ಮೊಬೈಲಿನಲ್ಲಿ ಮಾತ್ನಾಡಿದ್ದಕ್ಕೆ 3ನೇ ಹೆಂಡ್ತಿ ಮುಖ ಸುಟ್ಟ

Mumbai man Ramzan tortures wife Heena for buying cell- arrested,
ಮುಂಬೈ, ನ.6: ಆಧುನಿಕ ಲೋಕದ ಸಂಪರ್ಕ ಸಾಧನವಾದ ಮೊಬೈಲ್ ಅನ್ನು ಖರೀದಿಸಿ, ತನ್ನೆದುರೇ ಮೊಬೈಲಿನಲ್ಲಿ ಮಾತನಾಡಿದುದಕ್ಕೆ ಪತಿರಾಯನೊಬ್ಬ ತನ್ನ ಹೆಂಡತಿಗೆ ಕಿರುಕುಳ ನೀಡಿ, ಆಕೆಯ ಮುಖ ಸುಟ್ಟು ಹಗೆ ಸಾಧಿಸಿದ್ದಾನೆ.

ಕುರ್ಲಾದ 23 ವರ್ಷ ಗೃಹಿಣಿ ಹೀನಾ ಸಂಖಲಾ ಮೇಲೆ ಆಕೆಯ ಎರಡರಷ್ಟು ವಯಸ್ಸಾಗಿರುವ ಪತಿರಾಯ ರಂಜಾನ್ (42) ಈ ರಂಪಾಟ ನಡೆಸಿದ್ದಾನೆ. ಅಂದಹಾಗೆ ರಂಜಾನ್ ಗೆ ಹೀನಾ ಮೂರನೆಯ ಪತ್ನಿ.

ಆಕೆಯ ಮುಖವನ್ನು ಕಾದ ಸ್ಪೂನ್ ನಿಂದ ಚುಚ್ಚಿ ಗಾಯಗೊಳಿಸಿದ್ದಾನೆ. ಅಷ್ಟೇ ಸಾಲದು ಅಂತ ಆಕೆಯ ಹಲ್ಲುಗಳನ್ನು ಕೀಳಲು ಯತ್ನಿಸಿದ್ದಾನೆ. ತಲೆಗೂದಲನ್ನು ಎಳೆದು ಕಾಟ ಕೊಟ್ಟಿದ್ದಾನೆ. ಪತಿರಾಯನ ಇಷ್ಟೆಲ್ಲಾ ರಂಪಾಟ ಏಕೆ ಅಂದರೆ ಹೆಂಡತಿ ಮೊಬೈಲಿನಲ್ಲಿ ಮಾತನಾಡುತ್ತಿದ್ದಳು ಅದಕ್ಕೆ.

ಬಾಂದ್ರಾದಲ್ಲಿರುವ ಪತಿಯ ಮನೆಯಿಂದ ಸೋಮವಾರ ಮಧ್ಯರಾತ್ರಿ ಹೊರನಡೆದ ಬಾಧಿತ ಮಹಿಳೆ, ಎದುರು ಸಿಕ್ಕಿದ ಆಟೋ ಹಿಡಿದು ಸೀದಾ ಪೊಲೀಸ್ ಠಾಣೆಗೆ ಹೋಗಿ ಪತಿರಾಯನ ವಿರುದ್ಧ ದೂರು ನೀಡಿದ್ದಾಳೆ. ಅಜ್ಮೀರದಲ್ಲಿರುವ ಆಕೆಯ ತವರು ಮನೆಯವರು ಬಂದು ಬಾಧಿತಳನ್ನು ಕರೆದುಕೊಂಡು ಹೋಗಲಿದ್ದಾರೆ. ಅಲ್ಲಿಯವರೆಗೂ ಆಕೆಯನ್ನು ಠಾಣೆಯಲ್ಲೇ ರಕ್ಷಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರು ವರ್ಷಗಳ ಹಿಂದೆ ಇವರಿಬ್ಬರ ಮದುವೆಯಾಗಿದ್ದು, ಗಂಡ ರಂಜಾನ್ ತನ್ನ ಪತ್ನಿ ಹೀನಾ ಸಂಖಲಾಗೆ ತವರಿನವರ ಜತೆ ಮಾತನಾಡುವುದಕ್ಕೂ ಅವಕಾಶ ನೀಡದೆ ಸಂಕೋಲೆ ವಿಧಿಸಿದ್ದ ಎನ್ನಲಾಗಿದೆ.

ನಾಲ್ಕು ವರ್ಷದ ಮಗನಿಗಾಗಿ ಗಂಡನ ಕಿರುಕುಳ ಸಹಿಸಿಕೊಂಡೆ. ಆದರೆ ಈಗ ನಮ್ಮ ಪ್ರಾಣಕ್ಕೆ ಸಂಚಕಾರ ಎದುರಾಗಿರುವುದರಿಂದ ಅನ್ಯ ಮಾರ್ಗ ಕಾಣದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಬಾಧಿತ ಹೀನಾ ಹೇಳಿದ್ದಾರೆ.

'ರಂಜಾನ್ ಸೋದರರು ತಮ್ಮ ಅತ್ತಿಗೆ ಮೇಲೆ ಇತ್ತೀಚೆಗೆ ಆಸಿಡ್ ಎರಚುವುದಾಗಿಯೂ ಬೆದರಿಕೆಯೊಡ್ಡಿದ್ದರಂತೆ. ಕಿರಾತಕರು ಚಿಮಟಿ ಹಿಡಿದು ನನ್ನ ಹಲ್ಲು ಕೀಳಲು ಯತ್ನಿಸಿದ್ದಾರೆ ಎಂದು ತಮ್ಮ ದೂರಿನಲ್ಲಿ ಹೀನಾ ಅಲವತ್ತುಕೊಂಡಿದ್ದಾರೆ.

ರಂಜಾನ್ ದುಬೈನಲ್ಲಿ ಹಳೆ ಕಬ್ಬಿಣ ಗುಜರಿ ವ್ಯಾಪಾರಿಯಾಗಿದ್ದು, ತಿಂಗಳಾನುಗಟ್ಟಲೆ ಮನೆಯಿಂದ ಹೊರಗಿರುತ್ತಾನೆ. ಆ ವೇಳೆ ಅವನ ಸೋದರರು ನನ್ನ ಮೇಲೆ ತಮ್ಮ ಪ್ರತಾಪ ತೋರಿಸುತ್ತಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

ಮಹಿಳೆಯ ದೂರಿಯನ್ವಯ ಪೊಲೀಸರು IPC sections 326A (causing grievous hurt by weapons or means), 498A (cruelty), 503 (criminal intimidation), and 354 (assaulting a woman) ಅನುಸಾರ ರಂಜಾನ್ ಮತ್ತು ಆತನ ಮೂವರು ಸೋದರರ ವಿರುದ್ಧ ಸೋಮವಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. (ಚಿತ್ರ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+