• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮುಂಬೈ ಮಳೆ: ಬೈಕ್‌ನಿಂದ ಜಾರಿ ಬಸ್‌ ಚಕ್ರಕ್ಕೆ ಸಿಲುಕಿ ಮಹಿಳೆ ಸಾವು

By Nayana
|

ಮುಂಬೈ, ಜು.9: ಮುಂಬೈನಲ್ಲಿ ಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಗುಂಡಿಯಿಂದಾಗಿ ವಾಲಿದ ಬೈಕ್‌ನಿಂದ ಮಹಿಳೆ ಜಾರಿ ಬಿದ್ದು ಆಕೆಯ ಮೇಲೆ ಬಸ್‌ ಹರಿದುಹೋದ ಘಟನೆ ನಡೆದಿದೆ.

ಸತತ ಒಂದು ತಿಂಗಳಿನಿಂದ ಮುಂಬೈ, ದೆಹಲಿ ಸುತ್ತಮುತ್ತಲು ಮುಂಗಾರು ಚುರುಕುಗೊಂಡಿದ್ದು ಭಾರಿ ಮಳೆಯಾಗುತ್ತಿದೆ. ಈ ವೇಳೆ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಈ ರಸ್ತೆಯಲ್ಲಿ ಬೈಕ್ ಒಂದು ಚಲಿಸುತ್ತಿದ್ದಾಗ, ಬೈಕ್‌ ರಸ್ತೆಗುಂಡಿಯೊಳಗೆ ಇಳಿದಿದ್ದು ಆಯತಪ್ಪಿದೆ, ಬೈಕ್‌ನಲ್ಲಿ ಹಿಂದೆ ಕುಳಿತಿದ್ದ ಮಹಿಳೆ ಜಾರಿ ಬಿದ್ದಿದ್ದು ಆಕೆ ಮೇಲೆ ಬಸ್‌ ಹರಿದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ದೃಶ್ಯ ಅಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವರುಣನ ಆರ್ಭಟಕ್ಕೆ ಮುಂಬೈ ತತ್ತರ, ಸೇತುವೆ ಕುಸಿದು 6 ಜನರಿಗೆ ಗಾಯ

ಥಾಣೆಯ ನಿವಾಸಿಯಾಗಿರುವ ಮನೀಸಾ ಬೋರ್ ತಮ್ ಪತಿ ಜೊತೆ ಮನೆಗೆ ತೆರಳುವಾಗ ದುರ್ಘಟನೆ ಸಂಭವಿಸಿದೆ, ಮಳೆ ಬರುತ್ತಿದ್ದ ಕಾರಣ ಮನೀಶಾ ಕೊಡೆ ಹಿಡಿದು ಕೂತಿದ್ದರು. ಶಿವಾಜಿ ಚೌಕ್ ತಲುಪಿದ ವೇಳೆ ರಸ್ತೆ ಗುಂಡಿಯಿಂದಾಗಿ ಬೈಕ್ ವಾಲಿದೆ. ಆಗ ಮನೀಶಾ ಕೆಳಗೆ ಬಿದ್ದಿದ್ದಾರೆ, ಇದೇ ವೇಳೆ ವೇಗವಾಗಿ ಬರುತ್ತಿದ್ದ ಬಸ್ ಮನೀಶಾ ಮೈಮೇಲೆ ಹರಿದಿದೆ. ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮುಂಬಯಿಯ 26 ಹವಾಮಾನ ಕೇಂದ್ರಗಳು ಹಾಗೂ ಅದರ 14 ಉಪ ಕೇಂದ್ರಗಳಲ್ಲಿ 100 ಮಿಮೀಟರ್ ಗೂ ಹೆಚ್ಚು ಮಳೆ ದಾಖಲೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಳೆದೆರೆಡು ದಿನದಿಂದ ಮುಂಬೈನಲ್ಲಿ ಸುರಿದ ಮಳೆಗೆ ರಸ್ತೆಗಳೆಲ್ಲವೂ ಜಲಾವೃತವಾಗಿ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಮುಂಬೈನಲ್ಲಿ ಇನ್ನೂ ಐದು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಯ್ಯೋ ಈಗ ರಸ್ತೆ ದಾಟೋದ್ಹೇಗೆ?

ಅಯ್ಯೋ ಈಗ ರಸ್ತೆ ದಾಟೋದ್ಹೇಗೆ?

ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗಳು ಸಮುದ್ರವಾಗಿದೆ, ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡಲು ಕಷ್ಟವಾಗುತ್ತಿದೆ. ಪೊಲೀಸ್‌ ಸಿಬ್ಬಂದಿಯೊಬ್ಬರು ಯುವತಿಯರನ್ನು ರಸ್ತೆ ದಾಟಿಸಲು ಹರಸಾಹಸ ಪಡುತ್ತಿರುವ ದೃಶ್ಯವನ್ನು ನೋವು ನೋಡಬಹುದು.

ಮುಂಬೈ ಮಳೆ ತಂದೊಡ್ಡಿದ ಸಂಕಷ್ಟದ ಕ್ಷಣಗಳು

ಮುಂಬೈ ಮಳೆ ತಂದೊಡ್ಡಿದ ಸಂಕಷ್ಟದ ಕ್ಷಣಗಳು

ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಜನತೆ ಆತಂಕಗೊಂಡಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆ ಕಡಿಮೆಯಾದರೂ ಕೂಡ ವಾಹನ ಸುಗಮ ಸಂಚಾರಕ್ಕೆ ವಾರಗಳೇ ಬೇಕಾಗಬಹುದು.

ಸಾಕಪ್ಪಾ ಈ ಮಳೆಯ ಸಹವಾಸ

ಸಾಕಪ್ಪಾ ಈ ಮಳೆಯ ಸಹವಾಸ

ಮುಂಬೈನ ರಸ್ತೆಯೊಂದರಲ್ಲಿ ಸುರಿಯುತ್ತಿರುವ ಮಳೆ ಮಧ್ಯೆ ಇಬ್ಬರು ಬೈಕ್‌ ಸವಾರರು ನಿಂತಿರುವ ನೀರನಲ್ಲಿ ಬೈಕ್‌ ಓಡಿಸಿಕೊಂಡು ಹೋಗುತ್ತಿರುವ ದೃಶ್ಯ ನೋಡಬಹುದು.

ಬೀಚ್‌ ಬಳಿ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡಿ ಸಂತದ ಪಟ್ಟ ಯುವಕರು

ಬೀಚ್‌ ಬಳಿ ಮಕ್ಕಳೊಂದಿಗೆ ಫುಟ್‌ಬಾಲ್‌ ಆಡಿ ಸಂತದ ಪಟ್ಟ ಯುವಕರು

ಮುಂಬೈನಲ್ಲಿ ಕಳದ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ ಇದರಿಂದ ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಮಳೆ ಕಡಿಮೆಯಾದ ಸಮಯದಲ್ಲಿ ಮಕ್ಕಳು ಫುಟ್ಬಾಲ್‌ ಆಡಿ ಸಂತಸ ಪಟ್ಟಿದ್ದು ಹೀಗೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A woman was crushed under a bus after she fell off a bike that hit a pothole in heavy rain in Kalyan near Mumbai last Friday. The incident, caught on CCTV camera, once again exposes the poor state of infrastructure in and around Mumbai, exacerbated by rain each year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more