ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಆಯುಕ್ತ ಸತ್ಯಪಾಲ್ ಬಿಜೆಪಿಗೆ ಸೇರ್ಪಡೆ

By Srinath
|
Google Oneindia Kannada News

ಮುಂಬೈ, ಫೆ. 3- ಇತ್ತೀಚೆಗೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದ ಮುಂಬೈ ಮಹಾನಗರದ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಅವರು ನಿರೀಕ್ಷೆಯಂತೆ ಬಿಜೆಪಿ ಸೇರಿದ್ದಾರೆ. ಉತ್ತರ ಪ್ರದೇಶದ ಪಶ್ಚಿಮ ಭಾಗದವರಾದ ಸತ್ಯಪಾಲ್, ಆ ಭಾಗದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಕೈಬಲಪಡಿಸುವ ಅಗತ್ಯವಿದೆ. ಹಾಗಾಗಿ ಬಿಜೆಪಿ ಸೇರಿದ್ದು, ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಹಿಂದಿನ ಸುದ್ದಿ: ಮುಂಬೈ ಮಹಾನಗರದ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಈಗಾಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು ಫೆಬ್ರವರಿ ಎರಡನೆಯ ವಾರದೊಳಗೆ ತಮ್ಮನ್ನು ಸೇವೆಯಿಂದ ಮುಕ್ತಗೊಳಿಸುವಂತೆ ಕೋರಿದ್ದಾರೆ.

ಬಪ್ಪಿ ಲಹರಿ ಬಿಜೆಪಿಗೆ ಸೇರ್ಪಡೆ:

Lok Sabha polls Mumbai police commissioner Satyapal Singh resigns- May contest from BJP ticket,

ಈ ಮಧ್ಯೆ ಗಮನಾರ್ಹ ಬೆಳವಣಿಗೆಯಲ್ಲಿ ಬಾಲಿವುಡ್ ಲೋಕದ ಸಂಗೀತ ಸಾಮ್ರಾಟ್ ಬಪ್ಪಿ ಲಹರಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. 80ರ ದಶಕದಲ್ಲಿ iam a disco dancer ಎಂದು ಪಡ್ಡೆಹುಡುಗರ ನಾಲಿಗೆ ಮೇಲೆ ನಲಿದಾಡಿದ್ದ gold man ಬಪ್ಪಿ ಲಹರಿ ಇದೀಗ ಬಿಜೆಪಿ ಸಂಗೀತಕ್ಕೆ i am a BJP dancer ಎಂದು ಹೆಜ್ಜೆ ಹಾಕಲು ಸಿದ್ಧತೆ ನಡೆಸಿದ್ದಾರೆ. 62 ವರ್ಷದ ಬಪ್ಪಿಲಹರಿ ಕೋಲ್ಕೊತ್ತಾದಲ್ಲಿನ ಜನಿಸಿ, ಮುಂಬೈನಲ್ಲಿ ತಳವೂರಿದ್ದಾರೆ.

ಸತ್ಯಪಾಲ್ ಬಿಜೆಪಿಗೋ, ಆಮ್ ಆದ್ಮಿಯೋ?:

Lok Sabha polls Mumbai police commissioner Satyapal Singh resigns- May contest from BJP ticket

ಪೊಲೀಸ್ ಸೇವೆಯಿಂದ ಮುಕ್ತಿ ಪಡೆಯಲಿರುವ ಐಪಿಎಸ್ ಸತ್ಯಪಾಲ್ ಸಿಂಗ್ ಅವರು ಭಾರತೀಯ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಥವಾ ಆಮ್ ಆದ್ಮಿ ಪಕ್ಷ ಸೇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮಹಾರಾಷ್ಟ್ರ ಸರಕಾರವು ಮುಂಬೈ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ಅವರ VRS ಅರ್ಜಿಗೆ ತಕ್ಷಣವೇ ಅಸ್ತು ಅನ್ನುವ ಸಾಧ್ಯತೆಯಿದೆ. ಅಂದಹಾಗೆ ಮುಂಬೈ ಮಹಾನಗರದ ಪೊಲೀಸ್ ಆಯುಕ್ತರೊಬ್ಬರು ರಾಜೀನಾಮೆ ನೀಡುತ್ತಿರುವುದು ಇದೇ ಮೊದಲು. ನವೋತ್ಸಾಹದೊಂದಿಗೆ ದೇಶ ಸೇವೆ ಮಾಡಲು ಇಚ್ಛಿಸಿದ್ದೇನೆ ಎಂದು ತಮ್ಮ ರಾಜಕೀಯ ಆರಂಗೇಟ್ರಂ ಬಗ್ಗೆ IPS ಸತ್ಯಪಾಲ್ ಹೇಳಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಹೇಳಿರುವ IPS ಸತ್ಯಪಾಲ್ ಅವರು ಕ್ಷೇತ್ರ ಯಾವುದು ಮತ್ತು ಪಕ್ಷ ಯಾವುದು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.

ಈ ನಡುವೆ ಬಿಜೆಪಿಯ ಹಿರಿಯ ನಾಯಕರೊಬ್ಬರು IPS ಸತ್ಯಪಾಲ್ ನಡೆಯ ಬಗ್ಗೆ ಪ್ರತಿಕ್ರಿಯಿಸಿದ್ದು, ಸತ್ಯಪಾಲ್ ಸಿಂಗ್ ಅವರು ಈಗಾಗಲೇ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ಹಿಂದಿನ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದಾರೆ. ಪಕ್ಷ ಟಿಕೆಟ್ ನೀಡಿದರೆ ಅವರು ಉತ್ತರ ಪ್ರದೇಶ ಅಥವಾ ಮಹಾರಾಷ್ಟ್ರದಿಂದ ಕಣಕ್ಕಿಣಿಯಲಿದ್ದಾರೆ ಎಂದು ತಿಳಿಸಿದ್ದಾರೆ.

ಭಾನುವಾರ ಮೀರತ್ ನಲ್ಲಿ ನರೇಂದ್ರ ಮೋದಿ ಸಮಾವೇಶ ನಡೆಯಲಿದ್ದು, IPS ಸತ್ಯಪಾಲ್ ಅವರು ಆ ಸಂದರ್ಭದಲ್ಲಿ ರಾಜಕೀಯ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

English summary
Lok Sabha polls Mumbai police commissioner, IPS Satyapal Singh resigns- May contest from BJP ticket. In the meanwhile Bollywood yesteryears Disco king Bappi Lahiri has joined BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X