Full Moon May 2026: ಈ ರಾಶಿಯವರ ಹಣಕಾಸಿನ ಸ್ಥಿತಿ ಮೇಲೆ ಬ್ಲೂ ಮೂನ್ ಪರಿಣಾಮ, ನಿಮ್ಮ ಮೇಲೆ ಹೇಗಿರಲಿದೆ ನೋಡಿ ಪ್ರಭಾವ
ಜ್ಯೋತಿಷ್ಯದ ಪ್ರಕಾರ ಬ್ಲೂ ಮೂನ್ ಎಂದರೆ ಒಂದೇ ತಿಂಗಳಲ್ಲಿ ಬರುವ ಎರಡನೇ ಹುಣ್ಣಿಮೆ. ಇದು ಭಾವನಾತ್ಮಕ ತೀವ್ರತೆಯನ್ನು ಹೆಚ್ಚಿಸುವುದು, ಜೀವನದಲ್ಲಿ ಪ್ರಮುಖ ಬದಲಾವಣೆಗಳಿಗೆ ಸಾಕ್ಷಿಯಾಗುವುದು. ಜ್ಯೇಷ್ಠ ಅಧಿಕ ಮಾಸದಲ್ಲಿ ವೃಶ್ಚಿಕ ರಾಶಿಯಲ್ಲಿ ಬರುವ ನೀಲಿ ಚಂದ್ರ ಅಥವಾ ಬ್ಲೂ ಮೂನ್ ಆಳವಾದ ಭಾವನಾತ್ಮಕ ಶಕ್ತಿಯನ್ನು ಹೊಂದಿದ್ದಾನೆ. ಚಂದ್ರನು ವೃಷಭ ರಾಶಿಯಲ್ಲಿ ಸೂರ್ಯನಿಗೆ ನೇರವಾಗಿ ವಿರುದ್ಧವಾಗಿರುವುದರಿಂದ, ಎರಡು ವಿರುದ್ಧ ಆಸೆಗಳ ನಡುವೆ ಎಳೆಯಲ್ಪಟ್ಟಂತೆ ಭಾಸವಾಗಬಹುದು.
ಪ್ರತಿಯೊಂದು ರಾಶಿಯವರು ಕೂಡಾ ಈ ಚಂದ್ರನ ಶಕ್ತಿಯನ್ನು ವಿಭಿನ್ನವಾಗಿ ಅನುಭವಿಸಬಹುದು. ಇದು ಪ್ರತಿಯೊಬ್ಬರ ರಾಶಿಯ ಮೇಲೆ ವಿಭಿನ್ನವಾಗಿ ಪ್ರಭಾವ ಬೀರುತ್ತದೆ̤

ಮೇಷ ರಾಶಿ:
ಈ ಹುಣ್ಣಿಮೆಯು ಹಣಕಾಸಿನ ವಿಷಯಗಳು, ನಂಬಿಕೆ ಮತ್ತು ಭಾವನಾತ್ಮಕ ನಿಯಂತ್ರಣದ ಮೇಲೆ ಹೆಚ್ಚು ಪರಿಣಾಮ ಬೀರುವುದು. ಹಣಕಾಸಿನ ವಿಚಾರದಲ್ಲಿ ವಿಳಂಬವಾಗುವುದು. ಸಂಬಂಧದಲ್ಲಿನ ಭಾವನಾತ್ಮಕ ಸಮಸ್ಯೆಯನ್ನು ಪರಿಹರಿಸಬೇಕಾಗಬಹುದು. ನೀವು ಯಾವ ವಿಚಾರದಿಂದ ದೂರ ಹೋಗುತ್ತಿರುವಿರೋ ಅದೇ ಮತ್ತೆ ಮತ್ತೆ ನಿಮ್ಮ ಜೀವನದಲ್ಲಿ ಎದುರಾಗುವುದು.

