ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಜಯ್ ರಾವತ್ ಸಂಬಂಧಿಯ 72 ಕೋಟಿ ರೂ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ

|
Google Oneindia Kannada News

ಮುಂಬೈ, ಜನವರಿ 1: ಮಹಾರಾಷ್ಟ್ರದ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರ ಹತ್ತಿರದ ಸಂಬಂಧಿಯೊಬ್ಬರಿಗೆ ಸೇರಿದ 72 ಕೋಟಿ ರೂ ಮೊತ್ತದ ಸಂಪತ್ತನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ಪಿಎಂಸಿ ಬ್ಯಾಂಕ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ 2002 (ಪಿಎಂಎಲ್‌ಎ) ಅಡಿ ಪ್ರವೀಣ್ ರಾವತ್‌ಗೆ ಸೇರಿದ ಆಸ್ತಿಗಳನ್ನು ಇ.ಡಿ. ಶುಕ್ರವಾರ ಮುಟ್ಟುಗೋಲು ಹಾಕಿಕೊಂಡಿದೆ.

ಮುಂಬೈ ಪೊಲೀಸರ ಆರ್ಥಿಕ ಘಟಕವು ದಾಖಲಿಸಿದ ಎಫ್‌ಐಆರ್ ಆಧಾರದಲ್ಲಿ ಪಿಎಂಎಲ್‌ಎ ಅಡಿ ಹೌಸಿಂಗ್ ಡೆವಲಪ್‌ಮೆಂಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್), ರಾಕೇಶ್ ಕುಮಾರ್ ವಧ್ವಾವನ್, ಸಾರಂಗ್, ವಧಾವನ್, ವರ್ಯಮ್ ಸಿಂಗ್, ಜಾಯ್ ಥಾಮಸ್ ಹಾಗೂ ಇತರರ ವಿರುದ್ಧ ಪಿಎಂಸಿ ಬ್ಯಾಂಕ್‌ನಲ್ಲಿ 4,355 ಕೋಟಿ ರೂ ನಷ್ಟ ಉಂಟುಮಾಡಿದ್ದಕ್ಕಾಗಿ ಐಪಿಸಿ ಸೆಕ್ಷನ್ 409, 420, 465, 466, 471 ಅಡಿ ತನಿಖೆ ನಡೆಸಲಾಗುತ್ತಿದೆ.

ಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣ: ಇ.ಡಿ ವಿಚಾರಣೆಗೆ ಸಂಜಯ್ ರಾವತ್ ಪತ್ನಿ ಗೈರುಪಿಎಂಸಿ ಬ್ಯಾಂಕ್ ವಂಚನೆ ಪ್ರಕರಣ: ಇ.ಡಿ ವಿಚಾರಣೆಗೆ ಸಂಜಯ್ ರಾವತ್ ಪತ್ನಿ ಗೈರು

ಇವರಲ್ಲಿ ಸಂಜಯ್ ರಾವತ್ ಸಂಬಂಧಿ ಪ್ರವೀಣ್ ರಾವತ್ ಅವರು ಎಚ್‌ಡಿಐಎಲ್ ಮೂಲಕ 95 ಕೋಟಿ ರೂಗಳನ್ನು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಿಎಂಸಿ ಬ್ಯಾಂಕ್ ಮೂಲಕ ಎಚ್‌ಡಿಐಎಲ್ ಅಕ್ರಮವಾಗಿ ಸಾಲ ಮತ್ತು ಮುಂಗಡಗಳನ್ನು ಪಡೆದು ವಂಚಿಸಿದೆ. ಈ ಹಣವನ್ನು ಪ್ರವೀಣ್ ರಾವತ್ ಅವರಿಗೆ ವರ್ಗಾಯಿಸಲಾಗಿದೆ. ಪಾಲ್ಘರ್ ಪ್ರದೇಶದಲ್ಲಿ ಭೂಮಿ ಖರೀದಿಗೆ ಪ್ರವೀಣ್ ಅವರಿಗೆ ಹಣ ನೀಡಲಾಗಿದೆ.

PMC Bank Fraud: ED Attaches Properties Worth Rs 72 Crore Of Close Relative Of Sanjay Raut

ಈ ಅಪರಾಧದಿಂದ ತಪ್ಪಿಸಿಕೊಳ್ಳಲು ಪ್ರವೀಣ್ ತಮ್ಮ ಪತ್ನಿ ಮಾಧುರಿ ಪ್ರವೀಣ್ ರಾವತ್ ಅವರಿಗೆ 1.6 ಕೋಟಿ ರೂ ಹಣ ವರ್ಗಾಯಿಸಿದ್ದರು. ಈ ಹಣದಲ್ಲಿ ಮಾಧುರಿ ರಾವತ್ 55 ಲಕ್ಷ ರೂ ಹಣವನ್ನು ಬಡ್ಡಿ ರಹಿತ ಸಾಲವಾಗಿ ಸಂಜಯ್ ರಾವತ್ ಪತ್ನಿ ವರ್ಷಾ ರಾವತ್‌ಗೆ ನೀಡಿದ್ದರು. ಈ ಮೊತ್ತವನ್ನು ಮುಂಬೈನ ದಾದರ್ ಈಸ್ಟ್‌ನಲ್ಲಿ ಫ್ಲ್ಯಾಟ್ ಖರೀದಿಗೆ ಬಳಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿತ್ತು.

ಯಾರ ಬಗ್ಗೆಯೂ ಹೆದರಿಕೆಯಿಲ್ಲ: ಇ.ಡಿ ನೋಟಿಸ್‌ಗೆ ಸಂಜಯ್ ರಾವತ್ ಪ್ರತಿಕ್ರಿಯೆಯಾರ ಬಗ್ಗೆಯೂ ಹೆದರಿಕೆಯಿಲ್ಲ: ಇ.ಡಿ ನೋಟಿಸ್‌ಗೆ ಸಂಜಯ್ ರಾವತ್ ಪ್ರತಿಕ್ರಿಯೆ

ಹಾಗೆಯೇ, ವರ್ಷಾ ರಾವತ್ ಹಾಗೂ ಮಾಧುರಿ ಪ್ರವೀಣ್ ರಾವತ್ ಇಬ್ಬರೂ ಅವನಿ ಕನ್‌ಸ್ಟ್ರಕ್ಷನ್ ಸಂಸ್ಥೆಯ ಪಾಲುದಾರರಾಗಿದ್ದಾರೆ. ಈ ಸಂಸ್ಥೆಯಿಂದ ಕೇವಲ 5625 ರೂ ಕೊಡುಗೆಗಾಗಿ 12 ಲಕ್ಷ ರೂ ಪಡೆದುಕೊಂಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

English summary
PMC Bank case: ED has attached properties worth Rs 72 crore belonging to close relative Maharashtra Shiv Sena MP Sanjay Raut, Pravin Raut under PMLA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X