ಮುಂಬೈಯಲ್ಲಿ ಮತ್ತೆ ಅಗ್ನಿ ದುರಂತ: 4 ಸಾವು, 7 ಜನರಿಗೆ ಗಾಯ
ಮುಂಬೈ, ಜನವರಿ 04: ಮುಂಬೈನ ಕಮಲ್ ಮಿಲ್ಸ್ ಹೊಟೇಲ್ ಅಗ್ನಿ ದುರಂತ ಮಾಸುವ ಮುನ್ನವೇ ಮತ್ತೊಂದು ಅಗ್ನಿ ದುರಂತಕ್ಕೆ ಮುಂಬೈನ ಮೈಮೂನ್ ಕಟ್ಟಡ ಸಾಕ್ಷಿಯಾಗಿದೆ.
ಜ.3ರ ತಡರಾತ್ರಿ ಮುಂಬೈನ ಮಾರೋಲ್ ನ ಮೈಮೂನ್ ಕಟ್ಟಡದಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ 4 ಜನ ದಾರುಣ ಅಂತ್ಯಕಂಡಿದ್ದಾರೆ. 7 ಜನ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 7 ಜನರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಹೊಸ ವರ್ಷಾರಂಭಕ್ಕೂ ನಾಲ್ಕು ದಿನ ಮೊದಲು ಮುಂಬೈನ ಕಮಲ್ ಮಿಲ್ಸ್ ಕಾಂಪೌಂಡ್ ಹೊಟೇಲ್ ನಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ14 ಜನ ಅಸುನೀಗಿದ್ದರಲ್ಲದೆ, 16 ಜನ ಗಂಭೀರ ಗಾಯಗೊಂಡಿದ್ದರು. ವಾಣಿಜ್ಯ ನಗರಯಲ್ಲಿ ಪದೇ ಪದೇ ಸಂಭವಿಸಿತ್ತಿರುವ ಈ ಅಗ್ನಿ ದುರಂತಗಳು ಇಲ್ಲಿನ ಜನರ ನೆಮ್ಮದಿ ಕಸಿಯುತ್ತಿದೆ.












Click it and Unblock the Notifications