ಕೊರೊನಾ ರೋಗಿಗಳ ಸೇವೆಗೆ ಆಟೋ ಚಾಲಕನಾದ ಶಿಕ್ಷಕ; ವಿವಿಎಸ್ ಲಕ್ಷ್ಮಣ್ ಟ್ವೀಟ್

ಮುಂಬೈ, ಮೇ 4: ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದ್ದು, ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಅವಶ್ಯಕತೆ ಇದ್ದವರಿಗೆ ನೆರವಾಗಲು ಹಲವರು ಮುಂದೆ ಬರುತ್ತಿದ್ದಾರೆ. ಇದೀಗ ಮುಂಬೈನಲ್ಲಿಯೂ ಶಿಕ್ಷಕರೊಬ್ಬರು ಕೊರೊನಾ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ.

ಕೊರೊನಾ ರೋಗಿಗಳಿಗೆ ಆಟೋ ಸೇವೆಯನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಇಂಗ್ಲಿಷ್ ಶಿಕ್ಷಕರಾಗಿರುವ ದತ್ತಾತ್ರೇಯ ಸಾವಂತ್ ಎಂಬುವರು ತಾವೇ ಆಟೋ ಓಡಿಸಿ ಕೊರೊನಾ ರೋಗಿಗಳಿಗೆ ನೆರವಾಗುತ್ತಿದ್ದಾರೆ.

ಇವರ ಫೋಟೊವನ್ನು ಭಾರತೀಯ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್ ಹಂಚಿಕೊಂಡಿದ್ದು, ಶಿಕ್ಷಕರ ಸೇವೆಯನ್ನು ಕೊಂಡಾಡಿದ್ದಾರೆ.

Mumbai School Teacher Drives Auto To Help Covid Patients

ಶಿಕ್ಷಕರೂ ಆಗಿರುವ ದತ್ತಾತ್ರೇಯ ಸಾವಂತ್ ಅವರು ಕೊರೊನಾ ರೋಗಿಗಳಿಗಾಗಿ ಉಚಿತ ಸೇವೆ ನೀಡುತ್ತಿದ್ದಾರೆ. ಈ ಸೇವೆಗೆ ಹ್ಯಾಟ್ಸ್ ಆಫ್ ಎಂದು ಟ್ವಿಟ್ಟರ್‌ನಲ್ಲಿ ಹೊಗಳಿದ್ದಾರೆ.

"ನಾನು ಕೊರೊನಾ ರೋಗಿಗಳನ್ನು ಉಚಿತವಾಗಿ ಕೋವಿಡ್ ಕೇರ್ ಹಾಗೂ ಆಸ್ಪತ್ರೆಗಳಿಗೆ ಬಿಡುತ್ತೇನೆ. ಹಾಗೆಯೇ ಆಸ್ಪತ್ರೆಯಿಂದ ಮನೆಗಳಿಗೆ ಕರೆದುಕೊಂಡು ಹೋಗುತ್ತೇನೆ. ಇದುವರೆಗೂ 26 ರೋಗಿಗಳಿಗೆ ಈ ರೀತಿಯ ಸೇವೆ ನೀಡಿದ್ದೇನೆ" ಎಂದು ಸಾವಂತ್ ಅವರು ಹೇಳಿಕೊಂಡಿದ್ದಾರೆ.

ನಗರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದೆ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಕೆಲವರು ಸಾಯುತ್ತಿದ್ದಾರೆ. ಖಾಸಗಿ ಆಂಬುಲೆನ್ಸ್‌ಗಳು ಕೆಲವು ಬಡವರಿಗೆ ಕೈಗೆಟುಕದಂತಿವೆ. ಹೀಗಾಗಿ ಈ ಆಟೊ ಸೇವೆ ನೀಡಲು ಆರಂಭಿಸಿದೆ ಎಂದು ಹೇಳಿದ್ದಾರೆ ಅವರು.

ಕೊರೊನಾ ಪ್ರಕರಣಗಳು ಕಡಿಮೆಯಾಗುವವರೆಗೂ ಈ ಸೇವೆ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಹಲವರು ಸಾವಂತ್ ಅವರಿಗೆ ಆರ್ಥಿಕ ನೆರವನ್ನು ನೀಡುತ್ತಿದ್ದಾರೆ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಈತನ ಆಟೋಗೆ ಇಂಧನ ಒದಗಿಸುವುದಾಗಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+