಂತರ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಐಡಿ ಮತ್ತು ದಾಖಲೆ ಪತ್ರಗಳು ನಕಲಿ ಎಂದು ತಿಳಿದುಬಂದಿದೆ. ವಂಚನೆ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಘಾಟ್‌ಕೋಪರ್‌ನಲ್ಲಿರುವ ನಿವಾಸದಲ್ಲಿ ಬಂಧಿಸಿದ್ದಾರೆ.

Police arrested accused who cheated woman in matrimonial site

ದೇಶದ ವಾಣಿಜ್ಯ ನಗರಿಯಲ್ಲಿ ದಿನಕ್ಕೊಂದು ವಂಚನೆ ಪ್ರಕರಣಗಳು ಹೊರಬರುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ನಲ್ಲಿ ಮಹಿಳೆಯರಿಗೆ ವಂಚನೆ ಮಾಡಿರುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ವೆಬ್‌ಸೈಟ್‌ಗಳಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಯರನ್ನ ಬಲೆಗೆ ಬೀಳಿಸಿಕೊಳ್ಳುತ್ತಾರೆ. ಅಸಲಿ ಸತ್ಯಗಳು ಬಹಿರಂಗಗೊಳ್ಳುತ್ತಿವೆ ಅನ್ನುವ ಸಂದರ್ಭದಲ್ಲಿ ಪರಾರಿಯಾಗುತ್ತಾರೆ.

ಸರ್ಕಾರಿ ಉದ್ಯೋಗದಲ್ಲಿದ್ದೇನೆ ಎಂದು ಹಣವನ್ನು ಪೀಕಿ ಪರಾರಿಯಾಗುತ್ತಾರೆ. ಅಂತಹದ್ದೇ ಒಂದು ಘಟನೆ ಮುಂಬೈನಲ್ಲಿ ನಡೆದಿದ್ದು ಸಂಸ್ತ್ರಸ್ತ ಮಹಿಳೆಗೆ ವಂಚಿಸಿದ್ದ ಕಿರಾತಕನನ್ನ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಒಂದೇ ಅಲ್ಲ ದೊಡ್ಡ ನಗರಗಳಲ್ಲಿ ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಬಳಸಿ ತಮ್ಮ ಪ್ರೊಫೈಲ್‌ ಅನ್ನೇ ಬದಲಾಯಿಸಿರುತ್ತಾರೆ.

ನಕಲಿ ದಾಖಲೆ ಅಪ್ಲೋಡ್‌ ಮಾಡಿ ದಂಧೆಗೆ ಇಳಿಯುತ್ತಿರುವುದು ಬೆಳಕಿಗೆ ಬರುತ್ತಿವೆ. ಹೀಗೆ ನಕಲಿಗಳ ಅಸಲಿ ಸತ್ಯವನ್ನು ಪೊಲೀಸರು ಬಯಲಿಗೆ ಎಳೆಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+