ಆದರ್ಶ್ ಸೊಸೈಟಿ ಕಟ್ಟಡ ಸದ್ಯಕ್ಕೆ ನೆಲಸಮ ಮಾಡುವಂತಿಲ್ಲ
ಮುಂಬೈ, ಜುಲೈ 22: ಮುಂಬೈನ ಕೊಲಾಬಾದಲ್ಲಿರುವ ವಿವಾದಾತ್ಮಕ 31 ಮಹಡಿಗಳ ಆದರ್ಶ ಅಪಾರ್ಟ್ಮೆಂಟ್ ಕಟ್ಟಡ ಸದ್ಯಕ್ಕೆ ನೆಲಸಮ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ರಕ್ಷಣಾ ಇಲಾಖೆ ವ್ಯಾಪ್ತಿಗೆ ಕಟ್ಟಡದ ಸಂರಕ್ಷಣೆ ಜವಾಬ್ದಾರಿಯನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.
ಈ ಕಟ್ಟಡವನ್ನು ನಾಶಪಡಿಸುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಿವಿಧ ಅರ್ಜಿದಾರರಿಗೆ ನೋಟಿಸ್ಗಳನ್ನು ಜಾರಿ ಮಾಡಲಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರ ಕುಟುಂಬದವರಿಗೆ ಮೀಸಲಾಗಿದ್ದ ಈ ಕಟ್ಟಡವನ್ನು ದುರುಪಯೋಗ ಪಡಿಸಿಕೊಳ್ಳಲಾಗಿತ್ತು.

'ನಾವು ಕಟ್ಟಡವನ್ನು ಮತ್ತು ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳುತ್ತೇವೆ. ಯಾವುದನ್ನೂ ಕೆಡವಿ ಹಾಕುವುದಿಲ್ಲ' ಎಂದು ಕೇಂದ್ರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಅವರು ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್ ಮತ್ತು ಎ.ಎಂ. ಸಪ್ರೆ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು. ಈಗ ಸದ್ಯಕ್ಕೆ ಕಟ್ಟಡ ನೆಲಸಮ ಪ್ರಕ್ರಿಯೆಗೆ 12 ವಾರಗಳ ತಡೆಯಾಜ್ಞೆ ಸಿಕ್ಕಿದೆ.












Click it and Unblock the Notifications