ನಿರ್ಮಾಪಕನಿಗೆ ಬೆದರಿಕೆ: ಸಂಜಯ್ ದತ್ ವಿರುದ್ಧ ಅರೆಸ್ಟ್ ವಾರೆಂಟ್!

Posted By:
Subscribe to Oneindia Kannada

ಮುಂಬೈ, ಏಪ್ರಿಲ್ 16: ನಟ ಸಂಜಯ್ ದತ್ ಮತ್ತೊಮ್ಮೆ ಬೇಡದ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಆಗ್ರಾದಲ್ಲಿ ಶೂಟಿಂಗ್ ಮೇಲೆ ಹಲ್ಲೆ ಆರೋಪ ಹೊತ್ತಿದ್ದರು. ಈಗ ನಿರ್ಮಾಪಕರೊಬ್ಬರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಸಂಜಯ್ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಜಾರಿಯಾಗಿದೆ.

ನಿರ್ಮಾಪಕ ಶಕೀಲ್ ನೂರನಿ ಅವರಿಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ನಟ ಸಂಜಯ್ ದತ್ ವಿರುದ್ಧ ಅರೆಸ್ಟ್ ವಾರೆಂಟ್ ಜಾರಿಗೊಳಿಸಲಾಗಿದೆ. ಸಂಜಯ್ ದತ್ ರಿಂದ 2 ಕೋಟಿ ರು ಪರಿಹಾರ ಮೊತ್ತ ಕೇಳಲಾಗಿದೆ.

Non -bialable arrest warrant issued against Actor Sanjay Dutt

ವಿವಾದದ ಹಿನ್ನೆಲೆ: 2002ರಲ್ಲಿ ನಿರ್ಮಾಪಕ ಶಕೀಲ್‌ ನೂರಾನಿ ಅವರ ನಿರ್ಮಾಣದ ಚಿತ್ರದಲ್ಲಿ ನಟಿಸಲು ಸಂಜಯ್ ದತ್ ಅವರು ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದರು. ಸಂಜಯ್ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ನೂರಾನಿ ಅವರಿಗೆ ಬೆದರಿಕೆ ಕರೆಗಳು ಆರಂಭವಾಯಿತು. ಸಂಜಯ್‌ ದತ್‌ ಪರವಾಗಿ ಭೂಗತ ಜಗತ್ತಿನಿಂದ ಬೆದರಿಕೆ ಕರೆ ಬಂದಿದೆ ಎಂದು ನೂರಾನಿ ಆರೋಪಿಸಿದ್ದಾರೆ.

50 ಲಕ್ಷ ರು ಒಪ್ಪಂದದ ಮೊತ್ತ ಹಾಗೂ 2 ಕೋಟಿ ರೂ.ನಷ್ಟವಾಗಿದ್ದು ಪರಿಹಾರ ಹಣವನ್ನು ಕೊಡಿಸುವಂತೆ ಕೋರ್ಟಿನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಕುರಿತಂತೆ ಸಂಜಯ್ ಗೆ ವಾರೆಂಟ್ ಜಾರಿಗೊಂಡಿದ್ದು, ಇದರ ವಿರುದ್ಧ ಸುಪ್ರೀಂಕೋರ್ಟಿಗೆ ನಟ ಸಂಜಯ್ ಮೇಲ್ಮನವಿ ಸಲ್ಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Non -bialable arrest warrant issued against Actor Sanjay Dutt over alleged threat to producer Shakil Noorani.
Please Wait while comments are loading...