Get Updates
Get notified of breaking news, exclusive insights, and must-see stories!

ಕ್ಯಾನ್ಸರ್ ಚಿಕಿತ್ಸೆ ನಂತರ ಮುಂಬೈಗೆ ಮರಳಿದ ಸೋನಾಲಿ ಬೇಂದ್ರೆ

Recommended Video

      ಕ್ಯಾನ್ಸರ್ ಚಿಕಿತ್ಸೆ ನಂತರ ನ್ಯೂಯಾರ್ಕ್ ನಿಂದ ಮುಂಬೈಗೆ ವಾಪಸಾದ ಸೋನಾಲಿ ಬೇಂದ್ರೆ | FILMIBEAT KANNADA

      ಮುಂಬೈ, ಡಿಸೆಂಬರ್ 03: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಅವರು ಇದೀಗ ಮುಂಬೈಗೆ ವಾಪಸ್ಸಾಗಿದ್ದಾರೆ.

      ಅಮೆರಿಕದ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆಪಡೆಯುತ್ತಿದ್ದ ಅವರು, ಇದೀಗ ಚಿಕಿತ್ಸೆ ಮುಗಿಸಿ ವಾಪಸ್ಸಾಗಿದ್ದು, ಅವರ ಆರೋಗ್ಯ ಸುಧಾರಿಸಿದೆ.

      "ಸೋನಾಲಿ ಬೇಂದ್ರೆ ಕ್ಷೇಮವಾಗಿದ್ದಾರೆ. ಅವರು ಗುಣಮುಖರಾಗುತ್ತಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ಮುಗಿದಿದೆ. ಆದರೆ ಈ ಕಾಯಿಲೆ ಮತ್ತೆ ಮತ್ತೆ ಬರುವ ಸಾಧ್ಯತೆ ಇರುವುದರಿಂದ ನಿಯಮಿತವಾಗಿ ತಪಾಸಣೆ ಮಾಡಿಸುವುದು ಅನಿವಾರ್ಯ" ಎಂದು ಸೋನಾಲಿ ಬೇಂದ್ರೆ ಅವರ ಪತಿ ಗೋಲ್ಡಿ ಬೆಹ್ಲ್ ತಿಳಿಸಿದ್ದಾರೆ.

      Mumbai: Sonali Bendre returns from New York after cancer treatment

      ತಮಗೆ ಕ್ಯಾನ್ಸರ್ ಇದೆ ಎಂಬುದು ತಿಳಿಯುತ್ತಿದ್ದಂತೆಯೇ ಸ್ವಲ್ಪವೂ ಎದೆಗುಂದದ ಸೋನಾಲಿ ಬೇಂದ್ರೆ ಅವರು, "ನಾನು ಈ ರೋಗವನ್ನು ಗೆಲ್ಲುತ್ತೇನೆ" ಎಂಬ ಮನೋಬಲ ಬೆಳೆಸಿಕೊಂಡರು.

      "ಕೆಲವೊಮ್ಮೆ ಅನಿರೀಕ್ಷಿತ ಸಂದರ್ಭಗಳಲ್ಲಿ ಜೀವನ ನಮ್ಮನ್ನು ಸಂಕಷ್ಟಕ್ಕೆ ನೂಕುತ್ತವೆ. ನಾನು ಅಪಾಯಕಾರಿ ಪ್ರಮಾಣದ ಕ್ಯಾನ್ಸರ್‌ಗೆ ತುತ್ತಾಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ನಿಜಕ್ಕೂ ಇದು ಆವರಿಸಿದ್ದು ನನಗೆ ಗೊತ್ತೇ ಆಗಿರಲಿಲ್ಲ. ಸಣ್ಣಪುಟ್ಟ ನೋವಿನ ಕಾರಣ ಕೆಲವು ಪರೀಕ್ಷೆಗೆ ಒಳಗಾಗಬೇಕಾಯಿತು. ಅದರಿಂದ ಈ ಅನಿರೀಕ್ಷಿತ ರೋಗದ ಪತ್ತೆಯಾಗಿದೆ" ಎಂದು 43 ವರ್ಷದ ಸೋನಾಲಿ ಬೇಂದ್ರೆ ತಮಗಾಗಿರುವ ಆಘಾತ ಹಂಚಿಕೊಂಡಿದ್ದರು.

      ಆದರೆ ಕಳೆದ ಜುಲೈನಿಂದ ನಿರಂತರವಾಗಿ ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಸದ್ಯಕ್ಕೆ ಗುಣಮುಖರಾಗಿ ಸ್ವದೇಶಕ್ಕೆ ಮರಳಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+