ಮುಂಬೈಯಲ್ಲಿ 90 ರು ಗಡಿ ದಾಟಿದ ಪೆಟ್ರೋಲ್ ಬೆಲೆ

ಮುಂಬೈ, ಸೆಪ್ಟೆಂಬರ್ 24: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 90.08 ರೂಪಾಯಿಯಾಗಿದೆ. ಇಂದು 11 ಪೈಸೆ ಏರಿಕೆಯಾಗಿದ್ದು, ಪೆಟ್ರೋಲ್ ದರದ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ದೇಶದಲ್ಲೇ ಅತಿ ಹೆಚ್ಚು ವ್ಯಾಟ್ ಮುಂಬೈನಲ್ಲಿ ಹಾಕಲಾಗುತ್ತದೆ.

ಸತತವಾಗಿ ಗಗನಮುಖಿಯಾಗಿ ಪೆಟ್ರೋಲ್ ದರ ಸಾಗುತ್ತಿದೆ. ಇದೇ ವೇಳೆ ಡೀಸೆಲ್ ದರ 78.58 ರೂ.ಮುಟ್ಟಿದೆ.ಮುಂಬೈನಲ್ಲಿ ಶನಿವಾರ ಪೆಟ್ರೋಲ್ ದರ 89.97 ರೂ. ಹಾಗೂ ಡೀಸೆಲ್ ದರ 78.53 ರೂ. ಇತ್ತು.

ದೆಹಲಿಯಲ್ಲಿ ಕೂಡಾ ಪೆಟ್ರೋಲ್ ದರ 11 ಪೈಸೆ ಹೆಚ್ಚಳವಾಗಿದ್ದು, 82.72 ರೂ. ನಷ್ಟಿದೆ. ಡೀಸಲ್ ದರ ಐದು ಪೈಸೆ ಹೆಚ್ಚಳವಾಗಿ 74.02 ರೂ. ತಲುಪಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ 84.54 ರು ಪ್ರತಿ ಲೀಟರ್ ಗೆ, ಚೆನ್ನೈನಲ್ಲಿ 85.99 ರು ನಷ್ಟಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೊಲ್ ಬೆಲೆ 83.37ರು ಹಾಗೂ ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 74.40 ರು ನಷ್ಟಿದೆ.

Petrol price crosses Rs 90 per litre mark in Mumbai

ಡೀಸೆಲ್ ದರ ಮುಂಬೈನಲ್ಲಿ 78.58ರು, ದೆಹಲಿಯಲ್ಲಿ 74.02ರು, ಕೋಲ್ಕತ್ತಾದಲ್ಲಿ 75.87ರು ಹಾಗೂ ಚೆನ್ನೈನಲ್ಲಿ 78.26ರು ಪ್ರತಿ ಲೀಟರ್ ಗೆ ನೀಡಬೇಕಾಗುತ್ತದೆ.

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳು ತೆರಿಗೆಯನ್ನೂ ಇಳಿಸಿವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾತೈಲ ಬೆಲೆ ಏರಿಕೆಯಾಗಿದ್ದು, ಡಾಲರ್ ಎದುರು ರುಪಾಯಿ ಅಪಮೌಲ್ಯ ಎಲ್ಲವೂ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+