ಮುಂಬೈನಲ್ಲಿ ಉಬರ್ ಸೇವೆಗೆ ಸಮ್ಮತಿ: ಆಕಾಶದಲ್ಲಿ ಕರೆದೊಯ್ಯಲಿದೆ ಡ್ರೋಣ್ ಟ್ಯಾಕ್ಸಿ

ಮುಂಬೈ, ಅಕ್ಟೋಬರ್ 12: ಮುಂಬೈ ಮಹಾನಗರಿಯ ರಸ್ತೆಗಳ 'ಮೇಲೆ' ಟ್ಯಾಕ್ಸಿಗಳು ಓಡಾಡಲಿವೆ. ಅಲ್ಲಲ್ಲ, ಹಾರಾಡಲಿವೆ!

ಇದೇನು ಈಗಲೂ ರಸ್ತೆ ಮೇಲೆ ತಾನೆ ಟ್ಯಾಕ್ಸಿಗಳು ಓಡಾಡುವುದು ಎಂಬ ಪ್ರಶ್ನೆ ಮೂಡಬಹುದು. ಆದರೆ, ಈ ಟ್ಯಾಕ್ಸಿಗಳಿಗೆ ರಸ್ತೆಯೇ ಬೇಕಿಲ್ಲ. ಹತ್ತಲು, ಇಳಿಯಲು ಜಾಗವಿದ್ದರೆ ಸಾಕು. ಮತ್ತೆ ಓಡಾಡಕ್ಕೇನಿದ್ದರೂ ಆಗಸವೇ ಸಾಕು.

ಹೌದು. ದೇಶದ ಮೊಟ್ಟ ಮೊದಲ ಡ್ರೋಣ್ ಟ್ಯಾಕ್ಸಿ ಸೌಲಭ್ಯ ಮಹಾರಾಷ್ಟ್ರದಲ್ಲಿ ಆರಂಭವಾಗಲಿವೆ. ಮುಂಬೈನಲ್ಲಿ ಈ ಸೇವೆ ಒದಗಿಸುವ ಕೇಂದ್ರ ಸರ್ಕಾರ ಯೋಜನೆಯ ಕೆಲವು ಹೆಚ್ಚುವರಿ ನಿಯಮಾವಳಿಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

mumbai maharashtra drone taxi service city traffic

ಕಳೆದ ಆಗಸ್ಟ್‌ನಲ್ಲಿ ಮುಖ್ಯಮಂತ್ರು ದೇವೇಂದ್ರ ಫಡ್ನವೀಸ್ ಅವರಿಗೆ ಈ ಯೋಜನೆಯ ವಿವರ ನೀಡಿದ್ದ ನಾಗರಿಕ ವಿಮಾನಯಾನ ಸಚಿವಾಲಯ, ಡ್ರೋಣ್ ಟ್ಯಾಕ್ಸಿ ನೀತಿಯ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿತ್ತು.

ಡ್ರೋಣ್ ಟ್ಯಾಕ್ಸಿಯ ಎತ್ತರ, ಹಾರಾಟದ ಎತ್ತರದ ಮಿತಿ, ಓಡಾಟದ ಸ್ಥಳ, ಅದರ ಬ್ಯಾಟರಿ ಚಾರ್ಜಿಂಗ್ ಸ್ಟೇಷನ್‌ಗಳು ಮುಂತಾದವುಗಳ ನೀತಿಯ ಬಗ್ಗೆ ವರದಿ ಕೇಳಲಾಗಿತ್ತು. ಅಲ್ಲದೆ, ಪ್ರಯಾಣಿಕರು, ಸರಕು, ಔಷಧ ಸಾಗಾಣಿಕೆ ಸೇರಿದಂತೆ ಇತರೆ ಸೌಲಭ್ಯಗಳ ಕುರಿತು ಸಹ ಮಾಹಿತಿ ಬಯಸಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬೈ, ಬೆಂಗಳೂರು ಮತ್ತು ದೆಹಲಿಯಂತಹ ವಿಪರೀತ ಸಂಚಾರ ದಟ್ಟಣೆಯ ನಗರಗಳಲ್ಲಿನ ಸಂಕಟವನ್ನು ತಗ್ಗಿಸಲು ಡ್ರೋಣ್ ಟ್ಯಾಕ್ಸಿ ತರುವ ಯೋಜನೆಯನ್ನು ಉಬರ್ ಪ್ರಕಟಿಸಿತ್ತು.

mumbai maharashtra drone taxi service city traffic

'ಮುಂಬೈ, ದೆಹಲಿ ಮತ್ತು ಬೆಂಗಳೂರು ಜಗತ್ತಿನ ಅತ್ಯಂತ ಇಕ್ಕಟ್ಟಾದ ನಗರಗಳಾಗಿವೆ. ಇಲ್ಲಿ ಕೆಲವು ಕಿ.ಮೀ ತೆರಳಲು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಈ ಇಕ್ಕಟ್ಟಿಗೆ ಮತ್ತಷ್ಟು ವಾಹನಗಳನ್ನು ಸೇರಿಸುವ ಬದಲು, ಅದರ ಮೇಲೆ ಸಾರಿಗೆ ವ್ಯವಸ್ಥೆ ಸೃಷ್ಟಿಸಲು ಉಬರ್ ಏರ್ ಸಾಕಷ್ಟು ನೆರವು ನೀಡಲಿದೆ ಎಂದು ಸಂಸ್ಥೆ ಇತ್ತೀಚೆಗೆ ಘೋಷಿಸಿತ್ತು.

ಡ್ರೋಣ್ ಟ್ಯಾಕ್ಸಿಗಳ ಹಾರಾಟಕ್ಕೆ ಹೆಲಿಕಾಪ್ಟರ್ ಲ್ಯಾಂಡಿಂಗ್ ಪ್ಯಾಡ್‌ಗಳನ್ನು ಬಳಸಲು ಅವಕಾಶ ನೀಡುವಂತೆ ಮುಂಬೈ ನಗರದ ಹೊಸ ಅಭಿವೃದ್ಧಿ ಯೋಜನೆ ಮುಂದಿಟ್ಟಿತ್ತು.

ಮಹಾರಾಷ್ಟ್ರದ ನೂತನ ಅಭಿವೃದ್ಧಿ ಯೋಜನೆ 2034, 200 ಮೀಟರ್‌ಗಿಂತ ಹೆಚ್ಚಿನ ಎತ್ತರದ ನಿಯಮ ಮೀರದ ಯಾವುದೇ ಕಟ್ಟಡದಲ್ಲಿ ಹೆಲಿಪ್ಯಾಡ್ ಅಥವಾ ಲ್ಯಾಂಡಿಂಗ್ ಸೌಲಭ್ಯಗಳನ್ನು ನೀಡಬಹುದಾಗಿದೆ. ಸಣ್ಣ ಕಟ್ಟಡಗಳಲ್ಲಿ ಎರಡು ಸೀಟ್‌ನ ಡ್ರೋನರ್‌ಗಳಿಗೆ ಅವಕಾಶ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+