ನೀರವ್ ಮೋದಿಗೆ ಸೇರಿದ 100 ಕೋಟಿ ಬಂಗಲೆ ನೆಲಸಮ!
ಮುಂಬೈ, ಮಾರ್ಚ್ 08: ಪಂಜಾಬ್ ನ್ಯಾಷನಲ್ ಬ್ಯಾಂಕಿನ ಬಹುಕೋಟಿ ಹಗರಣದ ಪ್ರಮುಖ ಆರೋಪಿ, ದೇಶದಿಂದ ಪರಾರಿಯಾಗಿರುವ ಉದ್ಯಮಿ ನೀರವ್ ಮೋದಿಗೆ ಸೇರಿರುವ ಬಂಗಲೆಯೊಂದನ್ನು ಸ್ಫೋಟಕಗಳ ಮೂಲಕ ಇಂದು ನೆಲ ಸಮಗೊಳಿಸಲಾಯಿತು.
ಮಹಾರಾಷ್ಟ್ರದ ರಾಯ್ ಗಢ ಜಿಲ್ಲೆಯ ಆಲಿಬಾಗ್ ನಲ್ಲಿದ್ದ ಈ ಬಂಗಲೆ ಮೌಲ್ಯ 100 ಕೋಟಿ ರುಗೂ ಅಧಿಕ ಎನ್ನಲಾಗಿದೆ. ಬಾಂಬೆ ಹೈಕೋರ್ಟ್ ಆದೇಶದಂತೆ ರಾಯಗಢದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಟ್ಟಡ ನೆಲಸಮ ಕಾರ್ಯಾಚರಣೆ ಯಶಸ್ವಿಯಾಗಿದೆ.

ಮುಂಬೈನಿಂದ 90 ಕಿ.ಮೀ ದೂರದಲ್ಲಿರುವ ಕಡಲ ದಡದಲ್ಲಿ ನೀರವ್ ಮೋದಿಯ ರೂಪನ್ಯ ಎಂಬ ಹೆಸರಿನ ಈ ಬಂಗಲೆ ನಿರ್ಮಾಣದಲ್ಲಿ ಕರಾವಳಿ ನಿಯಂತ್ರಣ ವಲಯ ಹಾಗೂ ಕಾನೂನು ನಿಯಮ ಉಲ್ಲಂಘಿಸಲಾಗಿತ್ತು. ಸುಮಾರು 33, 000 ಚದರಡಿಯಲ್ಲಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದ್ದ ಐಷಾರಾಮಿ ಬಂಗಲೆಯನ್ನು ಡೈನಾಮೆಟ್ ಬಳಸಿ ಹಂತ ಹಂತವಾಗಿ ಕೆಡವಲಾಯಿತು.
Maharashtra: Authorities continue demolition of PNB scam accused Nirav Modi's bungalow in Alibag, Raigad district. pic.twitter.com/Tyu5Anz1VQ
— ANI (@ANI) March 8, 2019
ಈ ಬಂಗಲೆಯ ಅಡಿಪಾಯ, ಮತ್ತು ಪಿಲ್ಲರ್ ಗಳು ಗಟ್ಟಿಯಾಗಿರುವುದರಿಂದ ಸ್ಫೋಟಕಗಳನ್ನು ಬಳಸಿ ಕೆಡವಬೇಕಿದೆ ಎಂದು ಕೋರ್ಟಿಗೆ ಮಹಾರಾಷ್ಟ್ರ ಸರ್ಕಾರ ಮಾಹಿತಿ ನೀಡಿತ್ತು. ಈ ಬಂಗಲೆಯ ವಿರುದ್ಧ 2009ರಲ್ಲಿ ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ಬಾಂಬೆ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪರಿಸರ ವಲಯವನ್ನು ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು.
#WATCH Maharashtra: PNB Scam accused Nirav Modi's bungalow in Alibag, Raigad district demolished by authorities. pic.twitter.com/ngrJstNjoa
— ANI (@ANI) March 8, 2019
ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಜನವರಿ 25ರಂದು ಆರಂಭವಾಗಿತ್ತು. ಆದರೆ, ಎರಡೇ ದಿನದಲ್ಲಿ ಈ ಕಾರ್ಯ ಸ್ಥಗಿತವಾಗಿತ್ತು. ಬಂಗಲೆ ಒಳಭಾಗದಲ್ಲಿದಲ್ಲಿರುವ ಬೆಲೆಬಾಳುವ ವಸ್ತಗಳನ್ನು ಜಪ್ತಿ ಮಾಡುವ ನಿಟ್ಟಿನಲ್ಲಿ ನೆಲಸಮ ಕಾರ್ಯ ನಿಲ್ಲಿಸಲಾಗಿತ್ತು. ಮೋದಿ ಬಂಗಲೆ ಅಲ್ಲದೆ ಇನ್ನು 58 ಕಟ್ಟಡಗಳ ನೆಲಸಮಕ್ಕೆ ಕೋರ್ಟ್ ಆದೇಶಿಸಿದೆ.












Click it and Unblock the Notifications