ವೃಷಭ ರಾಶಿ:
ಈ ಹುಣ್ಣಿಮೆಯ ಸಮಯದಲ್ಲಿ ಸಂಬಂಧಗಳನ್ನು ನಿರ್ಲಕ್ಷಿಸುವುದು ಅಸಾಧ್ಯವಾಗುತ್ತದೆ. ಪ್ರೀತಿ, ಮದುವೆ, ವ್ಯವಹಾರ ಪಾಲುದಾರಿಕೆ ಮತ್ತು ಭಾವನಾತ್ಮಕ ನಿರೀಕ್ಷೆಗಳೆಲ್ಲದರ ಮೇಲೂ ಪರಿಣಾಮವಾಗುವುದು. ಯಾರಾದರೂ ದೀರ್ಘಕಾಲದಿಂದ ಹೇಳದೆ ಉಳಿದಿರುವ ಭಾವನೆಗಳು ಅಥವಾ ಮನಸ್ಸಿನ ಮಾತುಗಳನ್ನು ಹೇಳುವ ಸಮಯ ಒದಗಿ ಬರುವುದು.

ಮಿಥುನ ರಾಶಿ:
ಈ ಹುಣ್ಣಿಮೆ ನಿಮ್ಮ ಆರೋಗ್ಯ, ದಿನಚರಿ ಮತ್ತು ಮಾನಸಿಕ ಸಮತೋಲನವನ್ನು ಎತ್ತಿ ತೋರಿಸುತ್ತದೆ. ಅತಿಯಾದ ಒತ್ತಡ, ನಿರಂತರ ಸಂಭಾಷಣೆಗಳು, ಮಿತಿಮೀರಿದ ಅಥವಾ ಅನಿಯಮಿತ ಅಭ್ಯಾಸಗಳು ನಿಮ್ಮ ಮೇಲೆ ದೈಹಿಕವಾಗಿ ಪರಿಣಾಮ ಬೀರಲು ಪ್ರಾರಂಭಿಸಬಹುದು. ಮನಸ್ಸು ಮತ್ತು ದೇಹದ ಬಗ್ಗೆ ಈಗಲೇ ಕಾಳಜಿ ವಹಿಸಿದರೆ ಮುಂದೆ ಆಗಬಹುದಾದ ಸಮಸ್ಯೆಯನ್ನು ತಪ್ಪಿಸಬಹುದು.

ಕಟಕ ರಾಶಿ:
ಪ್ರೀತಿ, ಪ್ರಣಯ, ಸೃಜನಶೀಲತೆ, ಮಕ್ಕಳು ಮತ್ತು ಹಿಂದಿನ ಭಾವನಾತ್ಮಕ ಬಾಂಧವ್ಯಗಳು ಇದ್ದಕ್ಕಿದ್ದಂತೆ ಬಲವಾಗಬಹುದು. ಜೀವನದಲ್ಲಿ ಬೇಡ ಎಂದು ದೂರವಾದವರು ಮತ್ತೆ ಜೀವನಕ್ಕೆ ಮರಳಿ ಬರಬಹುದು. ಭಾವನಾತ್ಮಕ ಸತ್ಯವನ್ನು ನಿರ್ಲಕ್ಷಿಸುವುದು ಕಷ್ಟವಾಗಬಹುದು.

ಸಿಂಹ ರಾಶಿ:
ನಿಮ್ಮ ಗಮನವು ಮನೆ, ಕುಟುಂಬ ಮತ್ತು ಭಾವನಾತ್ಮಕ ಭದ್ರತೆಯ ಕಡೆಗೆ ಕೇಂದ್ರೀಕೃತವಾಗುವುದು. ಕುಟುಂಬದ ಚರ್ಚೆ, ಹಳೆಯ ಭಾವನಾತ್ಮಕ ನೆನಪು ಅಥವಾ ಬಗೆಹರಿಯದ ವೈಯಕ್ತಿಕ ಸಮಸ್ಯೆಯ ಬಗ್ಗೆ ಗಮನ ಹರಿಸಬೇಕಾಗಬಹುದು. ಈ ಹುಣ್ಣಿಮೆಯು ನಿಜವಾದ ಸ್ಥಿರತೆಯ ಅರ್ಥವೇನೆಂದು ಪುನರ್ವಿಮರ್ಶಿಸಲು ಸಹಾಯ ಮಾಡುತ್ತದೆ.

