ಹಿನ್ನಲೆ ಗಾಯಕ ಉದಿತ್ ನಾರಾಯಣ್ ಗೆ ಜೀವ ಬೆದರಿಕೆ ಕರೆ

ಮುಂಬೈ, ಜುಲೈ 29: ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಜನಪ್ರಿಯ ಹಾಡುಗಳಿಗೆ ದನಿಯಾಗಿರುವ ಹಿನ್ನೆಲೆ ಗಾಯಕಿ ಉದಿತ್ ನಾರಾಯಣ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಈ ಕುರಿತಂತೆ ಪೊಲೀಸರಿಗೆ ದೂರು ಸಲ್ಲಿಸಲಾಗಿದ್ದು, ಪ್ರಕರಣ ದಾಖಲಿಸಿಕಂಡು ಎಫ್ಐಆರ್ ಹಾಕಿದ್ದಾರೆ.

ಉದಿತ್ ನಾರಾಯಣ್ ಅವರಿಗೆ ಅನಾಮಧೇಯನೊಬ್ಬ ಕೆಲ ವಾರಗಳಿಂದ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ, ಎರಡು ವಾರದ ಹಿಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆದರೆ, ಆತನ ಗುರುತು ಪತ್ತೆಯಾಗಿಲ್ಲ.

ಇಲ್ಲಿ ತನಕ ಆತ ಯಾವುದೇ ರೀತಿ ಹಣ ನೀಡುವಂತೆ ಬೆದರಿಸಿಲ್ಲ, ಬೇಡಿಕೆ ಇಟ್ಟಿಲ್ಲ ಎಂಬುದು ವಿಶೇಷ. ಆರೋಪಿ ಬೆನ್ನು ಹತ್ತಿರುವ ಬೆದರಿಕೆ ಕರೆ ನಿಯಂತ್ರಣ ಘಟಕದ ಪೊಲೀಸರು ಆರೋಪಿಯನ್ನು ಬಿಹಾರ ಮೂಲದವನು ಎಂದು ಶಂಕಿಸಿದ್ದಾರೆ. ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚನೆ ಮಾಡಿ ಬಿಹಾರಕ್ಕೆ ಕಳುಹಿಸಲಾಗಿದೆ ಎಂದು ಅಂಬೋಲಿ ಠಾಣೆಯ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಭರತ್ ಗಾಯಕ್ವಾಡ್ ಹೇಳಿದ್ದಾರೆ.

Playback Singer Udit Narayan gets death threats

ಪಶ್ಚಿಮ ಅಂಧೇರಿಯಲ್ಲಿ ನೆಲೆಸಿರುವ ನಾರಾಯಣ್ ಅವರು ನೀಡಿರುವ ದೂರಿನ ಪ್ರಕಾರ ಆರೋಪಿಯು ಎರಡು ಮೂರು ಬಾರಿ ಕರೆ ಮಾಡಿ, ನಿಂದನೆ ಮಾಡಿದ್ದಾನೆ, ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಕರೆ ಮಾಡಿದ್ದ ನಂಬರ್ ಹುಡುಕಿಕೊಂಡು ಹೊರಟ ಪೊಲೀಸರಿಗೆ ಇದು​ನಾರಾಯಣ್ ವಾಸವಿದ್ದ ಅಪಾರ್ಟ್ಮೆಂಟ್ ಸೆಕ್ಯುರಿಟಿ ಗಾರ್ಡ್ ಹೆಸರಿನಲ್ಲಿರುವುದು ಪತ್ತೆಯಾಗಿದೆ. ಆದರೆ, ಸೆಕ್ಯುರಿಟಿ ಸಿಬ್ಬಂದಿ ವಿಚಾರಿಸಿದಾಗ, ಆತನ ಮೊಬೈಲ್​ಕಳೆದುಕೊಂಡಿರುವುದು ತಿಳಿದು ಬಂದಿದೆ. ಕದ್ದ ಮೊಬೈಲ್ ಬಳಸಿ ಆರೋಪಿ ಕರೆ ಮಾಡುತ್ತಿರುವುದು ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+