ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಕಾಂಗ್ರೆಸ್ ವಿರುದ್ಧ ಘರ್ಜಿಸಿದ ಮೋದಿ

|
Google Oneindia Kannada News

ಮುಂಬೈ, ಡಿ.22 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮುಂಬೈನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘರ್ಜಿಸಿದ್ದಾರೆ. ಕಪ್ಪು ಹಣ ವಾಪಸ್ ತರದ, ದೇಶದ ಯುವ ಜನರಿಗೆ ಉದ್ಯೋಗ ದೊರಕಿಸಿ ಕೊಡದ ಕಾಂಗ್ರೆಸ್ ಸರ್ಕಾರವನ್ನು ನಾವು ಕಿತ್ತೊಗೆಯೋಣ, ಭಾರತವನ್ನು ಕಾಂಗ್ರೆಸ್ ಮುಕ್ತವಾಗಿಸೋಣ ಎಂದು ಮೋದಿ ಕರೆ ನೀಡಿದ್ದಾರೆ.

ಮುಂಬೈನ ಎಂಎಂಆರ್ ಡಿಎ ಮೈದಾನದಲ್ಲಿ ಭಾನುವಾರ ನರೇಂದ್ರ ಮೋದಿ ಮಹಾಘರ್ಜನೆ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಮುಂಬೈ ಗುಜರಾತಿಗಳಿಗೆ ಎರಡನೇ ಮನೆಯಂತೆ ಎಂದು ಹೇಳುವ ಮೂಲಕ ಮುಂಬೈ ಜನರ ಚಪ್ಪಾಳೆ ಗಿಟ್ಟಿಸಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್, ಬಿಜೆಪಿ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ ಮೋದಿಗೆ ಜೊತೆಗೆ ಮುಂಬೈಗೆ ಆಗಮಿಸಿದ್ದಾರೆ.

ಕಪ್ಪುಹಣ, ಭ್ರಷ್ಟಾಚಾರ, ಯುವಕರಿಗೆ ಉದ್ಯೋಗ ಮುಂತಾದ ವಿಷಯಗಳ ಕುರಿತು ನಿರರ್ಗಳವಾಗಿ ಮಾತನಾಡಿದ ಮೋದಿ, ದೇಶ ಅಭಿವೃದ್ಧಿಯಾಗಬೇಕಾದರೆ, ದೇಶ ಮೊದಲು ಕಾಂಗ್ರೆಸ್ ಮುಕ್ತವಾಗಬೇಕು. ದೇಶವನ್ನು ಕಾಂಗ್ರೆಸ್ ಮುಕ್ತವಾಗಿಸಲು ಎಲ್ಲರೂ ಬಿಜೆಪಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. [ಮೋದಿ ಭಾಷಣದ ಮುಖ್ಯಾಂಶಗಳು]

ಮುಂಬೈ ನಮಗೆ ಎರಡನೇ ಮನೆ

ಮುಂಬೈ ನಮಗೆ ಎರಡನೇ ಮನೆ

ಮರಾಠಿಯಲ್ಲಿ ಭಾಷಣ ಆರಂಭಿಸಿದ ಮೋದಿ ಗುಜರಾತಿಗಳಿಗೆ ಮುಂಬೈ ಎರಡನೇ ಮನೆಯಿದ್ದಂತೆ, 1960ಕ್ಕಿಂತ ಮೊದಲು ನಾವು ಒಂದಾಗಿದ್ದೆವು. 50 ವರ್ಷಗಳ ನಂತರ ನಾವು ಬೇರೆ ಬೇರೆಯಾಗಿದ್ದೇವೆ. ಮಹಾರಾಷ್ಟ್ರ ನಮ್ಮ ನಮ್ಮ ದೊಡ್ಡನ್ಣನಿದ್ದಂತೆ ಎಂದು ಮೋದಿ ಮುಂಬೈವಾಸಿಗಳ ಚಪ್ಪಾಳೆ ಗಿಟ್ಟಿಸಿದರು.

ಗುಜರಾತ್ ಅಭಿವೃದ್ಧಿ ಬಗ್ಗೆ ಪ್ರಶ್ನೆ ಇತ್ತು

ಗುಜರಾತ್ ಅಭಿವೃದ್ಧಿ ಬಗ್ಗೆ ಪ್ರಶ್ನೆ ಇತ್ತು

ಗುಜರಾತ್ ಪ್ರತ್ಯೇಕ ರಾಜ್ಯವಾದಾಗ ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಶ್ನೆ ಎದ್ದಿತ್ತು. ಸದ್ಯ ರಾಜ್ಯ ಅಭಿವೃದ್ಧಿಯ ಉತ್ತುಂಗದಲ್ಲಿದೆ. ರಾಜ್ಯದ ಉತ್ತಮ ಜನರಿಗೆ ಅನುಕೂಲವಾಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ.

ನಾವು ಒಟ್ಟಿಗೆ ಪಯಣ ಆರಂಭಿಸಿದೆವು

ನಾವು ಒಟ್ಟಿಗೆ ಪಯಣ ಆರಂಭಿಸಿದೆವು

ಪ್ರತ್ಯೇಕ ರಾಜ್ಯಗಳಾದ ಬಳಿಕ ಗುಜರಾತ್ ಮತ್ತು ಮಹಾರಾಷ್ಟ್ರ ಒಟ್ಟಿಗೆ ಪಯಣ ಆರಂಭಿಸಿದೆವು. ಗುಜರಾತ್ 14 ಮುಖ್ಯಮಂತ್ರಿಗಳನ್ನು ಮತ್ತು ಮಹಾರಾಷ್ಟ್ರ 28 ಮುಖ್ಯಮಂತ್ರಿಗಳನ್ನು ಕಂಡಿದೆ.

ಕಾಂಗ್ರೆಸ್ ಸಮಸ್ಯೆ ಏನು

ಕಾಂಗ್ರೆಸ್ ಸಮಸ್ಯೆ ಏನು

ನಮಗೆ ಕಾಂಗ್ರೆಸ್ ಪಕ್ಷವನ್ನು ಅರ್ಥಮಾಡಿಕೊಳ್ಳುವುದೇ ಸವಾಲಾಗಿದೆ. ಆ ಪಕ್ಷದವರಿಗೆ ಅವರ ಮತ್ತು ಜನರ ಸಮಸ್ಯೆ ತಿಳಿಯುವುದಿಲ್ಲ ಆದ್ದರಿಂದ ಅವರು ಜನರ ಸಮಸ್ಯೆ ಬಗೆಹರಿಸಲು ಯಾವುದೇ ಯೋಜನೆಗಳನ್ನು ಘೋಷಿಸುವುದಿಲ್ಲ ಎಂದು ಮೋದಿ ಆರೋಪಿಸಿದರು.

ಕಾಂಗ್ರೆಸ್ ಸಮಸ್ಯೆಗಳ ಮೂಲ

ಕಾಂಗ್ರೆಸ್ ಸಮಸ್ಯೆಗಳ ಮೂಲ

ದೇಶದ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾಂಗ್ರೆಸ್ ಪಕ್ಷ. ನಮ್ಮ ಸಮಸ್ಯೆಗಳು ಬಗೆಹರಿಯಬೇಕಾದರೆ ಭಾರತ ಕಾಂಗ್ರೆಸ್ ಮುಕ್ತವಾಗಬೇಕು. ಕ್ವಿಟ್ ಇಂಡಿಯಾ ಚಳವಳಿ ಮುಂಬೈನಲ್ಲಿ ನಡೆದು ಬ್ರಿಟಿಷರು ದೇಶ ಬಿಟ್ಟು ಹೋಗಿದ್ದರು. ಸದ್ಯ ಅಂತಹ ಚಳವಳಿ ನಡೆದು ದೇಶ ಕಾಂಗ್ರೆಸ್ ಮುಕ್ತವಾಗಬೇಕು.

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತದೆ

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತದೆ

ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ. ಒಡೆದು ಆಳುವ ನೀತಿಯನ್ನು ಅದು ಅನುಸರಿಸುತ್ತದೆ. ಇದನ್ನು ಅವರು ಬ್ರಿಟಿಷರಿಂದ ಕಲಿತಿದ್ದಾರೆ. ಸರ್ದಾರ್ ಪಟೇಲ್ ಭಾರತವನ್ನು ಒಗ್ಗೂಡಿಸಿದರು. ಆದರೆ, ಕಾಂಗ್ರೆಸ್ ಭಾಷೆಯ ಆಧಾರದಲ್ಲಿ ರಾಜ್ಯ, ಜಿಲ್ಲೆ, ಪಟ್ಟಣ, ಗ್ರಾಮಗಳನ್ನು ಒಡೆಯುತ್ತಿದೆ.

ವೋಟ್ ಬ್ಯಾಂಕ್ ರಾಜಕಾರಣದಿಂದ ಮುಕ್ತವಾಗಬೇಕು

ವೋಟ್ ಬ್ಯಾಂಕ್ ರಾಜಕಾರಣದಿಂದ ಮುಕ್ತವಾಗಬೇಕು

ಭಾರತ ವೋಟ್ ಬ್ಯಾಂಕ್ ರಾಜಕಾರಣದಿಂದ ಮುಕ್ತವಾಗಬೇಕು. ಅಲ್ಲಿಯ ತನಕ ನಾವು ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಬಿಜೆಪಿ ಅಭಿವೃದ್ಧಿಯ ಮಂತ್ರ ಪಠಿಸುತ್ತಿದೆ. ಅದರ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿಯಿಂದ ಮಾತ್ರ ದೇಶದ ಜನರ ಜೀವನ ಸುಧಾರಣೆ ಸಾಧ್ಯ.

ಮಹಾರಾಷ್ಟ್ರದಲ್ಲಿ ಏಕೆ ರೈತರು ಸಾಯುತ್ತಾರೆ

ಮಹಾರಾಷ್ಟ್ರದಲ್ಲಿ ಏಕೆ ರೈತರು ಸಾಯುತ್ತಾರೆ

ಮಹಾರಾಷ್ಟ್ರದ ನೀರಾವರಿ ಯೋಜನೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಆದ್ದರಿಂದ ರೈತರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರವಿದ್ದರೆ, ರೈತ ಆತ್ಮಹತ್ಯೆಯನ್ನು ತಡೆಗಟ್ಟುತ್ತಿತ್ತು.

ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ

ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತದೆ

ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದನ್ನು ನಾನು ಕೇಳಿದ್ದೇನೆ. ಅವರ ಪಕ್ಷದ ಸರ್ಕಾರವಿರುವ ಮಹಾರಾಷ್ಟ್ರದಲ್ಲಿ ಏಕೆ ಆದರ್ಶ ಸೊಸೈಟಿ ಹಹರಣ ನಡೆಯಿತು ಎಂದು ಉತ್ತರ ನೀಡುವರೆ? ಎಂದು ಮೋದಿ ಪ್ರಶ್ನಿಸಿದರು.

ಕಪ್ಪುಹಣ ಎಲ್ಲಿದೆ ಎಂದು ದೇಶದ ಮಗುವಿಗೂ ಗೊತ್ತು

ಕಾಂಗ್ರೆಸ್ ಕೊಳ್ಳೆ ಹೊಡೆದಿರುವ ಕಪ್ಪು ಹಣ ಎಲ್ಲಿದೆ ಎಂದು ದೇಶದ ಮಗುವಿಗೂ ಗೊತ್ತು

ಕಪ್ಪುಹಣ ವಾಪಸ್ ತರುವರೆ?

ಕಪ್ಪುಹಣ ವಾಪಸ್ ತರುವರೆ?

ಅಡ್ವಾಣಿ ಅವರ ನೇತೃತ್ವದಲ್ಲಿ ಬಿಜೆಪಿಯ ಎಲ್ಲಾ ಸಂಸದರು ಕಪ್ಪು ಹಣವನ್ನು ವಾಪಸ್ ತನ್ನಿ ಎಂದು ಸರ್ಕಾರಕ್ಕೆ ಪತ್ರ ಬರೆದವು. ಆದರೆ, ಕಾಂಗ್ರೆಸ್ ಅದನ್ನು ಮಾಡಿತೇ, ಕಪ್ಪು ಹಣದ ಬಗ್ಗೆ ಕಠೋರ ನೀತಿಯನ್ನಯ ರೂಪಿಸುವಲ್ಲಿಯೂ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.

ಕೇಬಲ್ ಕಟ್ ಮಾಡುವುದು ಅವರ ಸಾಹಸ

ಕೇಬಲ್ ಕಟ್ ಮಾಡುವುದು ಅವರ ಸಾಹಸ

ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ನರೇಂದ್ರ ಮೋದಿ ಭಾಷಣವಿದ್ದಾಗ ಟಿವಿ ಕೇಬಲ್ ಕಟ್ ಆಗಿರುತ್ತದೆ. ಇದು ಭಾನುವಾರ ಮುಂಬೈನಲ್ಲೂ ನಡೆದಿದೆ ಎಂದು ತಿಳಿದಿದೆ. ಇದು ಕಾಂಗ್ರೆಸ್ ಸರ್ಕಾರದ ಸಾಹಸದ ಕಾರ್ಯ ಎಂದು ಭಾವಿಸಿದೆ ಎಂದು ಮೋದಿ ಕುಟುಕಿದರು.

ಮೋದಿ ಜನರ ಹೃದಯಲ್ಲಿದ್ದಾರೆ

ಟಿವಿಯಲ್ಲಿ ಮೋದಿ ಇದ್ದರೋ ಇಲ್ಲವೋ ಎಂಬುದು ಮುಖ್ಯವಲ್ಲ, ಮೋದಿ ಜನರ ಹೃದಯದಲ್ಲಿದ್ದಾರೆ.

ಬಾಲಿವುಡ್ ನೆನಪಾಗುತ್ತದೆ

ನಮಗೆ ಬಾಲಿವುಡ್ ನೆನಪಾಗುತ್ತದೆ

2014ರ ನಮ್ಮ ಚುನಾವಣಾ ಮಂತ್ರ

ನಮ್ಮ ಚುನಾವಣಾ ಮಂತ್ರ

English summary
BJP’s prime ministerial candidate Narendra Modi addressed Maha Garjna Rally' at Mumbai on Sunday, December 22. In his speech Modi said, Congress knows vote-bank politics, Modi asked all people to begin a joint protest demanding "Congress free India".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X