ಭಾರತದಲ್ಲಿ ಪೆಟ್ರೋಲ್ ಏರಿಕೆಗೆ ಮೊಘಲರು, ಹಣದುಬ್ಬರಕ್ಕೆ ಅಕ್ಬರ್ ಕಾರಣವೇ?

ನವದೆಹಲಿ, ಮೇ 29: "ಭಾರತ ನನ್ನದೂ ಅಲ್ಲ, ಠಾಕ್ರೆಯವರದ್ದೂ ಅಲ್ಲ, ಮೋದಿ-ಶಾ ಅವರದ್ದೂ ಅಲ್ಲ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಮಹಾರಾಷ್ಟ್ರದ ಭಿವಾಂಡಿಯಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ವೇಳೆ ಭಾರತ ಯಾರದ್ದಾದರೂ ಆಗಿದ್ದರೆ, ಅದು ದ್ರಾವಿಡರು ಮತ್ತು ಆದಿವಾಸಿಗಳದ್ದೇ ಆಗಿದೆ, ಬಿಜೆಪಿ-ಆರ್‌ಎಸ್‌ಎಸ್ ಎನ್ನುವುದು ಮೊಘಲರ ನಂತರದವರು. ಆಫ್ರಿಕಾ, ಇರಾನ್, ಮಧ್ಯ ಏಷ್ಯಾ, ಪೂರ್ವ ಏಷ್ಯಾದಿಂದ ಜನರು ವಲಸೆ ಬಂದ ನಂತರ ಭಾರತವು ರೂಪುಗೊಂಡಿತು," ಎಂದರು.

ದೇಶದಲ್ಲಿ ಹಣದುಬ್ಬರ, ಇಂಧನ ಬೆಲೆ ಮತ್ತು ನಿರುದ್ಯೋಗಕ್ಕೆ ಮೊಘಲರನ್ನು ದೂಷಿಸುವ ಬಿಜೆಪಿಯನ್ನು ಓವೈಸಿ ತರಾಟೆ ತೆಗೆದುಕೊಂಡರು. ದೇಶವನ್ನು ಆವರಿಸಿದ ಸಮಸ್ಯೆಗಳಿಗೆ ಪ್ರಧಾನಿಯಲ್ಲ, ಔರಂಗಜೇಬ್, ಅಕ್ಬರ್ ಮತ್ತು ಷಹಜಹಾನ್ ಕಾರಣ ಎಂದು ವ್ಯಂಗ್ಯವಾಡಿದ್ದಾರೆ.

Owaisi says India is not neither Thackeray’s nor Modis

ದೇಶದಲ್ಲಿ ಪೆಟ್ರೋಲ್ ದರ ಹೆಚ್ಚಲು ಮೊಘಲರು ಕಾರಣ:

"ಭಾರತದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆಗೆ ಮೊಘಲರು ಕಾರಣ ಎಂದು ನಾನು ನಂಬುತ್ತೇನೆ. ಅದಕ್ಕೆ ಔರಂಗಜೇಬ್ ಕಾರಣ. ಹಣದುಬ್ಬರಕ್ಕೆ ಅಕ್ಬರ್ ಮತ್ತು ನಿರುದ್ಯೋಗಕ್ಕೆ ಷಹಜಹಾನ್ ಕಾರಣ. ಇದನ್ನೇ ನಾನು ನಂಬುತ್ತೇನೆ. ಈ ಎಲ್ಲಾ ಜವಾಬ್ದಾರಿಗಳು ಮೊಘಲರ ಮೇಲೆ ಬೀಳುತ್ತವೆ. ಪ್ರಧಾನಿ ಯಾವುದಕ್ಕೂ ಜವಾಬ್ದಾರರಲ್ಲ," ಎಂದು ಅಸಾದುದ್ದೀನ್ ಓವೈಸಿ ವ್ಯಂಗ್ಯವಾಡಿದ್ದಾರೆ.

ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಭೇಟಿ ಮಾಡಿದಂತೆ ನವಾಬ್ ಮಲಿಕ್ ಬಂಧನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡದ ಹಿನ್ನೆಲೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ವಿರುದ್ಧವೂ ಓವೈಸಿ ಕಿಡಿ ಕಾರಿದರು.


ಶರದ್ ಪವಾರ್ ಬಗ್ಗೆ ಓವೈಸಿ ಪ್ರಶ್ನೆ:

"ಬಿಜೆಪಿ, ಎನ್‌ಸಿಪಿ, ಕಾಂಗ್ರೆಸ್, ಎಸ್‌ಪಿ ಜಾತ್ಯತೀತ ಪಕ್ಷಗಳು, ಜೈಲಿಗೆ ಹೋಗಬಾರದು ಎಂದು ಅವರು ಭಾವಿಸುತ್ತಾರೆ, ಆದರೆ ಯಾರಾದರೂ ಮುಸ್ಲಿಂ ಪಕ್ಷದವರು ಹೋದರೂ ಪರವಾಗಿಲ್ಲ. ಯಾವುದೇ ಕ್ರಮ ತೆಗೆದುಕೊಳ್ಳದಂತೆ ಒತ್ತಾಯಿಸಲು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಹೋದರು. ಸಂಜಯ್ ರಾವತ್ ವಿರುದ್ಧ ನಾನು ಎನ್‌ಸಿಪಿ ಕಾರ್ಯಕರ್ತರನ್ನು ಕೇಳಲು ಬಯಸುತ್ತೇನೆ, ಪವಾರ್ ನವಾಬ್ ಮಲಿಕ್‌ಗಾಗಿ ಅದೇ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ಓವೈಸಿ ಪ್ರಶ್ನಿಸಿದರು.

"ನವಾಬ್ ಮಲಿಕ್ ಸಂಜಯ್ ರಾವತ್ ಅವರಿಗಿಂತ ಕಡಿಮೆಯೇ? ನಾನು ಶರದ್ ಪವಾರ್ ಅವರನ್ನು ಕೇಳಲು ಬಯಸುತ್ತೇನೆ, ನೀವು ನವಾಬ್ ಮಲಿಕ್ ಪರವಾಗಿ ಏಕೆ ಮಾತನಾಡಲಿಲ್ಲ? ಅವರು ಮುಸ್ಲಿಂ ಎಂಬ ಕಾರಣಕ್ಕಾಗಿಯೇ? ಸಂಜಯ್ ಮತ್ತು ನವಾಬ್ ಸಮಾನರಲ್ಲವೇ?," ಎಂದು ಓವೈಸಿ ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+