ಮಹಾರಾಷ್ಟ್ರದಲ್ಲೂ ಎದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು
ಮುಂಬೈ, ಮಾರ್ಚ್ 23: ಕರ್ನಾಟಕದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿಗೆ ಸದ್ಯಕ್ಕೆ ಒಂದು ತಾರ್ಕಿಕ ಅಂತ್ಯ ದೊರೆತಿದೆ. ಆದರೆ ಇದೇ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗು ಇದೀಗ ಮಹಾರಾಷ್ಟ್ರದಲ್ಲೂ ಸದ್ದುಮಾಡುತ್ತಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಲಿಂಗಾಯತ ಸಮುದಾಯವನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸಿ, ಸಾಂವಿಧಾನಿಕ ಸ್ಥಾನಮಾನ ನೀಡುವ ಬೇಡಿಕೆ ಮಹಾರಾಷ್ಟ್ರದಲ್ಲು ಎದ್ದಿದೆ. ಈ ಸಂಬಂಧ ಮಹಾರಾಷ್ಟ್ರದಲ್ಲಿರುವ ಲಿಂಗಾಯತ ಸುಮದಾಯದ ಜನರು, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದಲ್ಲಿ ಮಹಾಮೋರ್ಚಾ ಆರಂಭಿಸುವುದಾಗಿ ಹೇಳಿದ್ದಾರೆ.
ಇಲ್ಲಿನ ಸೋಲಾಪುರ, ನಾಂದೇಶ್, ಓಸ್ಮಾನಾಬಾದ್ ಮತ್ತು ಲಾತೂರ್ ಗಳಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಲಿಂಗಾಯತ ಸಮುದಾಯದವರಿದ್ದಾರೆ. ನೆರೆಯ ಕರ್ನಾಟಕದಲ್ಲಿ ಲಿಂಗಾಯತವನ್ನು ಪ್ರತ್ಯೇಕ ಧರ್ಮ ಎಂದು ಪರಿಗಣಿಸಬೇಕೆಂಬ ನ್ಯಾ.ನಾಗಮೋಹನ್ ದಾಸ್ ವರದಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು ಮಹಾರಾಷ್ಟ್ರದ ಲಿಂಗಾಯತರಿಗೆ ಸ್ಫೂರ್ತಿ ನೀಡೀದಂತಾಗಿದೆ.

ಸದ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಈ ಕುರಿತು ಶಿಫಾರಸ್ಸು ಮಾಡಿರುವ ಕರ್ನಾಟಕದ ನಡೆಯನ್ನೇ ಮಹಾರಾಷ್ಟ್ರ ಸರ್ಕಾರವೂ ಪಾಲಿಸಬೇಕು ಎಂಬುದು ಇವರ ಬೇಡಿಕೆ.












Click it and Unblock the Notifications