• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಾಮಳೆಗೆ ವಾಣಿಜ್ಯ ನಗರಿ ಮುಂಬೈ ತತ್ತರ, ರೆಡ್ ಅಲರ್ಟ್

|
Google Oneindia Kannada News

ಮುಂಬೈ, ಆ.4: ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ಎಲ್ಲೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಂಡಿವಲಿಯಲ್ಲಿ ಭೂ ಕುಸಿತ ಉಂಟಾಗಿದ್ದರೆ, ಭಾರಿ ಮಳೆಗೆ ಓರ್ವ ಮೃತಪಟ್ಟಿದ್ದಾನೆ.

ಮುಂಬೈನ ತೀರ ಪ್ರದೇಶಗಳಿಂದ ದೂರ ಇರುವಂತೆ ಎಚ್ಚರಿಕೆ ನೀಡಲಾಗಿದೆ. 4.51 ಮೀಟರ್ ಎತ್ತರದ ಭಾರಿ ಅಲೆಯನ್ನು ನಿರೀಕ್ಷಿಸಲಾಗಿದೆ. ಪಶ್ಚಿಮ ಎಕ್ಸ್ ಪ್ರೆಸ್ ಹೆದ್ದಾರಿ ಕಂಡಿವಲಿ ಸಬ್ ಅರ್ಬನ್ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ ಭೂ ಕುಸಿತ ಉಂಟಾಗಿ ವಾಹನ ಸಂಚಾರ ಕಷ್ಟವಾಗಿದೆ.

ಲೋವರ್ ಪರೇಲ್ ಪ್ರದೇಶದಲ್ಲಿ ನೀರು ನಿಂತಿದ್ದು, ಬೃಹನ್ ಮುಂಬೈ ಪಾಲಿಕೆ ವಾಹನ ಸಂಚಾರ ನಿರ್ಬಂಧಿಸಿದೆ. ಕಚೇರಿಗಳು ಬಂದ್ ಆಗಿವೆ. ಘೋದ್ಬಂದರ್ ರಸ್ತೆಯ ಓವಾಲಾ ಹನುಮಾನ್ ದೇಗುಲದಲ್ಲಿ ವಿದ್ಯುತ್ ಹರಿದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ ಎಂದು ಕಾಸರವಾಡವಲಿ ಪೊಲೀಸರು ಥಾಣೆ ಮುನ್ಸಿಪಾಲ್ ಕಾರ್ಪೊರೇಷನ್ ಗೆ ಮಾಹಿತಿ ನೀಡಿದ್ದಾರೆ.

ದಾದರ್, ಪ್ರಭಾದೇವಿ, ವಿರಾರ್- ಅಂಧೇರಿ, ಬಾಂದ್ರಾ-ಚರ್ಚ್ ಗೇಟ್ ಮಾರ್ಗದ ರೈಲು ಸಂಚಾರ ಸ್ಥಗಿತವಾಗಿದೆ. ಕಳೆದ 10 ಗಂಟೆಗಳಲ್ಲಿ 230 ಮಿಮೀ ಮಳೆ ಸುರಿದಿದ್ದು, ಮುಂಬೈ ಕರಾವಳಿ, ಕೊಂಕಣ, ಗೋವಾ, ಕರ್ನಾಟಕ ಕರಾವಳಿ ಭಾಗದಲ್ಲಿ ಮಂಗಳವಾರ ಭಾರಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

English summary
A high tide of 4.45 metres is expected at 12:47 pm in Mumbai on Tuesday, predicted the India Meteorological Department (IMD).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X