ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿಯನ್ನು ರಾಷ್ಟ್ರಪಿತ ಎಂದ ಫಡ್ನವಿಸ್ ಪತ್ನಿ!

|
Google Oneindia Kannada News

ಮುಂಬೈ, ಸೆಪ್ಟೆಂಬರ್ 18: ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಪಿತ ಎನ್ನುವ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಟ್ವಿಟ್ಟಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ.

ಕುತೂಹಲದ ನಡೆ: ಮೋದಿ ಭೇಟಿಗೂ ಮುನ್ನ ಅವರ ಪತ್ನಿಯ ಭೇಟಿಯಾದ ದೀದಿ!ಕುತೂಹಲದ ನಡೆ: ಮೋದಿ ಭೇಟಿಗೂ ಮುನ್ನ ಅವರ ಪತ್ನಿಯ ಭೇಟಿಯಾದ ದೀದಿ!

ಸೆಪ್ಟೆಂಬರ್ 17 ರಂದು ಪ್ರಧಾನಿ ಮೋದಿ ತಮ್ಮ 69 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. "ರಾಷ್ಟ್ರಪಿತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರು ಈ ಸಮಾಜದ ಅಭಿವೃದ್ಧಿಗಾಗಿ ಅವಿರತವಾಗಿ ಕೆಲಸ ಮಾಡುತ್ತ ನಮಗೆ ಸ್ಫೂರ್ತಿಯಾಗಿದ್ದಾರೆ" ಎಂದು ಅಮೃತಾ ಫಡ್ನವಿಸ್ ಟ್ವೀಟ್ ಮಾಡಿದ್ದರು.

PM Modi is Father Of Our Nation: Amruta Fadnavis

ಅವರ ಟ್ವೀಟ್ ಅನ್ನು ಹಲವರು ಲೇವಡಿ ಮಾಡಿದ್ದು, ಪ್ರಧಾನಿ ಮೋದಿ ಯಾವಾಗ ರಾಷ್ಟ್ರಪಿತರಾದರು? ನಿರುದ್ಯೋಗ ಹೆಚ್ಚಾಗಿರುವುದು ಮತ್ತು ಆರ್ಥಿಕತೆ ಎಂದಿಗಿಂತ ಹೆಚ್ಚು ಕುಸಿದಿರುವುದು ಯಾವರೀತಿಯ ಅಭಿವೃದ್ಧಿ? ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ.

'ಗುಟ್ಟು ರಟ್ಟಾಯ್ತು, ಮೋದಿ ಭೇಟಿಗೆ ದೀದಿ ತುದಿಗಾಲಲ್ಲಿ ನಿಂತಿರೋದೇಕೆ?''ಗುಟ್ಟು ರಟ್ಟಾಯ್ತು, ಮೋದಿ ಭೇಟಿಗೆ ದೀದಿ ತುದಿಗಾಲಲ್ಲಿ ನಿಂತಿರೋದೇಕೆ?'

"ರಾಷ್ಟ್ರಪಿತ ಎಂದರೆ ಮಹಾತ್ಮಾ ಗಾಂಧಿ. ಪ್ರಧಾನಿ ಮೋದಿ ಯಾವಾಗ ರಾಷ್ಟ್ರಪಿತರಾದರು? ನಮ್ಮ ರಾಷ್ಟ್ರಪಿತ ಯಾವತ್ತಿದ್ದರೂ ಮಹಾತ್ಮಾ ಗಾಂಧಿ ಮಾತ್ರ" ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Maharshtra CM Devendra Fadnavis Wife calls PM Narendra Modi as Father Of the Nation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X