ಮುಂಬೈನ ಮೊದಲ ಪ್ರನಾಳ ಶಿಶು ತಾಯಿಯಾದ ಕ್ಷಣ

Posted By:
Subscribe to Oneindia Kannada

ಮುಂಬೈ, ಮಾರ್ಚ್ 08: ವಿಶ್ವ ಮಹಿಳಾ ದಿನಾಚರಣೆಗೂ ಮುನ್ನ ದಿನ ಮುಂಬೈನ ಮೊದಲ ಪ್ರನಾಳ ಶಿಶು ಹರ್ಷಾ ಚಾವ್ಡ ಅವರು ಪರಿಪೂರ್ಣ ಮಹಿಳೆಯಾಗಿ ಅರ್ಥಾತ್ ತಾಯ್ತನ ಪಡೆದುಕೊಂಡಿದ್ದಾರೆ. ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

1986ರ ಆಗಸ್ಟ್ ತಿಂಗಳಿನಲ್ಲಿ ಪ್ರನಾಳ ಶಿಶುವಾಗಿ ಕಣ್ಬಿಟ್ಟಿದ್ದ ಹರ್ಷಾ ಅವರು ಸೋಮವಾರ (ಮಾರ್ಚ್ 07) ಮುಂಬೈಯ ಜಸ್‌ಲೋಕ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.[ಐವಿಎಫ್ ಅನುಗ್ರಹ: ನಟಿ ತಾರಾ ಅನುರಾಧಾ ಈಗ ತಾಯಿ]

ಡಾ. ಇಂದಿರಾ ಹಿಂದೂಜ ಮತ್ತು ಡಾ ಕುಸುಮ್ ಜವೇರಿ ಅವರ ಸಹಾಯದಿಂದ ಈ ಸಿಸೇರಿಯನ್ ನಡೆಸಲಾಯಿತು. ಐವಿಎಫ್(IVF ಎಂದರೆ ಏನು?) ಮೂಲಕ ಜನಿಸಿದ (ಪ್ರಣಾಳ ಶಿಶು) ಮಗು ಮುಂದೆ ಬೆಳೆದು ದೊಡ್ಡವಳಾಗಿ ಮಗುವಿಗೆ ಜನ್ಮ ನೀಡಲು ಸಾಧ್ಯವೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. [ವೈದ್ಯಕೀಯ ಪವಾಡ... ಈ ಪುರುಷ 2 ಮಕ್ಕಳ ತಾಯಿ!]

Mumbai’s first test tube baby Harsha becomes a mother

ಪ್ರನಾಳ ಶಿಶು ಕೂಡಾ ಸಾಧಾರಣ ಮಗುವಿನಂತೆ ಬೆಳೆದು ಮಗುವಿಗೆ ಜನ್ಮ ನೀಡಬಲ್ಲುದು ಎಂಬುದಕ್ಕೆ ಹರ್ಷಾ ಉದಾಹರಣೆ ಎಂದು ಐವಿಎಫ್ ತಜ್ಞರು ಹೇಳಿದ್ದಾರೆ. ಹರ್ಷಾ ಅವರ ಮಗು ಆರೋಗ್ಯವಾಗಿದ್ದು, 3.1 ಕೆಜಿಯಷ್ಟು ತೂಕ ಹೊಂದಿದೆ.[ಅಮೀರ್ ಖಾನ್ -ಕಿರಣ್ ದಂಪತಿಗೆ ವಿಶೇಷ ಗಂಡು ಮಗು]

'ನಾನು ದೇವರ ವರದಾನ ಎಂದರೆ ನನ್ನ ಮಗು ಕೂಡಾ ದೇವರು ಕೊಟ್ಟ ವರ' ಎಂದು ಹರ್ಷಾ ಅವರು ಟೈಮ್ಸ್ ಆಫ್ ಇಂಡಿಯಾಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.


1978ರಲ್ಲಿ ಬ್ರಿಟನ್ನಿನಲ್ಲಿ ಜನಿಸಿದ ಲೂಸಿ ಬ್ರೌನ್ ಅವರು ಮೊದಲ ಟೆಸ್ಟ್ ಟ್ಯೂಬ್ ಬೇಬಿ ಎನಿಸಿದ್ದಾರೆ. in vitro fertilisation (ಐವಿಎಫ್) ತಂತ್ರಜ್ಞಾನ ಬಳಸಿಕೊಂಡು ಸರಿ ಸುಮಾರು 5 ಮಿಲಿಯನ್ ಗೂ ಅಧಿಕ ಶಿಶುಗಳನ್ನು ಪಡೆಯಲಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವಿಶೇಷ ವಿಡಿಯೋ ನೋಡಿ:

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mumbai's first test tube baby has become a mother now. Harsha Chavda born in August, 1986, delivered a healthy baby boy on Monday.
Please Wait while comments are loading...