ಕನ್ಯಾರಾಶಿ:
ಈ ಹುಣ್ಣಿಮೆಯ ಸಮಯದಲ್ಲಿ ಸಂವಹನವು ನಿಮಗೆ ಅತ್ಯಂತ ಮುಖ್ಯವಾದ ವಿಷಯವಾಗುತ್ತದೆ. ಪ್ರಮುಖ ಸಂಭಾಷಣೆಗಳು, ಕಾಗದಪತ್ರಗಳು, ಪ್ರಯಾಣ ಯೋಜನೆಗಳು, ನಿರ್ಧಾರಗಳು ಅಥವಾ ಒಡಹುಟ್ಟಿದವರೊಂದಿಗಿನ ಚರ್ಚೆಗಳು ಇದ್ದಕ್ಕಿದ್ದಂತೆ ಗಮನ ಸೆಳೆಯಬಹುದು. ಮಹತ್ವದ ವಿಷಯವನ್ನು ಅಂತಿಮವಾಗಿ ಬಹಿರಂಗವಾಗಿ ಹೇಳಬಹುದು. ಮಾತನಾಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿದರೆ ತಪ್ಪು ತಿಳುವಳಿಕೆ ಮತ್ತು ವಿಷಾದವನ್ನು ತಪ್ಪಿಸಬಹುದು.

ತುಲಾ ರಾಶಿ:
ಹಣ, ಸ್ವಾಭಿಮಾನ, ಭಾವನಾತ್ಮಕ ಭದ್ರತೆ ಮತ್ತು ಖರ್ಚು ಮಾಡುವ ಅಭ್ಯಾಸಗಳು ಗಮನಕ್ಕೆ ಬರುತ್ತವೆ. ಹಣಕಾಸಿನ ಸ್ಥಿತಿಯ ಬಗ್ಗೆ ಎಚ್ಚರಿಕೆಯಿಂದ ಇರುವುದು ಅಗತ್ಯ. ಈ ಹುಣ್ಣಿಮೆಯು ನಷ್ಟದ ಬಗ್ಗೆ ಮಾತ್ರ ಅರಿವು ಮೂಡಿಸುವುದಿಲ್ಲ. ಬದಲಾಗಿ ನಿಮ್ಮ ಆದ್ಯತೆಗಳು ಮತ್ತು ಸಂಪನ್ಮೂಲಗಳನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಂಡಾಗ ಸ್ಥಿರತೆ ಪ್ರಾರಂಭವಾಗುತ್ತದೆ.

ವೃಶ್ಚಿಕ ರಾಶಿ:
ಭಾವನೆಗಳು ವಿಶೇಷವಾಗಿ ತೀವ್ರ ಮತ್ತು ವೈಯಕ್ತಿಕವಾಗಿರಬಹುದು. ನಿಮ್ಮ ಗುರುತು, ಭಾವನಾತ್ಮಕ ಅಗತ್ಯಗಳು, ಸಂಬಂಧಗಳು ಮತ್ತು ವೈಯಕ್ತಿಕ ಸತ್ಯ ಎಲ್ಲವೂ ಬೆಳಕಿಗೆ ಬರುತ್ತವೆ. ಭಾವನಾತ್ಮಕ ತೀವ್ರತೆಯ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಭಾವನಾತ್ಮಕವಾಗಿ ಪ್ರತಿಕ್ರಿಯಿಸುವುದಕ್ಕಿಂತ ಸತ್ಯವನ್ನು ಶಾಂತವಾಗಿ ಹೇಳುವುದು ಹೆಚ್ಚು ಸಹಾಯ ಮಾಡುತ್ತದೆ.

ಧನು ರಾಶಿ:
ಈ ಹುಣ್ಣಿಮೆಯು ಹೊರಗಿನದಕ್ಕಿಂತ ಒಳಭಾಗದಲ್ಲಿ ಹೆಚ್ಚು ಕೆಲಸ ಮಾಡುತ್ತದೆ. ನಿದ್ರೆಯ ಮಾದರಿಗಳು, ಮಾನಸಿಕ ಬಳಲಿಕೆ, ಹಳೆಯ ಒತ್ತಡ, ಮತ್ತು ಉಪಪ್ರಜ್ಞೆಯ ಆಲೋಚನೆಗಳು ಪ್ರಮುಖ ವಿಷಯಗಳಾಗಿವೆ. ಇತ್ತೀಚೆಗೆ ಮಾನಸಿಕ ವಿಷಯಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಹೆಚ್ಚು ಸ್ಪಷ್ಟತೆ ಸಿಗುವುದು. ಪ್ರತಿಯೊಂದು ಸಮಸ್ಯೆಯನ್ನು ತಕ್ಷಣವೇ ಪರಿಹರಿಸಬೇಕಾಗಿಲ್ಲ.

