ಪಿಎಎನ್ ಬಿಯ ಮತ್ತೊಂದು ಹಗರಣ ಬೆಳಕಿಗೆ
ಮುಂಬೈ, ಮಾರ್ಚ್ 15: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ನ ಮುಂಬೈ ಬ್ರ್ಯಾಂಚ್ ನಲ್ಲಿ ಮತ್ತೊಂದು ಆರ್ಥಿಕ ಅವ್ಯವಹಾರ ಕಂಡು ಬಂದಿದೆ. ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಗೆ ಬಗ್ಗೆ ಅಧಿಕೃತವಾಗಿ ದೂರು ದಾಖಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ 12,000 ಕೋಟಿ ರು ವಂಚನೆ ಪ್ರಕರಣ, ಉದ್ಯಮಿಗಳಾದ ನೀರವ್ ಮೋದಿ, ಮೆಹುಲ್ ಚೋಕ್ಸಿ ಪರಾರಿ ಜಾಡಿನಲ್ಲಿ ಸಿಲುಕಿರುವ ಬೆನ್ನಲ್ಲೇ 9.1 ಕೋಟಿ ರು ಮೌಲ್ಯದ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.

ಅಷ್ಟಾಗಿ ಪರಿಚಯವಿಲ್ಲದ ಚಂದ್ರಿ ಪೇಪರ್ ಅಂಡ್ ಅಲೈಯ್ಡ್ ಪ್ರಾಡಕ್ಟ್ ಪೈ ಲಿಮಿಟೆಡ್ ನಿಂದ ಈ ವಂಚನೆ ನಡೆದಿದೆ. ಈ ಬಗ್ಗೆ ದೂರು ದಾಖಲಾಗಿದ್ದು, ಸಿಬಿಐನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.












Click it and Unblock the Notifications