Get Updates
Get notified of breaking news, exclusive insights, and must-see stories!

ಮೇ 4ರಂದು ಆಜಾನ್ ಕೊಡಲು ಧ್ವನಿವರ್ಧಕ ಬಳಸಿದರೆ..: ರಾಜ್ ಠಾಕ್ರೆ ಎಚ್ಚರಿಕೆ

ಮುಂಬೈ, ಮೇ 4: ಮಹಾರಾಷ್ಟ್ರದಲ್ಲಿ ಮೇ 4ರ ಬುಧವಾರದಂದು ಧ್ವನಿವರ್ಧಕಗಳಲ್ಲಿ ಆಜಾನ್ ನುಡಿಸುವ ಶಬ್ಧ ಕೇಳಿ ಬಂದರೆ ಅಂಥಲ್ಲಿ ಹನುಮಾನ್ ಚಾಲೀಸಾವನ್ನು ನುಡಿಸುವಂತೆ ನವನಿರ್ಮಾಣ ಸೇನೆ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

"ಬುಧವಾರ, ಮೇ 4ರಂದು, ನಿಮಗೆ ಧ್ವನಿವರ್ಧಕಗಳಲ್ಲಿ ಅಜಾನ್ ಮೊಳಗುವುದು ಕೇಳಿದರೆ, ನಾನು ಎಲ್ಲಾ ಹಿಂದೂಗಳಿಗೆ ಮನವಿ ಮಾಡುತ್ತೇನೆ; ಆ ಸ್ಥಳಗಳಲ್ಲಿ ನೀವೂ ಕೂಡ ಧ್ವನಿವರ್ಧಕಗಳಲ್ಲಿ ಹನುಮಾನ್ ಚಾಲೀಸಾವನ್ನು ಪ್ಲೇ ಮಾಡಿ! ಆಗಲೇ ಅವರಿಗೆ ಈ ಧ್ವನಿವರ್ಧಕಗಳ ಅಡ್ಡಿಯ ಅರಿವಾಗುತ್ತದೆ" ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

ಧ್ವನಿವರ್ಧಕಗಳ ಬಳಕೆ ಕುರಿತು ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿದ ರಾಜ್ ಠಾಕ್ರೆ, "ಧರ್ಮದ ಹೆಸರಿನಲ್ಲಿ ಧ್ವನಿವರ್ಧಕಗಳನ್ನು ಬಳಸುವುದರಿಂದ, ವೃದ್ಧರು, ರೋಗಿಗಳು, ಮಕ್ಕಳು, ವಿದ್ಯಾರ್ಥಿಗಳು ಮುಂತಾದವರಿಗೆ ಖಂಡಿತವಾಗಿಯೂ ತೊಂದರೆಯಾಗುತ್ತಿದೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಆದೇಶದ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ" ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಅನೇಕ ಮಸೀದಿಗಳು ಧ್ವನಿವರ್ಧಕಗಳನ್ನು ಬಳಸುತ್ತಿರುವುದು ಅನಧಿಕೃತ ಎಂದು ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ ದೂಷಿಸಿದ್ದಾರೆ. "ಸಮಸ್ಯೆ ಏನೆಂದರೆ, ಧ್ವನಿವರ್ಧಕಗಳು ಅನಧಿಕೃತವಾಗಿವೆ. ವಾಸ್ತವವಾಗಿ, ಹಲವು ಮಸೀದಿಗಳು ಸಹ ಅನಧಿಕೃತವಾಗಿವೆ. ಅನಧಿಕೃತ ಮಸೀದಿಗಳಿಗೆ ಧ್ವನಿವರ್ಧಕಗಳನ್ನು ಬಳಸಲು ಸರ್ಕಾರ ಅಧಿಕೃತ ಅನುಮತಿಯನ್ನು ನೀಡಿದ್ದು ಹೇಗೆ? ಮತ್ತು ಅನುಮತಿಗಳನ್ನು ನೀಡುವುದಾದರೆ, ಹಿಂದೂ ದೇವಾಲಯಗಳಿಗೆ ಧ್ವನಿವರ್ಧಕಗಳನ್ನು ಹಾಕಲು ಅನುಮತಿಯನ್ನು ನೀಡಬೇಕಾಗುತ್ತದೆ ಎಂದು ರಾಜ್ ಠಾಕ್ರೆ ಹೇಳಿದರು.

Play Hanuman Chalisa wherever Azaan is played on loudspeakers on May 4 at maharashtra: Raj Thackeray

ಇದು ಧಾರ್ಮಿಕ ವಿಷಯವಲ್ಲ, ಆದರೆ ಸಾಮಾಜಿಕ ವಿಷಯ ಎಂದು ಪ್ರತಿಪಾದಿಸಿದ ಅವರು, "ದೇಶದ ಪ್ರತಿಯೊಂದು ಧರ್ಮದ ಜನರು ಶಬ್ದಮಾಲಿನ್ಯಕ್ಕೆ ಒಡ್ಡಿಕೊಳ್ಳುತ್ತಾರೆ ಎಂದರು.

Play Hanuman Chalisa wherever Azaan is played on loudspeakers on May 4 at maharashtra: Raj Thackeray

Recommended Video

      Livingstone ಆಟಕ್ಕೆ ಗಾಬರಿಯಾದ ಗುಜರಾತ್ | Oneindia Kannada

      ಯಾವುದು ತನ್ನ ಧರ್ಮವನ್ನು ಪ್ರಚಾರ ಮಾಡುತ್ತೆ, ಸಭೆ ಮಾಡುತ್ತೆ, ಪ್ರಾರ್ಥನೆ ಮಾಡಲು ರಸ್ತೆಗಳ ಮಧ್ಯದಲ್ಲಿ ಕುಳಿತು ಅಪಾರ ಟ್ರಾಫಿಕ್ ಜಾಮ್ ಉಂಟು ಮಾಡುತ್ತದೆಯೋ ಅದು ಸಾರ್ವಜನಿಕರ ಮೇಲೆ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆ ಆಗುತ್ತದೆ. ಇದು ಮುಸ್ಲಿಂ ಸಮುದಾಯದ ಬಗ್ಗೆ ನಾನು ನೀಡಿದ ಹೇಳಿಕೆಗೆ ಮುಖ್ಯ ಕಾರಣವಾಗಿದೆ" ಎಂದು ರಾಜ್ ಠಾಕ್ರೆ ಹೇಳಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+