ಮಕರ ರಾಶಿ:
ಈ ಹುಣ್ಣಿಮೆಯ ಸಮಯದಲ್ಲಿ ಸ್ನೇಹ, ಸಾಮಾಜಿಕ ವಲಯಗಳು, ಭವಿಷ್ಯದ ಗುರಿಗಳು ಸ್ಪಷ್ಟವಾಗಬಹುದು. ನಿಮ್ಮ ಜೀವನದಲ್ಲಿ ಯಾರು ಯಾವ ಪಾತ್ರ ವಹಿಸುತ್ತಾರೆ ಎನ್ನುವುದನ್ನು ವಿಭಿನ್ನವಾಗಿ ಕಾಣಬಹುದು. ಕೆಲವು ದೀರ್ಘಾವಧಿಯ ಯೋಜನೆಗಳನ್ನು ಪುನರ್ವಿಮರ್ಶಿಸಬಹುದು. ಪ್ರತಿಯೊಂದು ಸಂಬಂಧವೂ ನಿಮ್ಮ ಜೀವನದಲ್ಲಿ ಶಾಶ್ವತ ಭಾವನಾತ್ಮಕ ಪ್ರವೇಶಕ್ಕೆ ಅರ್ಹವಲ್ಲ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಮನಸ್ಸಿನ ಶಾಂತಿ ಇಲ್ಲಿ ಮುಖ್ಯವಾಗಿರುತ್ತದೆ.

ಕುಂಭ ರಾಶಿ:
ವೃತ್ತಿಪರ ನಿರ್ಧಾರ ತೆಗೆದುಕೊಳ್ಳುವಿರಿ. ಕೆಲಸದ ಸ್ಥಳದ ಸಂಭಾಷಣೆಯು ಸಾಮಾನ್ಯಕ್ಕಿಂತ ಹೆಚ್ಚು ವೈಯಕ್ತಿಕವಾಗಿ ಅನಿಸಬಹುದು. ನಿಮ್ಮ ವೃತ್ತಿಜೀವನದ ಹಾದಿಯು ಅನಿಶ್ಚಿತವಾಗಿದ್ದರೆ, ಈ ಹುಣ್ಣಿಮೆಗೆ ಪರಿಹಾರ ಸಿಗುವುದು. ಸ್ಪಷ್ಟತೆ ಇಲ್ಲದ ಮಹತ್ವಾಕಾಂಕ್ಷೆಯು ಬೇಗನೆ ಭಾವನಾತ್ಮಕವಾಗಿ ಕ್ಷೀಣಿಸಬಹುದು.

ಮೀನ ರಾಶಿ:
ಈ ಹುಣ್ಣಿಮೆಯು ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಪ್ರಯಾಣ, ಕಲಿಕೆ, ಭವಿಷ್ಯದ ಯೋಜನೆ, ನಂಬಿಕೆ ವ್ಯವಸ್ಥೆಗಳು, ಮಾರ್ಗದರ್ಶಕರು ಮತ್ತು ಜೀವನದ ದಿಕ್ಕು ಎಲ್ಲದರ ಬಗ್ಗೆ ಸ್ಪಷ್ಟತೆ ಸಿಗುವುದು. ಕೆಲವೊಮ್ಮೆ ಹೊಸದನ್ನು ಕಲಿಯುವುದರಿಂದ ಸ್ಪಷ್ಟತೆ ಬರುವುದಿಲ್ಲ. ನಿಮಗೆ ಈಗಾಗಲೇ ತಿಳಿದಿರುವುದನ್ನು ಅಂತಿಮವಾಗಿ ಸ್ವೀಕರಿಸುವುದರಿಂದ ಬರುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications