ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು: 'ದಿ ಅದರ್ ಎಂಡ್ ಆಫ್ ದಿ ಕಾರಿಡಾರ್' ಲೋಕಾರ್ಪಣೆ

|
Google Oneindia Kannada News

ಮೈಸೂರು, ಫೆ. 9 : ಎಸ್ ಪಿಐ ಸಂಸ್ಥೆಯ ಮಾಧ್ಯಮ ಸಂಯೋಜಕಿ ಸುಜಾತಾ ರಾಜ್ ಪಾಲ್ ವಿರಚಿತ 'ದಿ ಅದರ್ ಎಂಡ್ ಆಫ್ ದಿ ಕಾರಿಡಾರ್' ಕೃತಿಯನ್ನು ಮೈಸೂರು ರಾಣಿ ಪ್ರಮೋದಾದೇವಿ ಬಿಡುಗಡೆ ಮಾಡಿದರು. ಎಡಿಜಿ ಪ್ರವೀಣ್ ಸೂದ್, ವಿನುತಾ ಸೂದ್, ಪತ್ರಕರ್ತ ಕೆ.ಬಿ.ಗಣಪತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

ನಾನು ಪುಸ್ತಕದ ಧ್ಯೇಯವನ್ನು ಮೆಚ್ಚಿಕೊಂಡಿದ್ದೇನೆ. ಪ್ರತಿಯೊಬ್ಬರು ಈ ಪುಸ್ತಕವನ್ನು ಓದಲೇಬೇಕು. ಮುಂದಿನ ದಿನಗಳಲ್ಲಿ ಲೇಖಕಿಗೆ ಮತ್ತಷ್ಟು ಯಶಸ್ಸು ಸಿಗಲಿ ಎಂದು ರಾಣಿ ಪ್ರಮೋದಾದೇವಿ ಹಾರೈಸಿದರು. ಜನವರಿ 31 ರಂದು ಮೈಸೂರಿನ ಸ್ಫೋರ್ಟ್ ಕ್ಲಬ್ ಆವರಣದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು. [ಎಸ್ ಪಿಐಗೆ ಆಗ್ನೇಯ ಏಷ್ಯಾದ ಪ್ರತಿಷ್ಠಿತ ಪ್ರಶಸ್ತಿ]

mysuru

ಪುಸ್ತಕ ಪ್ರತಿಯೊಬ್ಬ ಮಹಿಳೆಯ ಕತೆ ಹೇಳುತ್ತದೆ. ಮಹಿಳೆ ಸಮಾಜದಲ್ಲಿ ಎದುರಿಸುತ್ತಿರುವ ಸವಾಲು ಮತ್ತು ಆಕೆಯ ಸಾಧನೆಗಳನ್ನು ವಿವರಿಸುತ್ತದೆ ಎಂದು ಎಡಿಜಿ ಪ್ರವೀಣ್ ಸೂದ್ ಹೇಳಿದರು.

ನಾನು ಯಾವುದೇ ಪುಸ್ತವನ್ನು ಓದಲು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತೇನೆ. ಆದರೆ ಪುಸ್ತಕ ಇಷ್ಟವಾಗಿದ್ದು ಕೆಲವೇ ದಿನದಲ್ಲಿ ಓದಿ ಮುಗಿಸಲಿದ್ದೇನೆ ಎಂದು ಹೇಳಿದರು.

mysuru 1

ಒಂದು ಕೃತಿ ಅಥವಾ ಪುಸ್ತಕ ರಚನೆ ಮಾಡುವಾಗ ಎಂತೆಂಥ ಸವಾಲುಗಳು ಎದುರಾಗುತ್ತವೆ ಎಂಬದು ಸಾಮಾನ್ಯ ಜನರಿಗೆ ಗೊತ್ತಾಗುವುದಿಲ್ಲ. ಅವನ್ನೆಲ್ಲ ಮೀರಿ ಸಾಹಿತಿ ವಸ್ತುಸ್ಥಿತಿಯನ್ನು ಚಿತ್ರಿಸಬೇಕಾಗುತ್ತದೆ ಎಂದು ಪತ್ರಕರ್ತ ಮತ್ತು ಸಾಹಿತಿ ಕೆ.ಬಿ.ಗಣಪತಿ ತಮ್ಮ ಅನುಭವ ತಿಳಿಸಿದರು.[ಮೈಸೂರು: ಎಸ್ ಪಿಐ ಸಂಸ್ಥೆ ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ]

ಸಾಹಿತಿ ಸುಜಾತಾ ರಾಜ್ ಪಾಲ್ ಯಾರು?
ಕಾರ್ಪೋರೆಟ್ ಸಂಸ್ಥೆ ಎಸ್ ಪಿಐ ದ ಮಾಧ್ಯಮ ಸಂಚಾಲಕಿಯಾಗಿ ಕೆಲಸ ಮಾಡುತ್ತಿರುವ ಸುಜಾತಾ ರಾಜ್ ಪಾಲ್ ಮಹಿಳಾ ಚಿಂತಕಿಯಾಗಿ ಗುರುತಿಸಿಕೊಂಡಿದ್ದಾರೆ.

ಹವ್ಯಾಸಿ ಪತ್ರಕರ್ತೆಯಾಗಿ ಗುರುತಿಸಿಕೊಂಡಿರುವ ಸುಜಾತಾ ಫೇಮಿನಾ, ಡೆಕ್ಕನ್ ಹೆರಾಲ್ಡ್, ಸ್ಟಾರ್ ಆಫ್ ಮೈಸೂರು ಪತ್ರಿಕೆಗಳಿಗೆ ನಿರಂತರವಾಗಿ ಅಂಕಣಗಳನ್ನು ಬರೆಯುತ್ತಿದ್ದಾರೆ.

mysuru 3

ಈ ಪುಸ್ತಕ ನಿಮ್ಮ ಶಕ್ತಿ ಮತ್ತು ಸಾಧನೆಗಳನ್ನು ನೀವೇ ಅವಲೋಕನ ಮಾಡಿಕೊಳ್ಳುವಂತೆ ಮಾಡುವುದು. ಮೈಸೂರು ಇಂಥ ಸಾಮಾಜಿಕ ಬರವಣಿಗೆಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಕನ್ನಡಕ್ಕೂ ಈ ಪುಸ್ತಕ ಭಾಷಾಂತರವಾಗಬೇಕು ಎಂಬ ಇಚ್ಛೆಯಿದೆ ಎಂದು ಸುಜಾತಾ ಹೇಳಿದರು.

ಚಂಡಿಘಢ ಮೂಲದ ಸುಜಾತಾ ಕಳೆದ 12 ವರ್ಷಗಳಿಂದ ಮೈಸೂರಲ್ಲಿ ನೆಲೆ ನಿಂತಿದ್ದಾರೆ. ದೆಹಲಿಯ ಮಹಾವೀರ್ ಪಬ್ಲಿಕೇಷನ್ ನೆರವಿನಲ್ಲಿ ತಮ್ಮ ಪ್ರಥಮ ಕೃತಿ 'ದಿ ಅದರ್ ಎಂಡ್ ಆಫ್ ದಿ ಕಾರಿಡಾರ್' ಹೊರ ತಂದಿದ್ದಾರೆ.

English summary
The Other End of the Corridor, a novel written by Sujata Rajpal was released by Her Highness Mrs Pramoda Devi Wadiyar at Mysore Sports Club. Praveen Sood, Additional Director General of Police Karnataka State Reserve Police Bangaluru, Vinita Sood , and K.B. Ganapathy, Editor - in- Chief Star of Mysore were the guests of honor for the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X